ಆಸ್ಕರ್ ಪಡೆದ ಡಾಕ್ಯುಮೆಂಟರಿಯ ಬೆಳ್ಳಿ-ಬೊಮ್ಮನ್ ದಂಪತಿಗೆ ನಾಳೆ ಪ್ರಧಾನಿ ಸನ್ಮಾನ

Public TV
1 Min Read
The Elephant Whisperers 2

ದಿ ಎಲಿಫೆಂಟ್ ವಿಸ್ಪರರ್ಸ್ (The Elephant Whisperers)  ಡಾಕ್ಯುಮೆಂಟರಿಯ ಹೀರೋ ಬೊಮ್ಮನ್ ಹಾಗೂ ನಾಯಕಿ ಬೆಳ್ಳಿಗೆ ನಾಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗೌರವಿಸಲಿದ್ದಾರೆ. ಆಸ್ಕರ್ ಪ್ರಶಸ್ತಿ ಬಂದ ಬೆನ್ನಲ್ಲೇ ದಂಪತಿ ಇರುವ ಸ್ಥಳಕ್ಕೆ ಪ್ರಧಾನಿ ಭೇಟಿಯಾಗಲಿದ್ದು, ಅಲ್ಲಿ ಅವರಿಗೆ ಸನ್ಮಾನ ಮಾಡಲಿದ್ದಾರೆ. ಈ ಹಿಂದೆ ಸೋಷಿಯಲ್ ಮೀಡಿಯಾ ಮೂಲಕ ಈ ದಂಪತಿಗೆ ಮೋದಿ ಶುಭಾಶಯ ಕೋರಿದ್ದರು.

The Elephant Whisperers 1

ಈ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಬಂದ ಬೆನ್ನಲ್ಲೇ ಅಭಿಮಾನದ ಮಹಾಪೂರವೇ ಹರಿದು ಬಂದಿತ್ತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನಾಡಿನ ಬಹುತೇಕ ಗಣ್ಯರು ಎರಡೂ ಚಿತ್ರತಂಡಕ್ಕೆ ಮನಸಾರೆ ಪ್ರಶಂಸಿಸಿದ್ದರು. ಶುಭಾಶಯ ತಿಳಿಸಿದ್ದರು.  ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ (MK Stalin) ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಆಸ್ಕರ್ ಪ್ರಶಸ್ತಿ ವಿಜೇತ ಡಾಕ್ಯುಮೆಂಟರಿಯ ಕಥಾ ನಾಯಕ ಮತ್ತು ನಾಯಕಿಗೆ ಭರ್ಜರಿ ಬಹುಮಾನ ಘೋಷಿಸಿದ್ದರು.

The Elephant Whisperers 3

ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿಯ ನಿಜವಾದ ಹೀರೋ ಬೊಮ್ಮನ್ (Bomman) ಮತ್ತು ಹೀರೋಯಿನ್ ಬೆಳ್ಳಿ (Belli) ಎಂಬ ಮಾವುತ ದಂಪತಿಗಳು. ಈ ಡಾಕ್ಯುಮೆಂಟರಿ ಇವರ ಬದುಕನ್ನೇ ಕೇಂದ್ರೀಕರಿಸಿ ಮಾಡಿದ್ದು. ಹಾಗಾಗಿ ಸ್ಟಾಲಿನ್ ಇವರಿಬ್ಬರನ್ನೂ ಸಿಎಂ ಕಚೇರಿಗೆ ಕರೆಯಿಸಿಕೊಂಡು ನೆನಪಿನ ಫಲಕ ಮತ್ತು ಎರಡು ಲಕ್ಷ ರೂಪಾಯಿ ಬಹುಮಾನ ನೀಡಿದ್ದಾರೆ.

The Elephant Whisperers 4

ಕೇವಲ ಈ ಇಬ್ಬರಿಗೆ ಮಾತ್ರ ಬಹುಮಾನ ನೀಡಿಲ್ಲ. ಆನೆ ಶಿಬಿರದಲ್ಲಿ ಕೆಲಸ ಮಾಡುತ್ತಿರುವ 91 ಮಾವುತರಿಗೂ ತಲಾ ಒಂದೊಂದು ಲಕ್ಷ ರೂಪಾಯಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಾವುತರಿಗೆ ಮನೆ ಕಟ್ಟಿಕೊಡಲು 9.1 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಿಸಿದ್ದಾರೆ. ದಂಪತಿಗೆ ಸನ್ಮಾನಿಸಿ ಚೆಕ್ ನೀಡಿರುವ ಫೋಟೋವನ್ನು ಸ್ಟಾಲಿನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು ಆ ರಾಜ್ಯದ ಅಧಿಕಾರಿಗಳು. ಸ್ಟಾಲಿನ್ ನಡೆಗೆ ಶ್ಲ್ಯಾಘನೆ ವ್ಯಕ್ತವಾಗಿತ್ತು. ಇದೀಗ ಮೋದಿ ಕೂಡ ಸನ್ಮಾನ ಮಾಡುವ ಮೂಲಕ ಗೌರವಿಸುತ್ತಿದ್ದಾರೆ.

Share This Article