ಮಿಸ್ ಮ್ಯಾಚ್ ಜೋಡಿ ಎಂದು ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮಿ ಮತ್ತು ಪತಿ ರವೀಂದರ್ ಚಂದ್ರಶೇಖರ್, ಇದೀಗ ಮತ್ತೊಂದು ವಿಚಾರಕ್ಕಾಗಿ ಸುದ್ದಿಯಾಗಿದ್ದಾರೆ. ರವೀಂದರ್ ಇನ್ಸ್ಟಾದಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದು, ನನ್ನ ದಿನಗಳು ಹತ್ತಿರವಾಗಿವೆ ಎನ್ನುವ ಅರ್ಥದಲ್ಲಿ ಅವರು ಬರೆದುಕೊಂಡಿದ್ದಾರೆ. ಕೆಟ್ಟ ದಿನಗಳು ತನ್ನನ್ನು ಆವರಿಸಿಕೊಂಡಿವೆ ಎಂದಿದ್ದಾರೆ.
ಈ ನಡುವೆ ಮಹಾಲಕ್ಷ್ಮಿ ಮತ್ತು ರವೀಂದರ್ ದೂರವಾಗುತ್ತಿದ್ದಾರೆ ಎನ್ನುವ ಮಾತೂ ಹರಿದಾಡುತ್ತಿದೆ. ಮೊನ್ನೆಯಷ್ಟೇ ಮಹಾಲಕ್ಷ್ಮಿ ಸ್ವತಃ ಗಂಡನಿಗೆ ವಾರ್ನ್ ಮಾಡಿದ್ದರು. ನಿರ್ಮಾಪಕ ರವೀಂದರ್ ಚಂದ್ರಶೇಖರ್ (Ravinder Chandrasekaran) ಜೊತೆ ಮದುವೆಯಾದ ದಿನದಿಂದ ಈವರೆಗೂ ಈ ಜೋಡಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇದೆ. ಈ ಬಾರಿ ರವೀಂದರ್ ತಮ್ಮದಷ್ಟೇ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಕಾರಣಕ್ಕಾಗಿ ಮಹಾಲಕ್ಷ್ಮಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸದಾ ಮಹಾಲಕ್ಷ್ಮಿ ಜೊತೆ ಇರುವಂಥ ಫೋಟೋಗಳನ್ನೇ ರವೀಂದರ್ ಶೇರ್ ಮಾಡುತ್ತಿದ್ದರು. ಆದರೆ ಈ ಬಾರಿ ತಮ್ಮದಷ್ಟೇ ಫೋಟೋ ಹಾಕಿಕೊಂಡಿದ್ದಾರೆ. ಹಾಗಾಗಿ ಮಹಾಲಕ್ಷ್ಮಿಯಿಂದ ರವೀಂದರ್ ದೂರವಾಗಿದ್ದಾರೆ ಎನ್ನುವ ಸುದ್ದಿ ಹರಡಿಕೊಂಡಿದೆ. ರವೀಂದರ್ ಜೈಲಿಗೆ ಹೋಗಿ ಬಂದಾಗಿಂದ ಮಹಾಲಕ್ಷ್ಮಿ ದೂರವಾಗಿದ್ದಾರೆ ಎಂದೇ ಹೇಳಲಾಗಿತ್ತು. ಈ ಫೋಟೋ ಅದಕ್ಕೆ ಪುಷ್ಠಿ ನೀಡಿತ್ತು. ಹಾಗಾಗಿ ಮಹಾಲಕ್ಷ್ಮಿ ಗಂಡನಿಗೆ ವಾರ್ನ್ ಮಾಡಿ, ಇನ್ನೆಂದೂ ನಿಮ್ಮದಷ್ಟೇ ಫೋಟೋ ಹಾಕುವಂತಿಲ್ಲವೆಂದು ಹೇಳಿದ್ದಾರಂತೆ.
ನಟಿ ಮಹಾಲಕ್ಷ್ಮಿ (Mahalakshmi) ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರ್ ಸೆಪ್ಟಂಬರ್ 1ರಂದು ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಸುಂದರಿ ಮಹಾಲಕ್ಷ್ಮಿಯು ಹಣಕ್ಕಾಗಿ ಮದುವೆಯಾಗಿದ್ದಾರೆ ಎಂದು ಟ್ರೋಲ್ ಮಾಡಲಾಗಿತ್ತು. ರವೀಂದರ್ ದಪ್ಪ ಅನ್ನುವ ಕಾರಣಕ್ಕಾಗಿ ಈ ಜೋಡಿ ಅಪಹಾಸ್ಯಕ್ಕೆ ಗುರಿಯಾಗಿತ್ತು. ಏನೇ ಹಾಸ್ಯ ಮಾಡಿದರೂ, ಮೊನ್ನೆಯಷ್ಟೇ ಈ ಜೋಡಿ ಒಂದು ವರ್ಷ ದಾಂಪತ್ಯ ಮುಗಿಸಿ ತಣ್ಣಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿತ್ತು.