– ಇದು ಬಹಳ ಗಂಭೀರ ಕೇಸ್, ಹಿಂದೂ ಮುಸ್ಲಿಂ ಪ್ರಶ್ನೆ ಅಲ್ಲ ಎಂದ ಕೇಂದ್ರ ಸಚಿವ
ಹುಬ್ಬಳ್ಳಿ: ಹಳೆ ಹುಬ್ಬಳ್ಳಿ (Hubballi) ಗಲಾಟೆ ಪ್ರಕರಣ ತೆಗೆದು ಹಾಕಿದ್ದು ಕಾಂಗ್ರೆಸ್ ಸರ್ಕಾರದ ತುಷ್ಟೀಕರಣದ ಪರಾಕಾಷ್ಠೆ. ಇದು ಬಹಳ ಗಂಭೀರ ಕೇಸ್. ಇದು ಹಿಂದೂ ಮುಸ್ಲಿಂ ಪ್ರಶ್ನೆ ಅಲ್ಲ. ದೇಶದ್ರೋಹಿ, ಸಮಾಜದ್ರೋಹಿಗಳ ಮಧ್ಯೆ ಇರೋ ಹೋರಾಟ. ಭಾರತದ ಸಂವಿಧಾನ, ಕಾನೂನು ಮಧ್ಯೆ ಆಗಿರೋ ಹೋರಾಟ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಿಡಿಕಾರಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, 16 ಸಿ, 18, 20ರ ಅಡಿ ಎನ್‌ಐಎ ಚಾರ್ಜ್ ಶೀಟ್ ಫೈಲ್ ಆಗಿತ್ತು. ಸಂಘಟಿತ ಭಯೋತ್ಪಾದಕ ಕೃತ್ಯ ಎಂದು ಚಾರ್ಜ್ಶೀಟ್ ಹಾಕಲಾಗಿತ್ತು. ಸರ್ಕಾರಕ್ಕೆ ಸಮಾಜದ ಹಿತ ಇದ್ರೆ ಕೇಸ್ ವಾಪಸ್ ಪಡೆಯೋಕೆ ಸಾಧ್ಯ ಇಲ್ಲ. ಕಾಂಗ್ರೆಸ್ ಭಯೋತ್ಪಾದಕ ಬೆಂಬಲಿತ ಪಾರ್ಟಿ. ಕೇಸ್ ವಾಪಸ್ ಪಡೆದು ಬಹುದೊಡ್ಡ ಕಂಟಕ ತಂದಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಕೈಕೊಟ್ಟು ಕಾಶ್ಮೀರದಲ್ಲಿ ಎನ್‌ಸಿ ಕೈ ಹಿಡಿದ ಆಪ್!
ಕೇಸ್ ವಾಪಸ್ ಪಡೆಯುತ್ತಾರೆ ಅಂದರೆ ಇವರ ಉದ್ದೇಶ ಏನು? ದೇಶದಲ್ಲಿ ಶೇ.95 ನಕ್ಸಲ್ ಚಟುವಟಿಕೆ ಕಡಿಮೆ ಆಗಿದೆ. ಕೇಂದ್ರ ಸರ್ಕಾರದ ಬಿಗಿಯಾದ ಕ್ರಮದಿಂದ ಕಡಿಮೆ ಆಗಿದೆ. ಕಾಂಗ್ರೆಸ್ ಸರ್ಕಾರ ಭಯೋತ್ಪಾದಕ ಕೃತ್ಯವನ್ನು ಮಾಡಲು ಪ್ರಯತ್ನ ಪಟ್ಟವರ ಕೇಸ್ ವಾಪಸ್ ಪಡೆಯುತ್ತಿರುವುದನ್ನು ನಾನು ಖಂಡಿಸುತ್ತೇನೆ. ಭಯೋತ್ಪಾದಕ ಇಸ್ಲಾಂ ಪರ ಕಾಂಗ್ರೆಸ್ ಇದೆ. ಇದು ಜನತೆಯ ಸುರಕ್ಷೆಯ ಪ್ರಶ್ನೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈ ದೇಶಕ್ಕೆ ಕಾಡುತ್ತಿರುವ ದುಷ್ಟಶಕ್ತಿಯೆಂದರೆ ಅದು ಕಾಂಗ್ರೆಸ್ ಪಕ್ಷ – ಜನಾರ್ದನ ರೆಡ್ಡಿ
ಇದು ಕಾಂಗ್ರೆಸ್ (Congress) ಬಿಜೆಪಿ (BJP) ಪ್ರಶ್ನೆ ಅಲ್ಲ. ಇದನ್ನು ನೋಡಿದ್ರೆ ಯಾವ ಪ್ರಮಾಣದಲ್ಲಿ ಮತಾಂಧತೆಯ ಪಿತ್ತ ನೆತ್ತಗೇರಿದೆ ಅನ್ನೋದು ಗೊತ್ತಾಗುತ್ತೆ. ಇದು ಅಕಸ್ಮಾತ್ ನಿಜ ಆದರೆ ನಾವು ಕಾನೂನು ಹೋರಾಟ ಮಾಡುತ್ತೇವೆ. ನಾಳೆ ಇಸ್ಲಾಂ ಮತಾಂಧ ಶಕ್ತಿಗಳು ಪೊಲೀಸ್ ಠಾಣೆ ಸುಟ್ಟು ಹಾಕಬಹುದು. ನಾವು ಹೋರಾಟ ಮಾಡುತ್ತೇವೆ. ನಾವು ಕೋರ್ಟ್ನಲ್ಲಿ ಪ್ರಶ್ನೆ ಮಾಡುತ್ತೇವೆ. ನಾಳೆ ಇದಕ್ಕೆ ಸರ್ಕಾರ ಮಾಹಿತಿ ನೀಡದೆ ಹೋದರೆ ಹೋರಾಟ ಮಾಡುತ್ತೇವೆ. ಮೊದಲ ಹಂತದಲ್ಲಿ ಸೋಮವಾರ ಹೋರಾಟ. ನನಗಿರೋ ಮಾಹಿತಿ ಪ್ರಕಾರ ಎನ್‌ಐಎ (NIA) ಕೇಸ್ ಯಾವ ರಾಜ್ಯದವರೂ ವಾಪಸ್ ಪಡೆದಿಲ್ಲ. ರಾಜ್ಯ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಏನಾದರೂ ಮಾಡಿರಬಹುದು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: 2013 ರಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬಂದಿದ್ದ ರತನ್ ಟಾಟಾ