ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಹಾರರ್-ಫ್ಯಾಂಟಸಿ ಡ್ರಾಮಾ ದಿ ರಾಜಾಸಾಬ್ (The Raja Saab) ಸಿನಿಮಾ ಮೇಲೆ ಎಲ್ಲರ ಕಣ್ಣಿದೆ. ನಿರೀಕ್ಷೆಯೂ ದುಪ್ಪಟ್ಟಾಗಿದೆ. ಕಳೆದ ವರ್ಷ, ಚಿತ್ರತಂಡವು ಪ್ಯಾನ್-ಇಂಡಿಯಾ ಝಲಕ್ ಮೂಲಕ ಕುತೂಹಲ ಕೆರಳಿಸಿತ್ತು. ಅದಾದ ಮೇಲೆ ಇದೇ ಜೂನ್ ತಿಂಗಳಿನಲ್ಲಿ ಟೀಸರ್ ಬಿಡುಗಡೆಯಾಗಿ ಕೌತುಕಕ್ಕೆ ಒಗ್ಗರಣೆ ಹಾಕಿತ್ತು. ಆ ಟೀಸರ್‌ನಲ್ಲಿ ಹಲವು ಶೇಡ್‌ಗಳಲ್ಲಿ ಪ್ರಭಾಸ್ ಕಾಣಿಸಿಕೊಂಡು, ಅಚ್ಚರಿ ಮೂಡಿಸಿದ್ದರು. ಇದೀಗ ಇದೇ ರಾಜಾಸಾಬ್ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.
ಹೌದು, ಮಾರುತಿ ನಿರ್ದೇಶನದ ಬಹುನಿರೀಕ್ಷಿತ ‘ದಿ ರಾಜಾಸಾಬ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಇಲ್ಲೊಂದು ಟ್ವಿಸ್ಟ್ ಇದೆ. `ದಿ ರಾಜಾಸಾಬ್ʼ ಸಿನಿಮಾದ ಟ್ರೇಲರ್ ಮೊದಲಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಮೂಲಕ ಅಭಿಮಾನಿಗಳಿಗೆ ಹಬ್ಬದ ಉಡುಗೊರೆ ನೀಡಿದೆ. ಇದಾದ ಮೇಲೆ ಅಂತಿಮವಾಗಿ ಈ ಟ್ರೇಲರ್ (Trailer) ಎಲ್ಲೆಡೆ ಯಾವಾಗ, ಯಾವ ದಿನದಂದು ಬಿಡುಗಡೆ ಆಗಲಿದೆ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಲಿದೆ. ಇದನ್ನೂ ಓದಿ: ನೋವಿನ ಸಂದರ್ಭದಲ್ಲಿ ಸಂಭ್ರಮ ಬೇಡವೆಂದು ಹಿಂದೆ ಸರಿದ ರಿಷಬ್ ಶೆಟ್ಟಿ
ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯ ಈ ಮಹೋನ್ನತ ಪ್ರಾಜೆಕ್ಟ್‌ಗೆ ಟಿ.ಜಿ. ವಿಶ್ವ ಪ್ರಸಾದ್ ಬಂಡವಾಳ ಹೂಡುತ್ತಿದ್ದಾರೆ. ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಸಿನಿಮಾ ಐದು ಭಾಷೆಗಳಲ್ಲಿ ಸಿದ್ಧವಾಗಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತಮನ್ ಎಸ್ ಅವರ ಸಂಗೀತ ಮತ್ತು ಮೈನವಿರೇಳಿಸುವ ದೃಶ್ಯಗಳು ಈ ಸಿನಿಮಾದ ಹೈಲೈಟ್ಸ್. ಇದನ್ನೂ ಓದಿ: ಮಳೆಯಲ್ಲಿ ರೋಷನ್ ಜೊತೆಯಲಿ ಅನುಶ್ರೀ ಜಾಲಿ ಟ್ರಿಪ್