ಕಾಲಿವುಡ್ (Kollywood) ಟಾಪ್ ಚಿತ್ರರಂಗಗಳಲ್ಲಿ ಒಂದಾಗಿದೆ. ಭಾರತದ 3ನೇ ಅತಿ ದೊಡ್ಡ ಚಿತ್ರರಂಗ ಕೂಡ ಹೌದು. ಈ ಚಿತ್ರರಂಗದಲ್ಲಿ ಲಕ್ಷಾಂತರ ಜನ ಉದ್ಯೋಗಿಗಳು ದುಡಿಯುತ್ತಿದ್ದಾರೆ. ಹೀಗಿರುವಾಗ ನವೆಂಬರ್ 1ರಿಂದ ತಮಿಳು ಸಿನಿಮಾ (Tamil Film Industry) ಚಿತ್ರೀಕರಣ ಬಂದ್ ಮಾಡಲು ನಿರ್ಮಾಪಕರು (Producers) ನಿರ್ಧರಿಸಿದ್ದಾರೆ. ಇದನ್ನೂ ಓದಿ:ಸಂಜಯ್ ದತ್ ಜೊತೆಗಿನ ಫೋಟೋ ಹಂಚಿಕೊಂಡ ಉಪ್ಪಿಯ ಟ್ರೋಲ್ ಹುಡುಗಿ ರೀಷ್ಮಾ
ಸಿನಿಮಾ ನಟರ ಸಂಭಾವನೆ ಹೆಚ್ಚಳ, ನಟ- ನಟಿಯರ ಅನಧಿಕೃತ ಬೇಡಿಕೆಗಳು, ಫೈನಾನ್ಸ್ ಸಮಸ್ಯೆಗಳು ಹೀಗೆ ಇನ್ನೀತರ ಸಮಸ್ಯೆಗಳ ಬಗ್ಗೆ ನಿರ್ಮಾಪಕರು ಸಭೆ ನಡೆಸಿ ಚರ್ಚಿಸಲಿದ್ದಾರೆ. ತಮ್ಮ ಬೇಡಿಕೆಗಳು ಈಡೇರದೇ ಹೋದರೆ ನವೆಂಬರ್ 1ರಿಂದ ಚಿತ್ರರಂಗ ಬಂದ್ ಮಾಡುವುದಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಜು.29ರಂದು ನಡೆದ ಸಭೆಯಲ್ಲಿ ತಮಿಳುನಾಡು ಸಿನಿಮಾ ನಿರ್ಮಾಪಕರ ಸಂಘ, ತಮಿಳುನಾಡು ಸಿನಿಮಾ ಪ್ರದರ್ಶಕರ ಸಂಘ, ತಮಿಳುನಾಡಿನ ಸಿನಿಮಾ ವಿತರಕರು ಕೂಡ ಭಾಗವಹಿಸಿದ್ದರು. ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿತು.
ಚಿತ್ರರಂಗದ ಯಾವುದೇ ಸಿನಿಮಾ ನಟರಾಗಿರಲಿ ಅವರ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾದ ನಂತರ ಒಟಿಟಿಯಲ್ಲಿ ಬಿಡುಗಡೆಯಾಗಬೇಕು. ಸ್ಟಾರ್ ನಟ ಒಂದು ಚಿತ್ರಕ್ಕೆ ಅಡ್ವಾನ್ಸ್ ಪಡೆದ ನಂತರ ಆ ಚಿತ್ರ ಮುಗಿಯುವವರೆಗೂ ಬೇರೆ ಚಿತ್ರದ ಅಡ್ವಾನ್ಸ್ ಪಡೆಯುವಂತಿಲ್ಲ. ನಟರ ಸಿಬ್ಬಂದಿಯ ಖರ್ಚನ್ನು ನಿರ್ಮಾಣ ಸಂಸ್ಥೆ ನೋಡಿಕೊಳ್ಳುವುದಿಲ್ಲ, ನಟರೇ ನೋಡಿಕೊಳ್ಳಬೇಕು. ಆಗಸ್ಟ್.16ರಿಂದ ವಾರದಲ್ಲಿ ಇಂತಿಷ್ಟೇ ಸಿನಿಮಾಗಳು ರಿಲೀಸ್ ಆಗಬೇಕು ಎಂದು ನಿಯಮ ಜಾರಿ ತರಬೇಕು.
ಸ್ಟಾರ್ ನಟರ ಸಂಭಾವನೆ ಏರಿಕೆಯಾಗಿದೆ. ಇನ್ಮುಂದೆ ಇಳಿಕೆಯಾಗಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಸಿನಿಮಾಗಳ ಚಿತ್ರೀಕರಣವು ಅಕ್ಟೋಬರ್ 30ರೊಳಗೆ ಮುಗಿಯಬೇಕು. ಬಳಿಕ ನವೆಂಬರ್ 1ರಿಂದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿನಿಮಾರಂಗ ಬಂದ್ ಮಾಡಲಾಗುತ್ತಿದೆ.