ಮಾನ್ಯತಾ ರೆಸಿಡೆನ್ಸಿ ಸರ್ಕಲ್‌ಗೆ ಶಿವರಾಜ್‌ಕುಮಾರ್ ಹೆಸರಿಟ್ಟ ನಿವಾಸಿಗಳು

Public TV
1 Min Read
SHIVARAJKUMAR

ಭಿಮಾನಿಗಳ ಅಚ್ಚುಮೆಚ್ಚಿನ ನಟ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅವರಿಗೆ ಜುಲೈ 12ಕ್ಕೆ ಹುಟ್ಟುಹಬ್ಬದ ಸಂಭ್ರಮ. ಅಪ್ಪು ನಿಧನದ ನೋವಿನಲ್ಲಿರುವ ಶಿವಣ್ಣ ಈ ವರ್ಷವೂ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿಕೊಳ್ಳುವುದಿಲ್ಲ. ಆದರೆ ಅಭಿಮಾನಿಗಳು ಹೊಸ ರೀತಿಯಲ್ಲಿ ಯೋಜನೆ ಹಾಕಿಕೊಂಡಿದ್ದಾರೆ. ಮಾನ್ಯತಾ ಸರ್ಕಲ್‌ಗೆ ಶಿವಣ್ಣ ಹೆಸರು ಇಡಲು ನಿವಾಸಿಗಳು ತೀರ್ಮಾನಿಸಿದ್ದಾರೆ.

shivarajkumarನಟ ಶಿವಣ್ಣಗೆ ಜುಲೈ 12ಕ್ಕೆ, 60ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಶುಭ ಸಂದರ್ಭದಲ್ಲಿ ಶಿವಣ್ಣ ನೆಲೆಸಿರುವ ಮಾನ್ಯತಾ ರೆಸಿಡೆನ್ಸಿ ಸರ್ಕಲ್‌ಗೆ ಶಿವರಾಜ್‌ಕುಮಾರ್ ಹೆಸರನ್ನ ನಿವಾಸಿಗಳು ಇಡಲು ನಿರ್ಧರಿಸಿದ್ದಾರೆ. ಅಲ್ಲಿನ ನಿವಾಸಿಗಳ ಕಷ್ಟಕ್ಕೆ ಪ್ರತಿಯೊಂದು ವಿಚಾರಕ್ಕೂ ಭಾಗಿಯಾಗುವ ಶಿವಣ್ಣಗೆ, ಗೌರವ ಸಲ್ಲಿಸುವ ಸಲುವಾಗಿ ಈ ವೃತ್ತಕ್ಕೆ ಡಾ.ಶಿವರಾಜ್‌ಕುಮಾರ್ ವೃತ್ತ ಎಂದು ಹೆಸರು ಇಡಲು ನಿರ್ಧರಿಸಿದ್ದಾರೆ. ಇದನ್ನೂ ಓದಿ:ಹಾಲಿವುಡ್‌ನ ಮತ್ತೊಂದು ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಗ್ರೀನ್ ಸಿಗ್ನಲ್

SHIVARAJKUMARಇನ್ನು ನಟ ಶಿವಣ್ಣ ಕೈಯಲ್ಲಿ `ಭೈರಾಗಿ’ ನಂತರ `ನೀ ಸಿಗೋವರೆಗೂ’, `ವೇದ’, `ಘೋಸ್ಟ್’, `ಜೈಲರ್’ ಇನ್ನು ಮುಂತಾದ ಚಿತ್ರಗಳಿವೆ. ಒಂದೊಂದೇ ಚಿತ್ರಗಳು ತೆರೆಗೆ ಅಬ್ಬರಿಸಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *