Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | Bollywood | ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

Bollywood

‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

Public TV
Last updated: March 21, 2022 10:57 am
Public TV
Share
2 Min Read
FotoJet 4 29
SHARE

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ದಿನಕ್ಕೊಂದು ರೋಚಕ ಸಂಗತಿಯನ್ನು ಹೊರ ಹಾಕುತ್ತಿದೆ. ಈ ಸಿನಿಮಾದ ಕಥೆಯಲ್ಲಿ ಅಕ್ಕಿ ಡ್ರಮ್ ನಲ್ಲಿ ಕಾಶ್ಮೀರಿ ಪಂಡಿತರೊಬ್ಬರ ಹತ್ಯ ನಡೆದ ಘಟನೆಯ ಬರುತ್ತದೆ. ಆ ‍ಘಟನೆಯು ನಡೆದದ್ದು ಕಾಶ್ಮೀರಿದ ಶ್ರೀನಗರದ ಛೋಟಾ ಬಜಾರ್ ನಲ್ಲಿ ಎನ್ನುವ ಮಾಹಿತಿ ಹೊರ ಬಿದ್ದಿದೆ.

ಇಂಥದ್ದೊಂದು ಘಟನೆ ನಡೆದದ್ದು ಶಹೀದ್ ಬಾಲ್ ಕ್ರಿಶನ್ ಗಂಜು ಅವರ ಕುಟುಂಬದಲ್ಲಿ ಎನ್ನುವ ಮಾಹಿತಿಯನ್ನು ಸ್ವತಃ ಇವರ ಸಹೋದರಿಯೇ ಟ್ವಿಟರ್ ಖಾತೆಯಲ್ಲಿ ಖಚಿತ ಪಡಿಸಿದ್ದಾರೆ. ಅಲ್ಲದೇ, ‘ಕಾಶ್ಮೀರಿ ಪಂಡಿತ್ ನೆಟ್ ವರ್ಕ್’ ಎಂಬ ಜಾಲತಾಣದಲ್ಲಿ ಪ್ರಕಟವಾದ ಹತ್ಯೆಯಾದ ಕಾಶ್ಮೀರಿ ಪಂಡಿತರ ಪರಿಚಯದಲ್ಲೂ ಈ ಗಂಜು ಇದ್ದಾರೆ.

FotoJet 5 15

ಯಾರಿದು ಬಾಲ್ ಕ್ರಿಶನ್ ಗಂಜು?
ಕಾಶ್ಮೀರದ ಶ್ರೀನಗರದಲ್ಲಿಯ ಛೋಟಾ ಬಜಾರ್ ನಿವಾಸಿ ಶಾಹೀದ್ ಬಾಲ್ ಕ್ರಿಶನ್ ಗಂಜು. ಇವರು ಟೆಲಿಕಾಂನಲ್ಲಿ ಇಂಜಿನಿಯರ್ ಆಗಿದ್ದರು. ಶಿಬನ್ ಗುಂಜಿ ಸೇರಿದಂತೆ ಹಲವರು ನಾಲ್ಕು ಅಂತಸ್ತಿನ ಛೋಟಾ ಬಜಾರ್ ಮನೆಯಲ್ಲೇ ವಾಸವಿದ್ದರು. ಇದನ್ನೂ ಓದಿ: ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ

FotoJet 6 10

ಹತ್ಯೆಯಾಗಿದ್ದು ಹೇಗೆ?
ಸಹೋದರಿ ಶಿಬನ್ ಗುಂಜಿ ಈ ಘಟನೆಯ ಕುರಿತು ಹೇಳಿಕೊಂಡಂತೆ. ಅದು 10 ಮಾರ್ಚ್ 1990ರ ಇಸವಿ. ಸುಮಾರು 32 ವರ್ಷಗಳ ಹಿಂದೆ ನಡೆದ ಘಟನೆಯಿದು. ಆಗ ಕಾಶ್ಮೀರದಲ್ಲಿ ಕರ್ಫ್ಯೂ ಹೇರಲಾಗಿತ್ತು. ಈ ಕರ್ಫ್ಯೂ ಅಂದು ಸಡಿಲಗೊಂಡಿದ್ದರಿಂದ ಎಂದಿನಂತೆ ಕೆಲಸ ಮುಗಿಸಿಕೊಂಡು ಟೆಲಿಕಾಂ ಇಂಜಿನಿಯರ್ ಆಗಿದ್ದ ಶಾಹೀದ್ ಬಾಲ್ ಕ್ರಿಶನ್ ಗಂಜು ಮನೆಗೆ ಆಗಮಿಸುತ್ತಿದ್ದರು. ಅವರ ಹಿಂದೆಯೇ ಭಯೋತ್ಪಾದಕರು ಹಿಂಬಾಲಿಸುತ್ತಿದ್ದಾರೆ ಎನ್ನುವ ಕೊಂಚ ಸುಳಿವೂ ಅವರಿಗೆ ಸಿಕ್ಕಿರಲಿಲ್ಲ. ತಮ್ಮ ಪಾಡಿಗೆ ತಾವು ನಿರಾಳವಾಗಿ ಮನೆಯತ್ತ ಹೆಜ್ಜೆ ಇಟ್ಟಿದ್ದರು. ಮುಂದೆ ಮುಂದೆ ಗಂಜು, ಹಿಂದೆಯೇ ಭಯೋತ್ಪಾದಕರು.

FotoJet 7 8

ಗಂಜುಗಾಗಿ ಮನೆಯ ಬಾಗಿಲಿನಲ್ಲೇ ಕಾಯುತ್ತಿದ್ದ ಪತ್ನಿಯು, ತನ್ನ ಪತಿಯ ಹಿಂದೆ ಭಯೋತ್ಪಾದಕರು ಸದ್ದಿಲ್ಲದೇ ಬರುತ್ತಿದ್ದಾರೆ ಎನ್ನುವುದನ್ನು ಗಮನಿಸಿದರು. ತಕ್ಷಣವೇ ಪತಿಯನ್ನು ಮನೆಯೊಳಗೆ ಕರೆದುಕೊಂಡು ಬಾಗಿಲು ಹಾಕಿಕೊಂಡರು. ತಮ್ಮ ಹಿಂದೆಯೇ ಭಯೋತ್ಪಾದಕರು ಬರುತ್ತಿದ್ದಾರೆ ಎನ್ನುವ ಸುದ್ದಿಯನ್ನು ಕೇಳಿ, ಗಂಜು ಆಘಾತಕ್ಕೆ ಒಳಗಾದರು. ಭದ್ರವಾಗಿ ಬಾಗಿಲು ಹಾಕಿಕೊಂಡು, ಚಿಲಕ ಕೂಡ ಹಾಕಿದರು. ಇದನ್ನೂ ಓದಿ:  ವರ್ಷಾಂತ್ಯಕ್ಕೆ ನಿರ್ದೇಶನದ ಹೊಸ ಪಯಣ ಮಾಡಲು ರೆಡಿಯಾಗುತ್ತಿದ್ದಾರೆ ಕೃಷ್ಣ ಅಜಯ್ ರಾವ್

vivek agnihotri the kashmir files

ಕೊಲ್ಲಲಿಕ್ಕೆ ಬಂದಿದ್ದ ಭಯೋತ್ಪಾದಕರು ಬಾಗಿಲು ಒಡೆದರು, ಮನೆಗೆ ನುಗ್ಗಿದರು. ಮನೆಯಲ್ಲಿದ್ದವರನ್ನು ಕೊಲ್ಲುತ್ತಾ ಸಾಗಿದರು. ಈ ವೇಳೆಯಲ್ಲಿ ಭಯೋತ್ಪಾದಕರಿಂದ ತಪ್ಪಿಸಿಕೊಳ್ಳಲು ಗಂಜು ಮೂರನೇ ಮಹಡಿಯತ್ತ ಓಡಿದರು. ಎಲ್ಲಿ ತಪ್ಪಿಸಿಕೊಳ್ಳುವುದು ಅಂತ ಗೊತ್ತಾಗದೇ ಕಂಗಾಲಾದರು. ಅಲ್ಲಿಯೇ ಇದ್ದ ಅಕ್ಕಿ ತುಂಬಿದ್ದ ಡ್ರಮ್ ನೊಳಗೆ ಬಚ್ಚಿಟ್ಟುಕೊಂಡರು. ಇವರನ್ನು ಹುಡುಕ್ತಾ ಇದ್ದ ಭಯೋತ್ಪಾದಕರು ಇಡೀ ಮನೆಯನ್ನು ಧ್ವಂಸ ಮಾಡಿದರು. ಇಂಚಿಂಚು ಜಾಗ ಬಿಡದೇ ಹುಡುಕಿದರು. ಕೊನೆಗೆ ಅಕ್ಕಿ ಡ್ರಮ್ ನಲ್ಲಿ ಅವಿತು ಕುಳಿತಿದ್ದ ಗಂಜು ಕಣ್ಣೀಗೆ ಬಿದ್ದರು. ಅಕ್ಕಿ ಡಬ್ಬಿಯಲ್ಲೇ ಕೊಂದರು. ಅದೇ ಅಕ್ಕಿಯಿಂದ ಅನ್ನ ಮಾಡಿಕೊಂಡು ಅವರ ಮಕ್ಕಳೇ ತಿನ್ನಲಿ ಎಂದು ಕ್ರೂರತೆ ಮೆರೆದರು.

the kashmir files 1

ಇದು ನಿಜವಾಗಿ ನಡೆದ ಘಟನೆ ಎಂದು ಸ್ವತಃ ಗಂಜು ಅವರ ಸಹೋದರಿಯೇ ಸೋಷಿಯಲ್ ಮೀಡಿಯಾದ ಮೂಲಕ ಬರೆದುಕೊಂಡಿದ್ದಾರೆ. ಅಂದಹಾಗೆ ಈ ಗಂಜು ಅವರು ಭಯೋತ್ಪಾದಕರಿಂದ ಹತ್ಯೆಯಾಗಿ 19 ಮಾರ್ಚ್ 2022ಕ್ಕೆ 32 ವರ್ಷಗಳ ಆಗಿವೆ. ಈ ಸಂದರ್ಭದಲ್ಲಿ ಗಂಜು ಸಹೋದರಿ, ಈ ಎಲ್ಲ ವಿಷಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

TAGGED:'ದಿ ಕಾಶ್ಮೀರ್ ಫೈಲ್ಸ್'anupam kherbollywoodKangana RanawatKashmiri PanditPrakash BelvadiShaheed Bal Krishan GanjuThe Kashmir FilesVivek Agnihotriಅನುಪಮ್ ಖೇರ್ಕಂಗನಾ ರಣಾವತ್ಕಾಶ್ಮೀರಿ ಪಂಡಿತ್ಪ್ರಕಾಶ್ ಬೆಳವಾಡಿಬಾಲಿವುಡ್ವಿವೇಕ್ ಅಗ್ನಿಹೋತ್ರಿಶಹೀದ್ ಬಾಲ್ ಕ್ರಿಶನ್ ಗಂಜು
Share This Article
Facebook Whatsapp Whatsapp Telegram

Cinema news

bigg boss
ಕಾವ್ಯ ಮನೆಯವರಿಂದ ನಿಯಮ ಉಲ್ಲಂಘನೆ; ಹೊರ ಕಳಿಸಿದ್ರಾ ಬಿಗ್‌ ಬಾಸ್‌? – ಕಣ್ಣೀರಿಟ್ಟ ಕಾವ್ಯ
Cinema Latest Sandalwood Top Stories
kavya gilli
ಗಿಲ್ಲಿಯನ್ನ ಮಾತ್ರ ಬಿಟ್ಕೊಡ್ಬೇಡ: ಕಾವ್ಯಗೆ ಬುದ್ದಿವಾದ ಹೇಳಿದ ತಾಯಿ
Cinema Latest Sandalwood Top Stories
shiva rajkumar
ಫ್ಯಾನ್ಸ್ ವಾರ್ ಬಗ್ಗೆ ನಟ ಶಿವರಾಜ್‌ಕುಮಾರ್ ಖಡಕ್ ರಿಯಾಕ್ಷನ್
Cinema Latest Sandalwood Top Stories
Ravi Basrur
ಕಿಶೋರ್ ಮೇಗಳಮನೆ ನಿರ್ದೇಶನದ ಚಿತ್ರಕ್ಕೆ ಬಸ್ರೂರು ಸಂಗೀತ
Cinema Latest Sandalwood Top Stories

You Might Also Like

Genocide of Christians in Nigeria US bombs terrorists Trump wishes dead terrorists Merry Christians
Latest

ನೈಜೀರಿಯಾದಲ್ಲಿ ಕ್ರೈಸ್ತರ ನರಮೇಧ – ಉಗ್ರರ ಮೇಲೆ ಅಮೆರಿಕ ಬಾಂಬ್‌ ದಾಳಿ

Public TV
By Public TV
52 minutes ago
Ramamurthy Nagar Suicide 2
Bengaluru City

ಅರ್ಧದಲ್ಲೇ ಹನಿಮೂನ್‌ನಿಂದ ವಾಪಸ್ಸಾಗಿ ಆತ್ಮಹತ್ಯೆ ಯತ್ನ – ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ನವವಧು ಸಾವು

Public TV
By Public TV
1 hour ago
Ramamurthy Nagar Suicide
Bengaluru City

ಪ್ಯಾಲೆಸ್‌ ಗ್ರೌಂಡ್‌ನಲ್ಲಿ ರಿಸೆಪ್ಷನ್, ಶ್ರೀಲಂಕಾಕ್ಕೆ ಹನಿಮೂನ್ – ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆಗೆ ಯತ್ನ

Public TV
By Public TV
2 hours ago
INDIAN ARMY
Latest

ಸೈನಿಕರಿನ್ನು ಫೇಸ್‌ಬುಕ್‌, ಇನ್‌ಸ್ಟಾ ನೋಡಬಹುದು, ಲೈಕ್‌ ಮಾಡುವಂತಿಲ್ಲ!

Public TV
By Public TV
2 hours ago
Bengaluru Nurse Video
Bengaluru City

ಆಸ್ಪತ್ರೆಯಲ್ಲಿ ನರ್ಸ್ ಬಟ್ಟೆ ಬದಲಿಸುವಾಗ ಕದ್ದುಮುಚ್ಚಿ ವಿಡಿಯೋ – ಸಿಬ್ಬಂದಿ ಅರೆಸ್ಟ್

Public TV
By Public TV
3 hours ago
Mysuru Helium Cylinder Blast
Latest

ಸಿಲಿಂಡರ್‌ ಸ್ಫೋಟ| ಯಾವತ್ತೂ ಕಾಣಿಸದವನು ನಿನ್ನೆ ಅರಮನೆ ಬಳಿ ಕಾಣಿಸಿದ್ದು ಹೇಗೆ – ಸಲೀಂ ಹಿನ್ನೆಲೆ ಕೆದಕಲು ಮುಂದಾದ ಖಾಕಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?