ಬಳ್ಳಾರಿ: ದ್ವಿಚಕ್ರ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ರಾಮಸಾಗರ ಸಮೀಪದಲ್ಲಿ ನಡೆದಿದೆ.
ಕಂಪ್ಲಿಯ ಸತ್ಯನಾರಾಯಣಪೇಟೆಯ ಶಶಿಧರ (29) ಮೃತ ಬೈಕ್ ಸವಾರ. ಶಶಿಧರ ಕಂಪ್ಲಿಯ ವಿಕಾಸ್ ಬ್ಯಾಂಕಿನಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಹಿಂಬದಿ ಸವಾರ ಮಹೇಶ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಮೃತ ಶಶಿಧರ ಹಾಗೂ ಹಿಂಬದಿ ಸವಾರ ಮಹೇಶ ಹೊಸಪೇಟೆಯಿಂದ ಕಂಪ್ಲಿಗೆ ಬೈಕ್‍ನಲ್ಲಿ ಬರುವ ವೇಳೆ ಘಟನೆ ನಡೆದಿದೆ. ಅತಿ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಅದೃಷ್ಟವಶಾತ್ ಹಿಂಬದಿಯ ಸವಾರ ಮಹೇಶ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಕಂಪ್ಲಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.