-ಧರ್ಮಸ್ಥಳ ಕ್ಷೇತ್ರಕ್ಕೆ ಅಪಮಾನ ಮಾಡಿರೋರನ್ನ ಜೈಲಿಗೆ ಹಾಕಬೇಕು
ಬೆಂಗಳೂರು: ಚಡ್ಡಿ ಹಾಕುತ್ತಿದ್ದಾಗ ಇದ್ದ ಆರ್‌ಎಸ್‌ಎಸ್ (RSS) ಈಗ ಬಿಜೆಪಿ ಪುಡಾರಿಗಳು ಬಂದ ಮೇಲೆ ಬದಲಾವಣೆ ಆಗಿದೆ ಅಂತ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ (Belur Gopalakrishna) ಆರ್‌ಎಸ್‌ಎಸ್ ಮತ್ತು ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಓ ಅಮಾನತಿಗೆ KAT ತಡೆ ನೀಡಿದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಹಜವಾಗಿ ಸರ್ಕಾರಿ ಅಧಿಕಾರಗಳು ಹೀಗೆ ಭಾಗವಹಿಸಿ ಗೊಂದಲ ಸೃಷ್ಟಿ ಮಾಡಬಾರದು. ಇಂತಹದ್ರಲ್ಲಿ ಭಾಗಿಯಾಗದೇ ಸುಮ್ಮನೆ ಇರಬೇಕು. ಕೋರ್ಟ್ ಆದೇಶಕ್ಕೆ ನಾವು ತಲೆ ಬಾಗಬೇಕಾಗಿದೆ ಎಂದರು. ಇದನ್ನೂ ಓದಿ: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ವಯನಾಡು ಪ್ರಮೋಷನ್: ಸರ್ಕಾರದ ವಿರುದ್ಧ ಬಿಜೆಪಿ ಕಿಡಿ
ಇವತ್ತಿನ ಆರ್‌ಎಸ್‌ಎಸ್ ಬದಲಾವಣೆ ಆಗಿದೆ. ಮೊದಲು ಚಡ್ಡಿ ಹಾಕುತ್ತಿದ್ದ ಆರ್‌ಎಸ್‌ಎಸ್ ಈಗ ಇಲ್ಲ. ಬಿಜೆಪಿಯ ಪುಡಾರಿಗಳು ಆರ್‌ಎಸ್‌ಎಸ್‌ಗೆ ಬಂದು ಆರ್‌ಎಸ್‌ಎಸ್ ಬದಲಾವಣೆ ಆಗಿದೆ. ಚಡ್ಡಿ ಹಾಕುತ್ತಿದ್ದ ಆರ್‌ಎಸ್‌ಎಸ್ ಪ್ಯಾಂಟ್ ಬಂದ ಮೇಲೆ ಬದಲಾವಣೆ ಆಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಚಿತ್ತಾಪುರ RSS ಪಥಸಂಚಲನ ವಿವಾದ – ನ.5ಕ್ಕೆ ಬೆಂಗಳೂರಲ್ಲಿ ಶಾಂತಿಸಭೆ, ನ.7ಕ್ಕೆ ಮತ್ತೆ ವಿಚಾರಣೆ
ಯಾವುದೇ ಸಂಸ್ಥೆ ಕಾರ್ಯಕ್ರಮ ಮಾಡಬೇಕಾದರೆ ಪರ್ಮಿಷನ್ ತೆಗೆದುಕೊಳ್ಳಬೇಕು ಅಂತ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಇದರಲ್ಲಿ ತಪ್ಪೇನು ಇಲ್ಲ. ಶಾಲಾ ಆವರಣದಲ್ಲಿ ಇಂತಹ ಕಾರ್ಯಕ್ರಮಕ್ಕೆ ಅನುಮತಿ ಕೊಡಬಾರದು. ಈಗ ಕೋರ್ಟ್ ಆದೇಶ ಮಾಡಿದೆ, ನಾವು ಪಾಲನೆ ಮಾಡುತ್ತೇವೆ. ಆದರೆ ಮುಂದೆ ಹೀಗೆ ಅನೇಕರು ಬಂದು ಕಾರ್ಯಕ್ರಮ ಮಾಡುತ್ತೇವೆ ಅಂದರೆ ಸಮಸ್ಯೆ ಆಗುತ್ತದೆ. ಶಾಲೆಗಳಲ್ಲಿ ಕಾರ್ಯಕ್ರಮ ಮಾಡಲು ಅವಕಾಶ ಕೊಡಬಾರದು ಎಂದು ತಿಳಿಸಿದರು. ಇದನ್ನೂ ಓದಿ: ಚೀನಾ ಮೇಲಿನ ಟ್ಯಾರಿಫ್ ಶೇ. 57ರಿಂದ 47ಕ್ಕೆ ಇಳಿಸಿದ ಟ್ರಂಪ್
ಇನ್ನು ಧರ್ಮಸ್ಥಳ ಕೇಸ್‌ನಲ್ಲಿ ಬುರುಡೆ ಗ್ಯಾಂಗ್‌ನಿಂದ ಕೇಸ್ ವಾಪಸ್‌ಗೆ ಅರ್ಜಿ ಹಾಕಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಧರ್ಮಸ್ಥಳದ ಕೇಸ್ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಇದು ಸಾಮಾನ್ಯ ವಿಚಾರ ಅಲ್ಲ. ದುಷ್ಟ ಶಕ್ತಿ ಸೇರಿಕೊಂಡು ದೇವಸ್ಥಾನಕ್ಕೆ ಹಾನಿ ಮಾಡಿದ್ದವು. ಅದರಂತೆ ಎಸ್‌ಐಟಿ ರಚನೆ ಮಾಡಲಾಗಿತ್ತು. ಈಗ ರಿಪೋರ್ಟ್ ನೋಡಿ ಮುಂದಿನ ತೀರ್ಮಾನ ಅಂತ ಹೋಮ್ ಮಿನಿಸ್ಟರ್ ಹೇಳಿದ್ದಾರೆ. ಆದರೆ ಈ ವಿಷ್ಯದಲ್ಲಿ ಯಾರು ಶಾಮೀಲು ಆಗಿದ್ದಾರೆ ಅವರನ್ನು ಜೈಲಿಗೆ ಕಳುಹಿಸಬೇಕು ಎಂದರು. ಇದನ್ನೂ ಓದಿ: ಬಿಜೆಪಿಯವರಿಗೆ ದುರ್ಬುದ್ಧಿ – ವಯನಾಡ್ ಪ್ರಿಯಾಂಕಾ ಗಾಂಧಿ ಕ್ಷೇತ್ರ ಅಂತ ಆರೋಪ ಮಾಡ್ತಿದ್ದಾರೆ: ರಾಮಲಿಂಗಾರೆಡ್ಡಿ
ಬುರುಡೆ ಗ್ಯಾಂಗ್ ಕೇಸ್ ಮರಳಿ ಪಡೆಯೋ ಪ್ರಶ್ನೆಯೇ ಇಲ್ಲ. ಯಾರು ಧರ್ಮಸ್ಥಳಕ್ಕೆ ಅಪಮಾನ ಮಾಡಿದ್ರೋ ಅವರಿಗೆ ಶಿಕ್ಷೆ ಕೊಡಿಸೋ ಕೆಲಸ ಆಗಬೇಕು. ನಮ್ಮ ಸರ್ಕಾರ ಅದನ್ನ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಕಾರು ಡಿಕ್ಕಿ – ಅಪ್ರಾಪ್ತ ಚಾಲಕನಿಗೆ ಸ್ಥಳೀಯರಿಂದ ಧರ್ಮದೇಟು

