– ಪ್ರತಿ ತಿಂಗಳು ಕಮಿಷನ್ ವಸೂಲಿ ಮಾಡುತ್ತಿದ್ದರು ಎಂದ ಹೀನಾ
ದಾವಣಗೆರೆ: ಕುರಾನ್ (Quran) ಸತ್ಯವಾಗಿ ನನ್ನ ಪತಿಗೆ ಯಾವ್ದೇ ರೋಗ ಇರಲಿಲ್ಲ. ನಮ್ಮ ಮನೆಯಲ್ಲಿ ಹುಡುಕಾಡಿದರೂ ಒಂದೇ ಒಂದು ಗುಳಿಗೆ ಸಿಗಲ್ಲ, ಪೊಲೀಸರೇ ನನ್ನ ಪತಿಯನ್ನ ಹೊಡೆದು ಕೊಂದಿದ್ದಾರೆ ಎಂದು ಮೃತ ಆದಿಲ್ ಪತ್ನಿ ಹೀನಾ ಬಾನು (Heena banu) ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮೃತ ಆದಿಲ್ ಪತ್ನಿ ಹೀನಾ ಬಾನು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಶಿವಣ್ಣನನ್ನು ವಿಶೇಷ ರೀತಿಯಲ್ಲಿ ಬರಮಾಡಿಕೊಂಡ ‘ಉತ್ತರಕಾಂಡ’ ಟೀಮ್
Advertisement
Advertisement
ನನ್ನ ಪತಿ ಮಟ್ಕಾ ಆಡಿಸುತ್ತಿದ್ದದ್ದು ಸತ್ಯ. ಪೊಲೀಸರು (Channagiri Police) ಪ್ರತಿ ತಿಂಗಳು ಕಮಿಷನ್ ವಸೂಲಿ ಮಾಡುತ್ತಿದ್ದರು. ಮನೆ ಹತ್ತಿರವೇ ಬಂದು ಕಮಿಷನ್ ವಸೂಲಿ ಮಾಡುತ್ತಿದ್ದರು. ಒಂದು ತಿಂಗಳು ಕಮಿಷನ್ ಕೊಡದೇ ಇದ್ದಿದ್ದಕ್ಕೆ ಸಿವಿಲ್ ಡ್ರೆಸ್‌ನಲ್ಲಿ ಬಂದು ಕರೆದುಕೊಂಡು ಹೋಗಿದ್ದರು. ಶುಕ್ರವಾರ (ಮೇ 24) ಸಂಜೆ ಕರೆದುಕೊಂಡು ಹೋದ್ರು ಎಲ್ಲಿಗೆ ಅಂತ ಹೇಳಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
ನನ್ನ ಗಂಡನನ್ನ ಪೊಲೀಸರೇ ಕೊಂದಿದ್ದಾರೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಅವರು ಹೊಡೆದ ಮೇಲೆ ಮೂರ್ಛೆ ರೋಗ ಅಂತ ಸುಳ್ಳು ಹೇಳುತ್ತಿದ್ದಾರೆ. ಕುರಾನ್ ಸತ್ಯವಾಗಿಯೂ ನನ್ನ ಗಂಡನಿಗೆ ಯಾವುದೇ ರೋಗ ಇರಲಿಲ್ಲ. ಇಡೀ ಮನೆ ಹುಡುಕಿದರೂ ಒಂದು ಗುಳಿಗೆ ಸಿಗೋಲ್ಲ. ನನಗೆ ನ್ಯಾಯ ಸಿಗಬೇಕು. ನನ್ನ ಗಂಡ ಏನ್ ತಪ್ಪು ಮಾಡಿದ್ದ ಅಂತ ಹೊಡೆದು ಕೊಂದಿದ್ದಾರೆ ಅನ್ನೋದು ಗೊತ್ತಾಗಬೇಕು ಎಂದು ಆಗ್ರಹಿಸಿದ್ದಾರೆ.
Advertisement
ನನ್ನ ಗಂಡ ಬಹಳ ಪ್ರೀತಿಯಿಂದ ನೋಡಿಕೊಳ್ತಿದ್ದ. ಈಗ ನನಗೂ ನನ್ನ ಮಕ್ಕಳಿಗೂ ಯಾರು ಗತಿ? ಪೊಲೀಸರು ನನ್ನ ಗಂಡನನ್ನ ಬದುಕಿಸಿಕೊಡ್ತಾರಾ? ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: IPL 2024: ಫೈನಲ್ ಪಂದ್ಯಕ್ಕೆ ʻರೆಮಲ್ʼ ಚಂಡಮಾರುತದ ಆತಂಕ – ಮಳೆ ಅಡ್ಡಿಯಾದ್ರೆ ವಿಜೇತರನ್ನ ನಿರ್ಧರಿಸೋದು ಹೇಗೆ?
ಮೃತ ಆದಿಲ್ ತಂದೆ ಹೇಳಿದ್ದೇನು?
ಆದಿಲ್ ಪೊಲೀಸರ ಹಲ್ಲೆಯಿಂದ ಮೃತಪಟ್ಟಿಲ್ಲ, ಲೋ ಬಿಪಿಯಿಂದ ಮೃತಪಟ್ಟಿದ್ದಾನೆ. ಆತನಿಗೆ ಯಾವುದೇ ರೀತಿಯ ಮೂರ್ಛೆ ರೋಗ ಇರಲಿಲ್ಲ. ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ, ಮಟ್ಕಾ ಆಡ್ತಾ ಇರಲಿಲ್ಲ. ಮಗ ಸಾವನ್ನಪ್ಪಿದ್ದಕ್ಕೆ ನ್ಯಾಯ ಕೇಳಲು ಬಂದಿದ್ದೆವು. ಈ ವೇಳೆ ಪೊಲೀಸ್ ಠಾಣೆ ಮೇಲೆ ಯಾರು ಕಲ್ಲು ಹೊಡೆದಿದ್ದಾರೋ ಗೊತ್ತಿಲ್ಲ. ನಾನು ನನ್ನ ಮಗನನ್ನ ಕಳೆದುಕೊಂಡಿದ್ದೇನೆ. ಈ ವಯಸ್ಸಲ್ಲಿ ನನಗೆ ದುಡಿಯೋಕೆ ಆಗುತ್ತಾ? ಸರ್ಕಾರ ನಮಗೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಿಎಂ, ಡಿಸಿಎಂ ಧರ್ಮಸ್ಥಳ ಪ್ರವೇಶಿಸ್ತಿದ್ದಂತೆಯೇ ಜೈ ಶ್ರೀರಾಮ್ ಘೋಷಣೆ ಕೂಗಿದ ಭಕ್ತರು!
6-7 ನಿಮಿಷ ಕೂಡ ಆರೋಪಿ ಇರಲಿಲ್ಲ:
ಪ್ರಕರಣದ ಕುರಿತು `ಪಬ್ಲಿಕ್ ಟಿವಿ’ ಜೊತೆ ಮಾತನಾಡಿರುವ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್, ಪೊಲೀಸರು ಆದಿಲ್‌ನನ್ನ ಠಾಣೆಗೆ ಕರೆತಂದಿದ್ದರು. ಕೆಲವೇ ಕ್ಷಣಗಳಲ್ಲಿ ಆತ ಕುಸಿದು ಬಿದ್ದ ಹಿನ್ನೆಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆಸ್ಪತ್ರೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿ ನಮ್ಮ ಪೊಲೀಸ್ ಠಾಣೆಯಲ್ಲಿ 6 ರಿಂದ 7 ನಿಮಿಷ ಕೂಡ ಇರಲಿಲ್ಲ. ಆದ್ರೆ ಕುಟುಂಬಸ್ಥರು ಲಾಕಪ್ ಡೆತ್ ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿ ಕೂಡ ಸಿಸಿ ಕ್ಯಾಮೆರಾ ಇದೆ. ಎಲ್ಲಾ ಪರಿಶೀಲನೆ ಮಾಡಲಾಗುತ್ತಿದೆ. ಪ್ರಾಮಾಣಿಕ ತನಿಖೆ ಮಾಡುತ್ತೇವೆ. ಮೃತರ ತಂದೆ ದೂರು ಕೊಟ್ಟಿದ್ದಾರೆ, ತನಿಖೆ ಆಗುತ್ತಿದೆ ಎಂದು ಭರವಸೆ ನೀಡಿದ್ದಾರೆ.
ಏನಿದು ಪ್ರಕರಣ?
ಮಟ್ಕಾ ಆಡಿಸುತ್ತಿದ್ದ ಎಂಬ ಆರೋಪದ ಮೇಲೆ ಆರೋಪಿ ಆದಿಲ್‌ನನ್ನ ಚನ್ನಗಿರಿ ಪೊಲೀಸರು ವಶಕ್ಕೆ ಪಡೆದಿದ್ದರು. ಇದ್ದಕ್ಕಿದ್ದಂತೆ ಆರೋಪಿಗೆ ಬಿಪಿ ಲೋ (ರಕ್ತದೊತ್ತಡ ಕಡಿಮೆ) ಆದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆರೋಪಿ ಆದಿಲ್ ಮೃತಪಟ್ಟಿದ್ದಾನೆ. ಪೊಲೀಸರ ಕಸ್ಟಡಿಯಲ್ಲಿ ಇರುವಾಗಲೇ ಆದಿಲ್ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಕುಟುಂಬಸ್ಥರು ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಬಳಿಕ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಪ್ರತಿಭಟನಾಕಾರರು ಪೊಲೀಸ್ ಜೀಪನ್ನೇ ಧ್ವಂಸಗೊಳಿಸಿದ್ದಾರೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಕೂಡಾ ಗಾಯಗೊಂಡಿದ್ದಾರೆ.