ವಿಜಯ್ ಗೆ ‘ದಿ ಗೋಟ್’ ಕೊಟ್ಟ ಸಂಭಾವನೆ 200 ಕೋಟಿ ರೂ.!

Public TV
1 Min Read
GOAT Movie Vijay Thalapathy 1

ಳಪತಿ ವಿಜಯ್ (Vijay) ಸಿನಿಮಾ ಕರಿಯರ್‌ಗೆ ಗುಡ್‌ಬೈ ಹೇಳ್ತಾರೆ ಅಂತಾ ಭಾರೀ ಸುದ್ದಿಯಾಗಿತ್ತು ಅದು ನಿಜವಾಗಿದೆ ಕೂಡಾ. ಸಿನಿಮಾ ರಂಗಕ್ಕೆ ಟಾಟಾ ಬಾಯ್ ಬಾಯ್ ಮಾಡಿ ರಾಜಕೀಯದಲ್ಲೇ ತೊಡಗಿಸಿಕೊಳ್ಳೋಕೆ ಭಾರೀ ಸಿದ್ಧತೆ ನಡೆದಿದೆ. ಈಗಾಗಲೇ ಪಕ್ಷದ ಚಿಹ್ನೆ ಹಾಗೂ ಗೀತೆಯನ್ನ ಬಿಡುಗಡೆ ಮಾಡಿದ್ದಾರೆ ವಿಜಯ್. ಇನ್ನು ವಿಜಯ್ ನಟನೆಯ `ದಿ ಗೋಟ್’ (The Goat)  ಸಿನಿಮಾ ಇದೇ ಸೆಪ್ಟಂಬರ್ 5ಕ್ಕೆ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಆದ್ರೆ ಅಸಲಿ ಮ್ಯಾಟರ್ ಇದಲ್ಲ.

Vijay

ಹೌದು, ದಳಪತಿ ವಿಜಯ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ `ದಿ ಗೋಟ್’ಗೆ ಚಿತ್ರಕ್ಕಾಗಿ ದಳಪತಿ ಭರ್ತಿ 200 ಕೋಟಿ ಸಂಭಾವನೆ (Remuneration) ಪಡೆದಿದ್ದಾರಂತೆ. ಹೀಗಂತಾ  `ದಿ ಗೋಟ್’ ಚಿತ್ರದ ನಿರ್ಮಾಪಕಿ ಅರ್ಚನಾ ಕಲ್ಪತಿ ಹೇಳಿದ್ದಾರೆ. ಅಂದಹಾಗೆ ಪ್ರಭಾಸ್ ಒಂದು ಸಿನಿಮಾಗೆ 150 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು. ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಕೂಡಾ 125 ಕೋಟಿ ಸಂಭಾವನೆಯನ್ನ ಪಡೆಯವ ಸ್ಟಾರ್ ನಟರಾಗಿದ್ದರು. ಸದ್ಯ 200 ಕೋಟಿ ರೂ. ಸಂಭಾವನೆ ಪಡೆಯುವ ಮೂಲಕ ಸಲ್ಮಾನ್ ಖಾನ್, ಶಾರುಖ್ ಹಾಗೂ ಪ್ರಭಾಸ್‌ರ ಸಂಭಾವನೆಯನ್ನ ಮೀರಿಸಿದ್ದಾರೆ.

`ದಿ ಗೋಟ್’ ಚಿತ್ರದ ರಿಲೀಸ್ ನಂತರ ಇದೇ ತಿಂಗಳು ಕೊನೆಯಲ್ಲಿ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಇನ್ನು ಹೆಸರಿಡದ `ದಳಪತಿ 69′ ವರ್ಕಿಂಗ್ ಟೈಟಲ್‌ನ ಸಿನಿಮಾದ ನಂತರ ಚಿತ್ರರಂಗದಿಂದ ಕಂಪ್ಲೀಟ್ ಆಗಿ ದಳಪತಿ ಅಂತರ ಕಾಯ್ದುಕೊಳ್ಳಲಿದ್ದಾರೆ. ಸದ್ಯ ಅವ್ರು `ದಿ ಗೋಟ್’ ಸಿನಿಮಾಗೆ ತೆಗೆದುಕೊಂಡ ಸಂಭಾವನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಮುಂದಿನ ಸಿನಿಮಾಗೆ ಅದೆಷ್ಟು ಸಂಭಾವನೆ ತೆಗೆದುಕೊಳ್ಳಲಿದ್ದಾರೆ ಕಾದು ನೋಡಬೇಕಿದೆ.

Share This Article