ಬೆಂಗಳೂರು: ಮುಖ್ಯಮಂತ್ರಿ ಹುದ್ದೆ ಸದ್ಯ ಖಾಲಿ ಇಲ್ಲ. ದೇಶಪಾಂಡೆ ಹಿರಿಯರು, ಅವರ ಅಭಿಪ್ರಾಯ ಗೌರವಿಸುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D K Dhivakumar) ಹೇಳಿದ್ದಾರೆ.ಇದನ್ನೂ ಓದಿ: ಕಿಚ್ಚೋತ್ಸವ: ‘ಬಿಲ್ಲ ರಂಗ ಬಾಷಾ’ ಟೈಟಲ್, ಕಾನ್ಸೆಪ್ಟ್ ವಿಡಿಯೋ ಗಿಫ್ಟ್
ನಗರದಲ್ಲಿ ಮಾತನಾಡಿದ ಅವರು, ಈಗ ಸಿದ್ದರಾಮಯ್ಯನವರು (Siddaramaiah) ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಮುಂದುವರಿಯುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
- Advertisement
- Advertisement
ಇದೇ ವೇಳೆ ಡಾ.ಕೆ. ಸುಧಾಕರ್ (Dr. K Sudhakar) ಅವರ ಕಾಂಗ್ರೆಸ್ ಅವರು ಏನು ಸತ್ಯ ಹರಿಶ್ಚಂದ್ರರಾ? ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಪಾಪ ಅವರು ಮಾತಾಡ್ತಾರೆ, ಮಾತಾಡಲಿ. ಅವರು ಕಾಂಗ್ರೆಸ್‌ನಲ್ಲಿ ಇದ್ದವರಲ್ಲವಾ? ಅವರೇ ಕಾಂಗ್ರೆಸ್ ಬಗ್ಗೆ ಸರ್ಟಿಫಿಕೇಟ್ ಕೊಡಲಿ. ಕೋವಿಡ್ ಅಕ್ರಮ ಆರೋಪ ತನಿಖಾ ವರದಿಯಲ್ಲಿ ಏನಿದೆ ನನಗೇನು ಗೊತ್ತಿಲ್ವಾ ಎಂದು ತಿರುಗೇಟು ಕೊಟ್ಟಿದ್ದಾರೆ.ಇದನ್ನೂ ಓದಿ: ಕಂದಹಾರ್ ವಿಮಾನ ಅಪಹರಣ ಸೀರಿಸ್‌ನಲ್ಲಿ ಹಿಂದೂಗಳಿಗೆ ಅವಮಾನ – ನೆಟ್‌ಫ್ಲಿಕ್ಸ್‌ಗೆ ಸಮನ್ಸ್