ಪ್ರತಿನಿತ್ಯ ಎದ್ದ ಕೂಡಲೇ ನಾವು ಮೊದಲು ಮಾಡುವ ಕೆಲಸವೇ ಹಲ್ಲುಜ್ಜುವುದು. ಹೆಚ್ಚಿನವರು ದಿನಕ್ಕೆ ಎರಡು ಬಾರಿ ಹಲ್ಲುಜ್ಜುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಹಲ್ಲುಜ್ಜಿದ ನಂತರ ಯಾವುದೋ ಬ್ರಶ್ ಸ್ಟ್ಯಾಂಡ್‍ನಲ್ಲಿ ಇಟ್ಟು ಮರುದಿನ ಬೆಳಗ್ಗೆ ಅದನ್ನು ಉಪಯೋಗಿಸುವವರೆಗೂ ಅದರ ಬಗ್ಗೆ ಗಮನಕೊಡುವುದಿಲ್ಲ. ಬ್ರಶ್ ರಕ್ಷಣೆ ಮಾಡಬೇಕು ಅಂದರೆ ಅಯ್ಯೋ ನಮ್ಮ ಬ್ರಶನ್ನು ಬೇರೆ ಯಾರು ಉಪಯೋಗಿಸುತ್ತಾರೆ ಬಿಡಿ ಎಂಬ ಮಾತುಗಳು ಸರ್ವೇಸಾಮಾನ್ಯ. ನಾವು ಹಲ್ಲುಜ್ಜಿ ಇಟ್ಟಂತಹ ಬ್ರಶ್‍ಗಳನ್ನು ನಮಗೆ ತಿಳಿಯದೇ ದಿನನಿತ್ಯ ಬೇರೆ ಯಾರೋ ಬಳಕೆ ಮಾಡುತ್ತಿರುತ್ತಾರೆ ಎಂದರೆ ನಮಗೆ ಆಶ್ಚರ್ಯ ಸಹಜ.
Advertisement
ಹೌದು, ರಾತ್ರಿಯಾದರೆ ಲಗ್ಗೆಯಿಡುವ ಕ್ರಿಮಿಕೀಟಗಳು ನಮ್ಮ ಟೂತ್‍ಬ್ರಶನ್ನು ದಾಳಿ ಮಾಡುತ್ತವೆ. ಬಳಸಿ ಇಡುವಂತಹ ಟೂತ್ ಬ್ರಶ್‍ಗಳಲ್ಲಿ ಸೂಕ್ಷ್ಮ ಕ್ರಿಮಿಗಳು, ವೈರಸ್‍ಗಳು ಹಾಗೂ ಬ್ಯಾಕ್ಟೀರಿಯಾಗಳಿರುತ್ತವೆ. ಇವು ಸೋಂಕನ್ನು ಉಂಟುಮಾಡುತ್ತವೆ. ನಿತ್ಯಬಳಕೆಯ ಟೂತ್‍ಬ್ರಶ್‍ಗಳಲ್ಲಿ ಅನೇಕ ಕ್ರಿಮಿಕೀಟಗಳು ಶೇಖರಣೆಯಾಗುತ್ತವೆ. ಇವು ಅಪಾಯಕಾರಿ. ಹಲ್ಲುಜ್ಜುವ ಮುನ್ನ ಹಾಗೂ ಹಲ್ಲುಜ್ಜಿದ ನಂತರ ಅವುಗಳನ್ನು ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿದರೆ ಒಳ್ಳೆಯದು.
Advertisement
ಹಲ್ಲುಜ್ಜುವ ಬ್ರಶ್‍ಗಳನ್ನು ಬಳಸುವುದು ಎಷ್ಟು ಮುಖ್ಯವೋ ಅದನ್ನು ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಬಳಸಿದ ಬ್ರಶ್ ಅನ್ನು ಹಲವರು ವಾಶ್‍ಬೇಸನ್‍ನ ಮೇಲೆ ಇಡುತ್ತಾರೆ ಅಥವಾ ಮೆಡಿಕಲ್ ಕಪಾಟಿನೊಳಗೆ ಇಡುತ್ತಾರೆ. ಹೀಗೆ ಮಾಡುವುದರಿಂದ ನೀವು ಬ್ರಶ್‍ಗಳನ್ನಷ್ಟೇ ಕಾಪಾಡಬಹುದು. ಆದರೆ ಕ್ರಿಮಿಕೀಟಾಣುಗಳಿಂದ ಹೇಗೆ ರಕ್ಷಿಸುತ್ತೀರಿ?
Advertisement
ನಮಗೆಲ್ಲ ತಿಳಿದಿರುವಂತೆ ಶೌಚಾಲಯದಲ್ಲಿ ಕಾಯಿಲೆ ಉಂಟು ಮಾಡುವಂತಹ ಅನೇಕ ಸೂಕ್ಷ್ಮಾಣು ಜೀವಿಗಳು ಸಂಗ್ರಹವಾಗಿರುತ್ತವೆ. ಅಲ್ಲೇ ನಾವು ಟೂತ್‍ಬ್ರಶ್ ಇಟ್ಟರೆ ಲಕ್ಷಾಂತರ ಸೂಕ್ಷ್ಮಜೀವಿಗಳು ನಮ್ಮ ಬ್ರಶ್‍ಗಳ ಮೇಲೂ ಕೂರುತ್ತವೆ. ಮರುದಿನ ನಮಗೆ ತಿಳಿಯದಂತೆ ಆ ಸೂಕ್ಷ್ಮಾಣುಗಳು ನಮ್ಮ ಬಾಯಿಯೊಳಗೆ ನೇರವಾಗಿ ಹೋಗುತ್ತವೆ.
Advertisement
ಸೂಕ್ತ ಸ್ಥಳ ಯಾವುದು?
ಸಾಮಾನ್ಯವಾಗಿ ನಾವು ವಾಸಿಸುವ ಎಲ್ಲಾ ಸ್ಥಳಗಳಲ್ಲೂ ಸುಕ್ಷ್ಮಾಣುಗಳು ವಾಸಿಸುತ್ತಲೆ ಇರುತ್ತವೆ. ಆದರೆ ನಿಮ್ಮ ಟೂತ್ ಬ್ರಶ್‍ಗಳನ್ನು ಇಡಲು ಸ್ನಾನದ ಕೋಣೆ ಸೂಕ್ತವಲ್ಲ. ಒಂದು ವೇಳೆ ಸ್ನಾನದ ಕೋಣೆಯಲ್ಲಿಟ್ಟರೆ ನಾವೇ ಟಾಯ್ಲೆಟ್ ಪ್ಲೂಮ್ ನಂತಹ ಸೂಕ್ಷ್ಮಾಣುಗಳಿಗೆ ಆಹ್ವಾನ ಕೊಟ್ಟಂತೆ. ನಮ್ಮೊಳಗೆ ಸೂಕ್ಷ್ಮಾಣುಗಳು ಎಷ್ಟು ಸೇರಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಶೌಚಾಲಯದ ಬಳಿಯೇ ನಿಮ್ಮ ಟೂತ್‍ಬ್ರಶ್‍ಗಳಿದ್ದರೆ ಖಂಡಿತಾ ಅಪಾಯಕಾರಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತವೆ.
1. ಯಾವಾಗಲು ಬ್ರಶ್‍ಗಳನ್ನು ಬಳಕೆಯ ಮೊದಲು ಒಣಗುವಂತಹ ಜಾಗದಲ್ಲಿ ಇಡಬೇಕು.
2. ಮಲಗುವ ಕೋಣೆಯಲ್ಲಿ ಸ್ಟ್ಯಾಂಡ್ ಅಳವಡಿಸಿ ಶೇಖರಿಸಬಹುದು.
3. ಸದಾ ಗಾಳಿ ಬೆಳಕು ಬರುವ ತೆರೆದ ಜಾಗದಲ್ಲಿ ಇಡಬಹುದು.
4. ಯಾವಾಗಲೂ ಮನೆ ಮಂದಿಯೆಲ್ಲರ ಬ್ರಶ್‍ಗಳನ್ನು ಒಟ್ಟಿಗೆ ಇಡುತ್ತೇವೆ ಇದು ತಪ್ಪು. ನಿಮ್ಮ ಬ್ರಶ್ ಗಳನ್ನು ಬೇರೆ ಬ್ರಶ್‍ಗಳಿಂದ ದೂರವಿಡಿ.
5. ಶೌಚಾಲಯ ಅಥವಾ ಸಿಂಕ್ ಬಳಿ ಇಡುವುದನ್ನು ನಿಯಂತ್ರಿಸಿ.
6. ಶೌಚಾಲಯ ಶುಚಿಗೊಳಿಸುವ ಆ್ಯಸಿಡ್, ಫಿನಾಯಿಲ್ ಗಳಿಂದ ದೂರವಿಡಿ.
ಟೂತ್‍ಬ್ರಶ್‍ಗಳ ರಕ್ಷಣೆ:
1. ಬ್ರಶ್‍ಗಳನ್ನು ಬಳಸಬೇಕಾದರೆ ಒಂದು ಕಪ್ ನೀರಿಗೆ ಒಂದು ಚಮಚ ಹೈಡ್ರೋಜನ್ ಪೆರಾಕ್ಸೈಡ್ ಹಾಕಿಕೊಂಡು ಅದರಲ್ಲಿ 30 ಸೆಕೆಂಡುಗಳ ಕಾಲ ಮುಳುಗಿಸಿಡಿ. ನಂತರ ಬ್ರಶ್ ಅನ್ನು ಬಿಸಿ ನೀರಿನಿಂದ ತೊಳೆಯಿರಿ.
2. ಹೈಡ್ರೋಜನ್ ಪರಾಕ್ಸೈಡ್ ಇಲ್ಲವಾದರೆ ಮೌತ್‍ವಾಶ್‍ಗಳನ್ನು ಬಳಸಬಹುದು.
3. ಬ್ರಶನ್ನು ಸ್ವಚ್ಛಗೊಳಿಸಲು ಸ್ವಲ್ಪ ವಿನೇಗರ್ ಬಳಸಬಹುದು.
4. ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಟೂತ್‍ಬ್ರಶ್ ಬದಲಿಸುವುದು ಒಳ್ಳೆಯದು.
5. ಬ್ರಶ್ ಮುಂಭಾಗವನ್ನು ರಕ್ಷಿಸುವಂತಹ ಕ್ಯಾಪ್‍ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಈ ಎಲ್ಲಾ ವಿಧಾನಗಳಿಂದ ಟೂತ್ ಬ್ರಶ್ ಗಳನ್ನು ರಕ್ಷಿಸಬಹುದು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]