ಬೆಂಗಳೂರು: ದಿ ಕೇರಳ ಸ್ಟೋರಿ (Kerala Story) ಸಿನಿಮಾ ನೋಡಿದ್ರೆ ಕಾಂಗ್ರೆಸ್ ಸರ್ಕಾರ ಖಂಡಿತಾ ಮತಾಂತರ ನಿಷೇಧ ಕಾಯ್ದೆಯನ್ನ ತಿದ್ದುಪಡಿ ಮಾಡಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಗುಡುಗಿದ್ದಾರೆ.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (Yediyurappa) ಅವರ ನೇತೃತ್ವದಲ್ಲಿ ಇಲ್ಲಿನ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಗ್ಯಾರಂಟಿ ವಿರೋಧಿ ನಡೆಯುತ್ತಿರುವ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: 5 ಭಾಗ್ಯಗಳನ್ನು ಘೋಷಣೆ ಮಾಡಿ ಕಾಂಗ್ರೆಸ್ ಸುಳ್ಳು ಹೇಳಿದೆ: ಕಟೀಲ್
ಬೇಕಿದ್ರೆ ಕಾಂಗ್ರೆಸ್ ಮಂತ್ರಿಗಳು ಬರಲಿ. ನಾನೇ ಕರೆದುಕೊಂಡು ಹೋಗಿ ಇಡೀ ಮಂತ್ರಿ ಮಂಡಲಕ್ಕೆ ಕೇರಳ ಸ್ಟೋರಿ ಸಿನಿಮಾವನ್ನ ಉಚಿತವಾಗಿ ತೋರಿಸ್ತೀನಿ ಬನ್ನಿ. ಕಾಂಗ್ರೆಸ್‌ನವರು ಈ ಸಿನಿಮಾ ನೋಡಿದ್ರೆ ಮತಾಂತರ ನಿಷೇಧ ಕಾಯ್ದೆಯನ್ನ ತಿದ್ದುಪಡಿ ಮಾಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಕರ್ನಾಟಕ, ಮಹಾರಾಷ್ಟ್ರದಂತೆ ಬಿಜೆಪಿ ವಿರೋಧ ಪಕ್ಷಗಳ ಸರ್ಕಾರ ಉರುಳಿಸುತ್ತಿದೆ: ಕಪಿಲ್ ಸಿಬಲ್ ಆರೋಪ
ಅಲ್ಲದೇ ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿ ನೋಡೋಣ ಅಂತಾ ಸವಾಲ್ ಹಾಕಿದ್ದಾರೆ. ಗೋವು ತಾಯಿ ಸಮಾನ, ಮೊದಲು ನಿಮ್ಮ ಮನೆಗೆ ಹೋಗಿ ನಿಮ್ಮ ತಾಯಿ, ಅಕ್ಕ-ತಂಗಿಗೆ ಕೇಳಿ. ಗೋ ಹತ್ಯೆ ನಿಷೇಧ ಮಾಡ್ತೀವಿ ಅಂದ್ರೆ ನಿಮ್ಮನ್ನ ಮನೆಬಿಟ್ಟು ಓಡಿಸ್ತಾರೆ. ಮೋಸ ಮಾಡಿದ ಸರ್ಕಾರ ಬಹಳ ದಿನ ಇರಲ್ಲ ಅನ್ನೋದಕ್ಕೆ ಮಹಾರಾಷ್ಟ್ರ ಸಾಕ್ಷಿ. ಮಹಾರಾಷ್ಟ್ರದಂತೆಯೇ ಕರ್ನಾಟಕದಲ್ಲಿಯೂ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ವಿದ್ಯುತ್ ದರವನ್ನ ಹಿಗ್ಗಾಮುಗ್ಗ ಏರಿಕೆ ಮಾಡಿದ್ದಾರೆ. ಈ ಹಿಂದೆ ಕೆಇಆರ್‌ಸಿ ವಿದ್ಯುತ್ ದರ ಏರಿಕೆ ಮಾಡಿದಾಗ ನಾವು ಅದಕ್ಕೆ ಒಪ್ಪಿರಲಿಲ್ಲ. ಆದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ದರ ಏರಿಕೆ ಮಾಡಿದೆ. ಗೃಹಲಕ್ಷಿö್ಮ ಕೊಡ್ತೀವಿ ಅಂತಾ ಹೇಳಿ ಈಗ ಸರ್ವರ್ ಹ್ಯಾಕ್ ಆಗಿದೆ ಅಂತಾ ಹೇಳ್ತಾರೆ. ಕಾಂಗ್ರೆಸ್ ಸಚಿವರು ಎಷ್ಟು ಸುಳ್ಳು ಹೇಳ್ತಾರೆ ಅನ್ನೋದು ಇದರಲ್ಲೇ ಗೊತ್ತಾಗ್ತಿದೆ. ಕರ್ನಾಟಕ ರಾಜಕೀಯದಲ್ಲೂ ಮಹಾರಾಷ್ಟç ಸರ್ಕಾರದಂತೆ ತಲ್ಲಣ ಸೃಷ್ಟಿಯಾಗುತ್ತೆ. ಇನ್ನು ಮೂರು ತಿಂಗಳೂ ಸಿದ್ದರಾಮಯ್ಯ ಸರ್ಕಾರ ಉಳಿಯಲ್ಲ. ಅಲ್ಲದೇ ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ 28 ಕ್ಷೇತ್ರಗಳಲ್ಲಿ ವಿಜಯ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]