ರಜನಿಕಾಂತ್ (Rajinikanth) ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ‘ಜೈಲರ್’ ಸಿನಿಮಾದ ಕಾವಾಲಾ (Kawala) ಹಾಡು ಇಡೀ ದೇಶದ ಡಾನ್ಸ್ ಪ್ರೇಮಿಗಳೇ ಕುಣಿಸಿದೆ. ತಮಿಳಿನಲ್ಲಿ ರಿಲೀಸ್ ಆಗಿದ್ದ ಈ ಹಾಡನ್ನು ಇದೀಗ ತೆಲುಗು ಭಾಷೆಯಲ್ಲೂ ತಯಾರು ಮಾಡಲಾಗಿತ್ತು. ಆ ಹಾಡಿನ ಬಿಡುಗಡೆ (Song Release) ಇಂದು ಹೈದರಾಬಾದ್ ನಲ್ಲಿ ನಡೆಯಲಿತ್ತು.
ಈ ಹಾಡಿನ ಬಿಡುಗಡೆಗಾಗಿ ತಮನ್ನಾ (Tamannaah) ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಹೈದರಾಬಾದ್ ಗೆ ಆಗಮಿಸಿದ್ದರು. ರಜನಿಕಾಂತ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದ ಮಾಹಿತಿ ಕೂಡ ಸಿಕ್ಕಿತ್ತು. ಆದರೆ, ಈ ಕಾರ್ಯಕ್ರಮ ನಡೆಯದಂತೆ ವರುಣ ಅಬ್ಬರಿಸಿದ್ದಾನೆ. ಮಳೆಯ ಕಾರಣದಿಂದಾಗಿ ಇವೆಂಟ್ ಕ್ಯಾನ್ಸಲ್ ಆಗಿದೆ. ಈ ಮಾಹಿತಿಯನ್ನು ಸ್ವತಃ ಚಿತ್ರತಂಡವೇ ನೀಡಿದೆ.
ಕಾವಾಲಾ ತೆಲುಗು ಹಾಡನ್ನು ಕೇಳಲು ನೀವೆಲ್ಲ ಉತ್ಸುಕರಾಗಿದ್ದೀರಿ ಎನ್ನುವುದನ್ನು ನಾವು ಬಲ್ಲೆವು. ಆದರೆ, ಮಳೆಯ ಕಾರಣದಿಂದಾಗಿ ಈ ಕಾರ್ಯಕ್ರಮವನ್ನು ರದ್ದುಗೊಳಿಸುವುದು ಅನಿವಾರ್ಯವಾಗಿದೆ. ಹಾಗಂತ ನಿಮಗೆ ನಿರಾಸೆ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಕಂಡಿತಾ ಇವೆಂಟ್ ಮಾಡಿಯೇ ಸಾಂಗ್ ರಿಲೀಸ್ ಮಾಡುತ್ತೇವೆ ಎಂದಿದೆ ಸನ್ ಪಿಕ್ಚರ್ಸ್.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]