ಇಶಾಗೆ ಡಿವೋರ್ಸ್‌ ಕೊಡಲು ಬೆಂಗಳೂರು ಹುಡುಗಿ ಜೊತೆಗಿನ ಭರತ್‌ ಅಫೇರ್‌ ಕಾರಣ?

Public TV
2 Min Read
esha deol 2

ಬಾಲಿವುಡ್ ನಟ ಧರ್ಮೇಂದ್ರ- ಹೇಮಾ ಮಾಲಿನಿ (Hema Malini) ಪುತ್ರಿ ಇಶಾ ಡಿಯೋಲ್ (Esha Deol) ಅವರು ಉದ್ಯಮಿ ಭರತ್‌ಗೆ ಡಿವೋರ್ಸ್ ನೀಡಿರೋದು ಸದ್ಯ ಭಾರೀ ಚರ್ಚೆಯಾಗುತ್ತಿದೆ. ನಟಿ ಇಶಾಗೆ ಕೈ ಕೊಡಲು ಭರತ್ ವಿವಾಹೇತರ ಸಂಬಂಧವೇ ಕಾರಣ ಎಂಬ ಸುದ್ದಿ ಹರಿದಾಡುತ್ತಿದೆ.

esha deol 1

ಬೆಂಗಳೂರಿನ ಹುಡುಗಿ ಜೊತೆ ಉದ್ಯಮಿ ಭರತ್‌ಗೆ ನಂಟು ಇರುವ ಕಾರಣ, ಇಶಾಗೆ ಡಿವೋರ್ಸ್ ನೀಡಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ಇಶಾಗೆ 2ನೇ ಮಗು ಆದ್ಮೇಲೆ ಗಂಡ ಮತ್ತು ಹೆಂಡತಿ ನಡುವಿನ ಸಂಬಂಧ ಹದಗೆಟ್ಟಿತ್ತು ಎಂಬ ಸುದ್ದಿ ಖಾಸಗಿ ಪತ್ರಿಕೆಯೊಂದು ಪ್ರಕಟಿಸಿತ್ತು. ಸಾಕಷ್ಟು ಸಮಯದಿಂದ ಇಬ್ಬರು ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಇದೀಗ ಡಿವೋರ್ಸ್ ಬಗ್ಗೆ ಈ ಜೋಡಿ ಅಧಿಕೃತ ಅಪ್‌ಡೇಟ್ ನೀಡಿದ ಬೆನ್ನಲ್ಲೇ ಭರತ್ ಅಫೇರ್ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

esha deol

ಇಬ್ಬರ ಡಿವೋರ್ಸ್‌ಗೆ ಉದ್ಯಮಿ ಭರತ್ ಬೆಂಗಳೂರಿನ ಹುಡುಗಿಯೊಬ್ಬಳ ಜೊತೆ ಸಂಬಂಧ ಹೊಂದಿರುವುದು ಎನ್ನಲಾಗಿದೆ. ಈ ವರ್ಷ ಬೆಂಗಳೂರಿನಲ್ಲಿ ಭರತ್, ತಮ್ಮ ಗರ್ಲ್ ಫ್ರೆಂಡ್ ಜೊತೆ ನ್ಯೂ ಇಯರ್ ಪಾರ್ಟಿ ಮಾಡಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಭರತ್ ಅಫೇರ್ ಬಗ್ಗೆ ಅರಿತು ದಾಂಪತ್ಯ ಇಶಾ ಬ್ರೇಕ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:Toxic: ಯಶ್ ಸಿನಿಮಾ ಎಲ್ಲಿಗೆ ಬಂತು? ಇಲ್ಲಿದೆ ಬಿಗ್ ಅಪ್‌ಡೇಟ್

ಫೆ.6ರಂದು ವಿಚ್ಛೇದನದ ಬಗ್ಗೆ ಇಶಾ ಡಿಯೋಲ್- ಭರತ್ ತಖ್ತಾನಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದರು. ಈ ಬಗ್ಗೆ ಖಾಸಗಿ ಪತ್ರಿಕೆಯೊಂದು ವರದಿ ಮಾಡಿತ್ತು. ನಾವು ಪರಸ್ಪರ ಒಪ್ಪಿಗೆಯ ಮೇರೆಗೆ ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಜೀವನ ಬದಲಾಗುತ್ತಿರುವ ಈ ಸಮಯದಲ್ಲಿ ನಮ್ಮ ಇಬ್ಬರು ಮಕ್ಕಳ ಉತ್ತಮ ಹಿತಾಸಕ್ತಿ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮಹತ್ವದ್ದಾಗಿದೆ. ನಮ್ಮ ಗೌಪ್ಯತೆಯನ್ನ ಗೌರವಿಸುವುದನ್ನು ನಾವು ಪ್ರಶಂಸಿಸುತ್ತೇವೆ ಎಂದು ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಜಂಟಿ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿತ್ತು. ಕೆಲ ದಿನಗಳಿಂದ ಇಬ್ಬರ ಡಿವೋರ್ಸ್ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ನಿನ್ನೆ (ಫೆ.6) ಅಧಿಕೃತ ಮಾಹಿತಿ ಹೊರಬಿದ್ದಿತ್ತು.

2012ರಲ್ಲಿ ಇಶಾ ಡಿಯೋಲ್- ಭರತ್ ತಖ್ತಾನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2017ರಲ್ಲಿ ಮಗಳು ರಾಧ್ಯಗೆ ಇಶಾ ಡಿಯೋಲ್ ಜನ್ಮ ನೀಡಿದರು. 2019ರಲ್ಲಿ ಎರಡನೇ ಮಗುವನ್ನ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಬರಮಾಡಿಕೊಂಡಿದ್ದರು. ಇದೀಗ 12 ವರ್ಷಗಳ ದಾಂಪತ್ಯ ಜೀವನಕ್ಕೆ ಇಶಾ ಡಿಯೋಲ್- ಭರತ್ ಅಂತ್ಯ ಹಾಡಿದರು.

ಧೂಮ್, ಜಸ್ಟ್ ಮ್ಯಾರೀಡ್, ನೋ ಎಂಟ್ರಿ, ಡಾರ್ಲಿಂಗ್, ಶಾದಿ ನಂ.1 ಸೇರಿದಂತೆ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಇಶಾ ನಟಿಸಿದ್ದಾರೆ.

Share This Article