ನವದೆಹಲಿ: ವಂಚನೆ ಖಾತೆಗಳ ಮಾಹಿತಿಯನ್ನು ನೀಡಲು ವಿಳಂಬ ಮಾಡಿದೆ ಎಂಬ ಕಾರಣಕ್ಕೆ ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್.ಬಿ.ಐ) 50 ಲಕ್ಷ ರೂ. ದಂಡವನ್ನು ವಿಧಿಸಿದೆ.
ಕಿಂಗ್‍ಫಿಶರ್ ಏರ್ ಲೈನ್ಸ್ ಲಿಮಿಟೆಡ್‍ನ ವಂಚನೆ ಖಾತೆಗಳನ್ನು ವರದಿ ನೀಡುವಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಳಂಬ ಮಾಡಿದೆ. ಈ ವಿಚಾರವಾಗಿ 2018 ಜುಲೈ 10 ರಂದು ಪಂಜಾಬ್ ಬ್ಯಾಂಕ್ ಸಲ್ಲಿಸಿದ್ದ ವರದಿ-1 ಗಮನಿಸಿದ ಆರ್.ಬಿ.ಐ ಮಾಹಿತಿ ವಿಳಂಬವಾಗಿದೆ ಎಂದು 50 ಲಕ್ಷ ರೂ. ದಂಡ ಹಾಕಿದೆ.
Advertisement
Advertisement
ಆರ್.ಬಿ.ಐ 1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಸೆಕ್ಷನ್ 46(4)ಐ ಮತ್ತು ಸೆಕ್ಷನ್ 47ಎ(1)ಸಿ ಗಳ ಅಡಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 50 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ ಎಂದು ಹೇಳಿದೆ.
Advertisement
ವಂಚನೆ ಖಾತೆಗಳ ವರದಿಯನ್ನು ವಿಳಂಬ ಮಾಡಿದ ಕಾರಣಕ್ಕೆ ಅಪೆಕ್ಸ್ ಬ್ಯಾಂಕ್‍ಗು ಕೂಡ 50 ಲಕ್ಷ ದಂಡ ವಿಧಿಸಲಾಗಿದೆ ಎಂದು ಬ್ಯಾಂಕ್ ಅಫ್ ಬರೋಡಾ ಹೇಳಿಕೆ ನೀಡಿದೆ. ಚಾಲ್ತಿ ಖಾತೆ ತೆರೆಯುವ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆರ್.ಬಿ.ಐ ಇಂದು ಏಳು ಸಾರ್ವಜನಿಕ ವಲಯದ ಬ್ಯಾಂಕ್‍ಗಳಿಗೆ 11 ಕೋಟಿ ದಂಡ ವಿಧಿಸಲಾಗಿದೆ.
Advertisement
ಇದರಲ್ಲಿ ಅಲಹಾಬಾದ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರಕ್ಕೆ ತಲಾ 2 ಕೋಟಿ ರೂ.ಗಳ ದಂಡ ವಿಧಿಸಲಾಗಿದೆ. ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‍ಸೀಸ್ ಬ್ಯಾಂಕ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾಗಳಿಗೆ ತಲಾ 1.5 ಕೋಟಿ ರೂ.ಗಳ ದಂಡ ವಿಧಿಸಲಾಗಿದೆ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ 1 ಕೋಟಿ ರೂ ವಿಧಿಸಿದೆ ಎಂದು ವರದಿಯಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್.ಬಿ.ಐ), ಜುಲೈ 31, 2019 ರ ಆದೇಶದ ಪ್ರಕಾರ, ಪ್ರಸ್ತುತ ಖಾತೆಗಳನ್ನು ತೆರೆಯಲು ಮತ್ತು ನಿರ್ವಹಿಸಲು ನೀತಿ ಸಂಹಿತೆ ಕುರಿತು ಆರ್.ಬಿ.ಐ ಹೊರಡಿಸಿರುವ ಕೆಲವು ನಿಬಂಧನೆಗಳನ್ನು ಪಾಲಿಸದಿದ್ದಕ್ಕಾಗಿ ಏಳು ಬ್ಯಾಂಕುಗಳಿಗೆ ವಿತ್ತೀಯ ದಂಡ ವಿಧಿಸಿದೆ ಎಂದು ಆರ್.ಬಿ.ಐ ಪ್ರಕಟಣೆಯಲ್ಲಿ ತಿಳಿಸಿದೆ. 1949 ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಕೇಂದ್ರ ಬ್ಯಾಂಕಿನಲ್ಲಿರುವ ಅಧಿಕಾರವನ್ನು ಚಲಾಯಿಸಲು ದಂಡ ವಿಧಿಸಲಾಗಿದೆ ಎಂದು ಅದು ಹೇಳಿದೆ.