ಬೆಂಗಳೂರು: ಕೆಲ ದಿನಗಳ ಹಿಂದೆಯಷ್ಟೇ ಶಿವಾಜಿನಗರದ ಮನೆಯೊಂದರಲ್ಲಿ ಕಾಣೆಯಾಗಿದ್ದ ಸೈಬೀರಿಯನ್ ಹಸ್ಕಿ (Siberian Husky) ತಳಿಯ ರಾಲ್ಫ್ ಹೆಸರಿನ ಕುರುಡು ಶ್ವಾನವನ್ನ ಪೊಲೀಸರು (Police) ಪತ್ತೆಹಚ್ಚಿ, ರಕ್ಷಣೆ ಮಾಡಿ ಮಾಲೀಕರಿಗೆ ಒಪ್ಪಿಸಿದ್ದಾರೆ.
ಶಿವಾಜಿನಗರದ (Shivajinagara) ರಮ್ಯಾ ಎಂಬವರ ಮನೆಯಲ್ಲಿ ಸಾಕಿದ್ದ ಹಸ್ಕಿ ತಳಿಯ ಕುರುಡು ಶ್ವಾನ ಆ.22 ರಂದು ಕಾಣೆಯಾಗಿತ್ತು. ಈ ಸಂಬಂಧ ಕಮರ್ಷಿಯಲ್ ಠಾಣೆಗೆ ರಮ್ಯಾ ಅವರು ದೂರು ನೀಡಿದ್ದರು. ಅಲ್ಲದೇ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಅವರಲ್ಲೂ ಶ್ವಾನ ಪತ್ತೆಗೆ ಮನವಿ ಮಾಡಿದ್ದರು. ಶ್ವಾನ ಮಾಲೀಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು (Police), ಪತ್ತೆ ಕಾರ್ಯಾಚರಣೆ ನಡೆಸುತ್ತಿದ್ದರು.
Advertisement
Advertisement
ರಾಲ್ಫ್‌ಗೆ ವಯೋ ಸಹಜವಾಗಿ ಕಣ್ಣು ಕಾಣಿಸುತ್ತಿರಲಿಲ್ಲ. ಹಾಗಾಗಿ ಮಾಲೀಕರಾದ ರಮ್ಯಾ ಮತ್ತು ಕುಟುಂಬದವರು ಹೆಚ್ಚಿನ ಕಾಳಜಿ ವಹಿಸಿ ನೋಡಿಕೊಳ್ಳುತ್ತಿದ್ದರು. ಆಗಸ್ಟ್ 22ರಂದು ರಾಲ್ಫ್ ಇದ್ದಕ್ಕಿದ್ದಂತೆ ಇನ್ಫ್ಯಾಂಟ್ರಿ ರಸ್ತೆಯ ತಮ್ಮ ಮನೆಯಿಂದ ಕಾಣೆಯಾಗಿತ್ತು. ರಸ್ತೆ ಬದಿಯಲ್ಲಿದ್ದ ಹಸ್ಕಿ ನೋಡಿದ್ದ ಆಟೋ ಡ್ರೈವರ್ ಒಬ್ಬ ಬ್ರೀಡಿಂಗ್ ಮಾಡುವವರಿಗೆ ಈ ಶ್ವಾನವನ್ನ ಮಾರಾಟ ಮಾಡಿದ್ದ. ಆದ್ರೆ ಇದು ಕುರುಡು ಶ್ವಾನವಾಗಿದ್ದರಿಂದ ಲಾಭವಿಲ್ಲವೆಂದು ಪುನಃ ಬೀದಿಗೆ ಬಿಟ್ಟಿರುವುದಾಗಿ ತಿಳಿದುಬಂದಿದೆ. ಅಂತೂ ಗಲ್ಲಿ-ಗಲ್ಲಿಯಲ್ಲಿ ಹುಡುಕಾಡಿ ಪೊಲೀಸರು ಶ್ವಾನವನ್ನ ಪತ್ತೆಹಚ್ಚಿ ಮಾಲೀಕರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಪ್ರಜ್ಞಾನ್ ರೋವರ್‌ಗೆ ಎದುರಾಯ್ತು ದೊಡ್ಡ ಕುಳಿ, ಮಾರ್ಗ ಬದಲಿಸಿದ ಇಸ್ರೋ – ಇನ್ನು 10 ದಿನ ಮಾತ್ರ ಬಾಕಿ
Advertisement
Advertisement
ದೃಷ್ಟಿಯಿಲ್ಲದ ಶ್ವಾನ ರಾಲ್ಫ್ ಕೊನೆಗೂ ಪೊಲೀಸರು ಬೆಳಕಾಗಿದ್ದು, ಈ ಸಂತಸವನ್ನ ಕುಟುಂಬ ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ. ರಾಲ್ಫ್ ಪತ್ತೆ ಮಾಡಿದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ಹಾಗೂ ಡಿಸಿಪಿ ಭೀಮಾಶಂಕರ್ ಗುಳೇದ್ ಕುಟುಂಬಸ್ಥರು ಧನ್ಯವಾದ ಅರ್ಪಿಸಿದೆ. ಇದನ್ನೂ ಓದಿ: 15 ದಿನಗಳ ನಿತ್ಯ 5 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಿ – ಕರ್ನಾಟಕಕ್ಕೆ CWRC ಆದೇಶ
Web Stories