BollywoodCinemaLatestMain Post

‘ಲಾಲ್ ಸಿಂಗ್ ಚಡ್ಡಾ’ ಸೋತಿಲ್ಲ, ನಷ್ಟವೂ ಆಗಿಲ್ಲ ಎಂದ ನಿರ್ಮಾಣ ಸಂಸ್ಥೆ

ಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋತಿದೆ, ಬಾಕ್ಸ್ ಆಫೀಸಿನಲ್ಲಿ ಅದು ಮಕಾಡೆ ಮಲಗಿದೆ ಎಂದೆಲ್ಲ ಮಾತುಗಳು ಕೇಳಿ ಬಂದವು. ಥಿಯೇಟರ್ ಖಾಲಿ ಹೊಡೀತಿವೆ ಎಂದೂ ಸುದ್ದಿ ಆಗಿತ್ತು. ಸಾವಿರಾರು ಶೋಗಳನ್ನು ಕ್ಯಾನ್ಸಲ್ ಮಾಡಲಾಗಿದೆ ಎಂದೂ ಹೇಳಲಾಗಿತ್ತು. ಹೀಗಾಗಿ ನಿರ್ಮಾಪಕರಿಗೆ ಈ ಸಿನಿಮಾ ಭಾರೀ ನಷ್ಟ ಮಾಡಿದೆ ಎಂದು ವರದಿ ಆಗಿತ್ತು.

ಆದರೆ, ಅಸಲಿ ವಿಷಯವೇ ಬೇರೆ ಇದೆ ಎಂದು ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ನಾವು ನಿರೀಕ್ಷೆ ಮಾಡಿದಷ್ಟು ಹಣ ಬಾರದೇ ಇರಬಹುದು. ಆದರೆ, ಸಿನಿಮಾ ನಿರ್ಮಾಣ ಸಂಸ್ಥೆಗೆ ಲಾಸ್ ಮಾಡಿಲ್ಲ. ನಷ್ಟವನ್ನೂ ಮಾಡಿಲ್ಲ. ನಾವು ಹಾಕಿರುವ ಬಂಡವಾಳ ಈಗಾಗಲೇ ಬಂದಿದೆ. ಹಾನಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲವೆಂದು ಹೇಳಿಕೊಂಡಿದೆ. ಕಪೋಕಲ್ಪಿತ ವಿಷಯಗಳನ್ನು ನಂಬಬೇಡಿ ಎಂದು ಹೇಳಿದೆ. ಇದನ್ನೂ ಓದಿ:Bigg Boss: ಗರ್ಲ್‌ಫ್ರೆಂಡ್ ವಿಚಾರಕ್ಕೆ ಬಂದ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಿಡಿಕಾರಿದ ಜಶ್ವಂತ್

ಇತ್ತೀಚಿನ ವರ್ಷಗಳಲ್ಲಿ ಆಮೀರ್ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದ್ದವು. ಆದರೆ, ಲಾಲ್ ಸಿಂಗ್ ಚಡ್ಡಾ ಅಷ್ಟೇನೂ ದುಡ್ಡು ಮಾಡದೇ ಇದ್ದರೂ, ನಿರ್ಮಾಪಕರಿಗೆ ಲಾಸ್ ಅಂತೂ ಮಾಡಿಲ್ಲ ಎಂದು ಸ್ವತಃ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಿದೆ. ಈ ಮೂಲಕ ಈ ಸಿನಿಮಾ ಲಾಭ ಹಾನಿಯ ಬಗ್ಗೆ ಮಾತನಾಡುವವರು ಬಾಯಿ ಮುಚ್ಚಿಸಿದೆ.

Live Tv

Leave a Reply

Your email address will not be published.

Back to top button