ಲಕ್ನೋ: ಪೊಲೀಸ್ ಠಾಣೆಯೊಳಗೆ ಮಹಿಳಾ ಪೇದೆಯೊಬ್ಬಳನ್ನು (Women Constable) ಅಮಾನುಷವಾಗಿ ನಡೆಸಿಕೊಂಡು ಆಕೆಯ ಸಮವಸ್ತ್ರವನ್ನು ಹರಿದುಹಾಕಿದ ಆರೋಪದ ಮೇಲೆ ಅತ್ಯಾಚಾರ (Rape) ಆರೋಪಿಯ ಐದು ಕುಟುಂಬ ಸದಸ್ಯರನ್ನು ಬಂಧಿಸಿದ ಘಟನೆ ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ (Bareli) ನಡೆದಿದೆ.
ಭಾನುವಾರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಬ್ಬು (23) ಎಂಬಾತನನ್ನು ಬಂಧಿಸಲಾಗಿತ್ತು. ಬಂಧನಕ್ಕೆ ಸಂಬಂಧಿಸಿದಂತೆ ಆತನ ಸಂಬಂಧಿಕರು ಶಿಶ್‌ಗಢ ಪೊಲೀಸ್ ಠಾಣೆಯಲ್ಲಿ ಗಲಾಟೆ ನಡೆಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ. ಇದನ್ನೂ ಓದಿ: 3 ದಿನದಲ್ಲೇ ಗೋಲ್ಡನ್ ಟೆಂಪಲ್ ಬಳಿ 2ನೇ ಬಾರಿ ಸ್ಫೋಟ
ಮಾರ್ಚ್ 20ರಂದು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ತಂದೆ ಶಬ್ಬು ವಿರುದ್ಧ ದೂರು ದಾಖಲಿಸಿದ್ದರು. ಈ ಕುರಿತು ಆತನ ಕುಟುಂಬದವರು ಆತನನ್ನು ಸುಮ್ಮನೆ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಆತನ ಕುಟುಂಬ ಸದಸ್ಯರಾದ ಶಬ್ಬೀರ್, ಶಹನಾಜ್, ತರನ್ನುಮ್, ಫೂಲ್ಜಹಾನ್ ಮತ್ತು ಶೈದಾನ್ ಪೊಲೀಸ್ ಠಾಣೆಯಲ್ಲಿ ಗಲಾಟೆ ನಡೆಸಿದ್ದಾರೆ. ಈ ವೇಳೆ ಮಹಿಳಾ ಪೇದೆಗೆ ಹಲ್ಲೆ ನಡೆಸಿ, ಆಕೆಯ ಸಮವಸ್ತ್ರವನ್ನು ಹರಿದುಹಾಕಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಇದನ್ನೂ ಓದಿ: ಇಬ್ಬರ ತಲೆಗೆ ಒಟ್ಟು 11 ಲಕ್ಷ ಘೋಷಣೆಯಾಗಿದ್ದ ನಕ್ಸಲರ ಎನ್‍ಕೌಂಟರ್
ಈ ವೇಳೆ ಇತರೆ ಪೊಲೀಸ್ ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಐದು ಜನರನ್ನು ಹಿಡಿದು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಈ ಕುರಿತು ಎಫ್‌ಐಆರ್ (FIR) ದಾಖಲಾಗಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: ವಾಯುಸೇನೆಯ ವಿಮಾನ ಪತನ- ಮೂವರ ದುರ್ಮರಣ