ಕೊಪ್ಪಳ: ಆ ಸಚಿವರು ಮಾತೆತ್ತಿದರೆ ಸಾಕು ನಾನು ಪ್ರಾಮಾಣಿಕ, ನನ್ನ ಕ್ಷೇತ್ರದ ಯಾವುದೇ ಕಾಮಗಾರಿಯಲ್ಲಿ ಕಳಪೆ ಎನ್ನುವ ಮಾತೇ ಇಲ್ಲ ಎಂದು ಬೊಬ್ಬೆ ಹೊಡೆಯುತ್ತಾನೆ. ಆದರೆ ಇದೀಗ ಆತನದ್ದೇ ಸ್ವಕ್ಷೇತ್ರದಲ್ಲಿ ಇದೀಗ ರಸ್ತೆ ಕಾಮಗಾರಿ ಕಳಪೆಯಾಗಿದೆ. ಕೈಯಿಂದ ಅಗೆದರೆ ಸಾಕು ಡಾಂಬಾರ್ ಕಿತ್ತು ಬರುತ್ತಿದೆ.
Advertisement
ಹೌದು, ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದಷ್ಟೇ ಮಾಡಿರುವ ಡಾಂಬಾರ್ ರಸ್ತೆ (Road) ಕಿತ್ತು ಹೋಗಿದೆ. ಕುದರಿಮೋತಿ ಗ್ರಾಮದಿಂದ ಚಂಡಿಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, 1 ಕೋಟಿ 20 ಲಕ್ಷ ವೆಚ್ಚದಲ್ಲಿ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಕಳಪೆ ಗುಣಮಟ್ಟದಿಂದ ರಸ್ತೆ ನಿರ್ಮಾಣ ಮಾಡಿದ್ದರ ಕಾರಣಕ್ಕಾಗಿ ಇದೀಗ ಇಡೀ ರಸ್ತೆ ಸಂಪೂರ್ಣವಾಗಿ ಕಿತ್ತು ಬರುತ್ತಿದೆ. ಕೈ ಹಾಕಿ ಅಗೆದರೆ ಸಾಕು ಡಾಂಬಾರ್ ಕಿತ್ತುಕೊಂಡು ಬರುತ್ತಿದೆ.
Advertisement
Advertisement
ಶಾಸಕ ಹಾಗೂ ಸಚಿವ ಹಾಲಪ್ಪ ಆಚಾರ್ (Halappa Achar) ಕ್ಷೇತ್ರದಲ್ಲೇ ಕಳಪೆ ಕಾಮಗಾರಿ ಆಗಿದ್ದು, ಅಧಿಕಾರಿಗಳಿಗೆ ಜನ ಛೀಮಾರಿ ಹಾಕ್ತಿದ್ದಾರೆ. ಈ ಕಳಪೆ ರಸ್ತೆಯನ್ನು ಮಾಡಿದ್ದು ಸ್ವತಃ ಸಚಿವರ ಸಂಬಂಧಿಕರಾದ ಬಾಪುಗೌಡ (Bapu Gowda) ಅನ್ನೋರು ಎನ್ನಲಾಗ್ತಿದೆ. ರಸ್ತೆ ಕಳಪೆ ಕಾಮಗಾರಿ ಬಗ್ಗೆ ಗ್ರಾಮಸ್ಥರು ಕೇಳಿದ್ರೆ ಗುತ್ತಿಗೆದಾರ ಬಾಪುಗೌಡ ಧಮ್ಕಿ ಹಾಕಿದ್ದಾನಂತೆ. ಅಲ್ಲದೇ ಪೊಲೀಸರಿಂದಲೂ ಧಮ್ಕಿ ಹಾಕಿಸಿದ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಬಾವ್ಲಾ ರ‍್ಯಾಲಿ ವೇಳೆ ಮೋದಿಗೆ ಭದ್ರತಾ ಲೋಪ – ನಿಯಮ ಉಲ್ಲಂಘಿಸಿ ಡ್ರೋನ್ ಹಾರಿಸಿದ ಮೂವರು ವಶಕ್ಕೆ
Advertisement
ಇನ್ನಾದರೂ ಸಚಿವ ಹಾಲಪ್ಪ ಆಚಾರ್ ಕ್ರಮಕೈಗೊಳ್ಳಬೇಕಿದೆ. ಕುದರಿಮೋತಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಕಳಪೆ ಕಾಮಗಾರಿ ರಸ್ತೆಯನ್ನು ಉತ್ತಮ ಗುಣಮಟ್ಟದ ರಸ್ತೆಯನ್ನಾಗಿ ಪುನರ್ ನಿರ್ಮಾಣ ಮಾಡಬೇಕಿದೆ.