ಬಾಲಿವುಡ್‌ನ ನಟ ಸಂಜಯ್ ದತ್ (Sanjay Dutt) ಭಾರತೀಯ ಚಿತ್ರರಂದಲ್ಲಿ ಭಾರೀ ಬ್ಯುಸಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಎಲ್ಲಾ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ಸಂಜುಬಾಬ ಒಂದು ಮುಖ್ಯ ಪಾತ್ರವನ್ನ ನಿರ್ವಹಿಸಿದ್ದಾರೆ. ಕನ್ನಡದ ಕೆಡಿ ಸಿನಿಮಾದಲ್ಲೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಮುಂಬೈನಲ್ಲಿ ಕೆಡಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಇವೆಂಟ್‌ನಲ್ಲಿ ಮಾತನಾಡಿರುವ ಸಂಜಯ್ ದತ್ ರಾಜಾಸಾಬ್ (The Raja Saab) ಹಾಗೂ ಧುರಂಧರ್ (Dhurandhar) ಚಿತ್ರದ ರಿಲೀಸ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎರಡೂ ಸಿನಿಮಾಗಳು ಒಂದೇ ದಿನ ತೆರೆಕಂಡರೆ ಎನ್ನುವ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಉತ್ತರಿಸಿರುವ ಸಂಜಯ್ ದತ್ ತಾವು ನಟಿಸಿದ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆದರೂ ವ್ಯತ್ಯಾಸವೆನಿಸೊಲ್ಲ. `ಯಾಕೆಂದರೆ ಧುರಂಧರ್ ಹಾಗೂ ರಾಜಾಸಾಬ್ ಸಿನಿಮಾದ ಎರಡೂ ಪಾತ್ರಗಳು ತುಂಬಾನೇ ವಿಭಿನ್ನವಾಗಿವೆ. ಎರಡೂ ಒಂದೇ ರೀತಿ ಇರುವುದಿಲ್ಲ’ ಎಂದಿದ್ದಾರೆ. ಇದನ್ನೂ ಓದಿ: ಅಟ್ಲಿ ಸಿನಿಮಾಗೆ ಮತ್ತೆ ಒಂದಾದ ಪುಷ್ಪ ಹಿಟ್ ಜೋಡಿ..!
ಪ್ರಭಾಸ್ ಅಭಿನಯದ ಮೋಸ್ಟ್ ಅವೈಟೆಡ್ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ಪೋನ್ ಮಾಡಿಕೊಂಡು ಬಂದಿದೆ. 2025ರ ಕೊನೆಯಲ್ಲಿ ಸಿನಿಮಾ ತೆರೆಗೆ ಬರುತ್ತೆ ಅನ್ನೋ ಮಾಹಿತಿಯನ್ನ ಚಿತ್ರತಂಡ ಶೇರ್ ಮಾಡಿಕೊಂಡಿದೆ. ಇನ್ನು ರಣವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಕೂಡಾ ಇದೇ ವರ್ಷ ಡಿಸೆಂಬರ್‌ಗೆ ತೆರೆಗೆ ಬರೋಕೆ ಸಿದ್ಧವಾಗಿದೆ.
ಧುರಂಧರ್ ಹಾಗೂ ರಾಜಾಸಾಬ್ ಸಿನಿಮಾ ಒಂದೇ ದಿನ ತೆರೆಗೆ ಬಂದರೂ ಬಾಕ್ಸಾಫೀಸ್‌ನಲ್ಲಿ ಆಗಲಿ, ಸಿನಿಮಾದ ಪಾತ್ರದ ಮೇಲೆಯಾಗಲಿ ಯಾವುದೇ ಡಿಫರೆನ್ಸ್ ಆಗೋದಿಲ್ಲ ಎನ್ನು ಮಾತುಗಳನ್ನ ನಟ ಸಂಜಯ್ ದತ್ ಕೆಡಿ ಸಿನಿಮಾದ ಇವೆಂಟ್‌ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: `ನನ್ನ ಬ್ಲೌಸ್ ಒಳಗೆ ಕೈಹಾಕಿದ’ – ಆಶೀರ್ವಾದದ ನೆಪದಲ್ಲಿ ಅರ್ಚಕನಿಂದ ಮಾಡೆಲ್‌ಗೆ ಲೈಂಗಿಕ ದೌರ್ಜನ್ಯ ಆರೋಪ