ಹಾಸನ: ಕಾನೂನು ಸಂಕಷ್ಟ ಎದುರಿಸುತ್ತಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ (H.D.Revanna) ಒಳ್ಳೆಯದಾಗಲಿ ಎಂದು ಅವರ ಮನೆ ದೇವರು ಈಶ್ವರನ ಪ್ರಸಾದವನ್ನು ಅರ್ಚಕರು ತಂದಿದ್ದಾರೆ.
ದೇವೇಗೌಡರ ಹುಟ್ಟೂರು ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿರುವ ದೇವೇಶ್ವರ ದೇವಾಲಯದಿಂದ ಅರ್ಚಕ ಪ್ರಸಾದ ತಂದಿದ್ದರು. ಅದನ್ನು ಭವಾನಿ ರೇವಣ್ಣ ಅವರಿಗೆ ನೀಡಲು ಅರ್ಚಕರು ಬಂದಿದ್ದರು. ಇದನ್ನೂ ಓದಿ: ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಲುಕ್‌ಔಟ್ ನೋಟಿಸ್
ನಿವಾಸಕ್ಕೆ ಪ್ರಸಾದ ತಂದ ಅರ್ಚಕರನ್ನು ತಡೆದು ಪೊಲೀಸರು ಪ್ರಶ್ನೆ ಮಾಡಿದರು. ಅಲ್ಲದೇ ಪ್ರಸಾದವಿದ್ದ ಬ್ಯಾಗ್‌ನ್ನು ಪರಿಶೀಲನೆ ನಡೆಸಿದರು. ಬ್ಯಾಗ್‌ನಲ್ಲಿ ಪ್ರಸಾದ ಇರುವುದನ್ನು ಕಂಡು ಒಳಗಡೆ ಬಿಟ್ಟರು.
ಮನೆ ಕೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವನ್ನು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಎದುರಿಸುತ್ತಿದ್ದಾರೆ. ಸದ್ಯ ಒಂದು ಪ್ರಕರಣದಲ್ಲಿ ಬಂಧನ ಭೀತಿಯಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಮತ್ತೊಂದು ಪ್ರಕರಣದ ವಿಚಾರಣೆ ಇಂದು ನಡೆಯುತ್ತಿದೆ. ತೀರ್ಪು ಏನಾಗುತ್ತದೋ ಎಂಬ ಆತಂಕ ಅವರಲ್ಲಿ ಮೂಡಿದೆ. ಇದನ್ನೂ ಓದಿ: ಭವಾನಿ ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್
ಸ್ಥಳ ಮಹಜರು ಮಾಡಲು ಎಸ್‌ಐಟಿ ತಂಡ ಹೆಚ್.ಡಿ.ರೇವಣ್ಣ ನಿವಾಸಕ್ಕೆ ಆಗಮಿಸುತ್ತಿದೆ. ಸಂತ್ರಸ್ತ ಮಹಿಳೆ ಜೊತೆ ಸ್ಥಳ ಮಹಜರ್‌ಗೆ ಎಸ್‌ಐಟಿ ತನಿಖಾ ತಂಡ ಆಗಮಿಸುತ್ತಿದೆ.