ಬೆಂಗಳೂರು: ಅಮಾಯಕ ಜನರನ್ನು ಬೆದರಿಸಿ, ಹಣ ವಸೂಲಿ ಮಾಡುತ್ತಿದ್ದ ಆರೋಪಿಗೆ (Accused) ಪೊಲೀಸರು (Police) ಜನರ ಮುಂದೆಯೇ ಕೈಗೆ ಕೋಳ ತೊಡಿಸಿ, ಮೆರವಣಗೆ (March) ಮಾಡಿ ಆತನಿಗೆ ಶಿಕ್ಷೆ ನೀಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವ ಸುಹೇಲ್‌ನನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿ, ಆತನ ಕೈಗೆ ಬೇಡಿ ಹಾಕಿ, ಇಡೀ ಏರಿಯಾದಲ್ಲಿ ಮೆರವಣಿಗೆ ಮಾಡಿದ್ದಾರೆ. ಆರೋಪಿಗೆ ಬುದ್ಧಿ ಬರಬೇಕು ಹಾಗೂ ಸ್ಥಳೀಯರಿಗೆ ಇಂತಹ ನಟೋರಿಯಸ್‌ಗಳ (Rowdy) ಬಗ್ಗೆ ಧೈರ್ಯ ಬರಬೇಕು ಎಂಬ ಕಾರಣಕ್ಕೆ ಪೊಲೀಸರು ಆತನ ಮೆರವಣಿಗೆ ನಡೆಸಿದ್ದಾರೆ.
Advertisement
Advertisement
ಸುಹೇಲ್ ಕೊಲೆ ಯತ್ನ, ವ್ಯಾಪಾರಿಗಳಿಗೆ ಬೆದರಿಕೆ ಸೇರಿದಂತೆ 15 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಇತ್ತೀಚೆಗೆ ಆರೋಪಿ ಡ್ರಗ್ಸ್ ಕೇಸ್‌ನಲ್ಲೂ ಸಿಕ್ಕಿ ಬಿದ್ದಿದ್ದಾನೆ. ಆತ ನಟೋರಿಯಸ್ ಅಫೆಂಡರ್ ಆಗಿ ಕುಖ್ಯಾತಿಯನ್ನೂ ಪಡೆದಿದ್ದಾನೆ. ಇದನ್ನೂ ಓದಿ: ಗಡಿ ಕನ್ನಡಿಗರಿಗೆ ಶಿಂಧೆ ಸರ್ಕಾರ ಬೆದರಿಕೆ- 11 ತಾಲೂಕಿನ ಗ್ರಾ.ಪಂಚಾಯ್ತಿ ವಿಸರ್ಜನೆ ಎಚ್ಚರಿಕೆ
Advertisement
Advertisement
ಪೊಲೀಸರು ಇದೀಗ ಸುಹೇಲೆ ಜನರಿಗೆ ಬೆದರಿಕೆ ಹಾಕಿದ್ದ ಏರಿಯಾಗಳಲ್ಲೆಲ್ಲಾ ಆತನ ಕೈಗೆ ಕೋಳ ತೊಡಿಸಿ ಮೆರವಣಿಗೆ ಮಾಡಿದ್ದಾರೆ. ಈ ಮೂಲಕ ಈತನಿಂದ ಜನರು ಇನ್ನು ಭಯಪಡುವ ಅಗತ್ಯವಿಲ್ಲ ಎಂದು ಸಂದೇಶ ನೀಡಿದ್ದಾರೆ. ಇದನ್ನೂ ಓದಿ: ಬೆಳಗಾವಿ – ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಪುನರಾರಂಭ