ಬೆಂಗಳೂರು: ರೋಹಿಣಿ ಸಿಂಧೂರಿ (Rohini Sindhuri) ಪತಿ ಸುಧೀರ್ ರೆಡ್ಡಿ (Sudhir Reddy) ನೀಡಿದ ದೂರಿನ ಮೇರೆಗೆ ಪೆಟಿಷನ್ ಸಿದ್ಧಮಾಡಿಕೊಂಡಿರುವ ಬಾಗಲಗುಂಟೆ ಠಾಣೆ ಪೊಲೀಸರು, ಎಫ್‌ಐಆರ್ ಮಾಡಬೇಕಾ? ಬೇಡವಾ? ಅಂತಾ ಹಿರಿಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಮೊರೆ ಹೋಗಿದ್ದಾರೆ.
ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ (D Roopa Moudgil), ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನು ಜಾಲತಾಣಗಳಲ್ಲಿ ಹರಿಬಿಟ್ಟ ನಂತರ ಸುಧೀರ್ ರೆಡ್ಡಿ ಡಿ. ರೂಪಾ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಗೆ (Bagalagunte Police Station) ದೂರು ನೀಡಿದ್ದರು. ಈ ದೂರನ್ನ ಪೊಲೀಸ್ರು ಪೆಟಿಷನ್ ಮಾಡಿಕೊಂಡಿದ್ದಾರೆ.
- Advertisement3
ಸೋಮವಾರ ದೂರು ಪಡೆದಿದ್ದ ಬಾಗಲಗುಂಟೆ ಪೊಲೀಸರು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಪೆಟಿಷನ್ ಮಾಡ್ಕೊಂಡಿದ್ದಾರೆ. ಎನ್‌ಸಿಆರ್ ದಾಖಲಿಸಿದ್ದರೆ ಗಂಭೀರವಲ್ಲದ ಪ್ರಕರಣ ಅಂತ ಪರಿಗಣಿಸಬಹುದಿತ್ತು. ಹೀಗಾಗಿ ಪೆಟಿಷನ್ ಮಾಡ್ಕೊಂಡ್ರೆ ಮುಂದೆ ಎಫ್‌ಐಆರ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ಇಬ್ಬರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸರ್ಕಾರ- ಐಪಿಎಸ್ ರೂಪಾ, ಐಎಎಸ್ ರೋಹಿಣಿ ಸಿಂಧೂರಿ ವರ್ಗಾವಣೆ
- Advertisement
ಪೆಟಿಷನ್ ಮಾಡ್ಕೊಂಡು ಮುಂದಿನ ನಡೆ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸುತ್ತಿದ್ದಾರೆ. ನಿನ್ನೆ ದೂರು ಕೊಟ್ಟಿದ್ದು ಇನ್ನೂ ಎಫ್‌ಐಆರ್ ಆಗದ ಹಿನ್ನೆಲೆಯಲ್ಲಿ ರೋಹಿಣಿ ಕುಟುಂಬ ಕೋರ್ಟ್ ಮೊರೆ ಹೋಗಿ ಎಫ್‌ಐಆರ್ (FIR) ಮಾಡಿಸಲು ತಯಾರಿ ಸಹ ನಡೆಸಿದೆ.
ಒಟ್ಟಿನಲ್ಲಿ ರೂಪಾ ವಿರುದ್ಧ ಎಫ್‌ಐಆರ್ ದಾಖಲಾದರೆ ಬಾಗಲಗುಂಟೆ ಠಾಣೆಗೆ ಹಾಜರಾಗಿ ರೂಪಾ ಮೊಬೈಲ್ ಹ್ಯಾಕ್ ಆರೋಪದ ಬಗ್ಗೆ ಸ್ಪಷ್ಟನೆ ನೀಡಬೇಕಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಇಬ್ಬರು ಮಹಿಳಾ ಅಧಿಕಾರಿಗಳಿಗೆ ಸರ್ಕಾರದಿಂದ ಖಡಕ್ ಸೂಚನೆ
ರೂಪಾ ವಿರುದ್ಧ ದೂರಿನಲ್ಲಿ ಏನಿತ್ತು?
ನನ್ನ ಧರ್ಮಪತ್ನಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳನ್ನ ರೂಪಾ ಅವರು ಸಾಮಾಜಿಕ ಜಾಲಾತಾಣದಲ್ಲಿ ಹಾಕಿ ಸಿಂಧೂರಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ರೂಪಾ ಅವರು ವೈಯಕ್ತಿಕ ಫೋಟೋಗಳನ್ನ ಹಂಚಿಕೊಂಡಿರೋದು ನೋಡಿದ್ರೆ ಅವರೇ ಹ್ಯಾಕ್ ಮಾಡಿರುವ ಅನುಮಾನ ಗೋಚರಿಸುತ್ತಿದೆ. ಆದ್ದರಿಂದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡುತ್ತಿರುವ ರೂಪಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಫೋಟೋಗಳು ಸಿಕ್ಕಿದ್ದರ ಹಿಂದಿನ ಸತ್ಯಾಸತ್ಯತೆಯನ್ನ ತನಿಖೆ ಮೂಲಕ ಬಹಿರಂಗಪಡಿಸಬೇಕು ಎಂದು ಸುಧೀರ್ ರೆಡ್ಡಿ ದೂರಿನಲ್ಲಿ ಉಲ್ಲೇಖಿಸಿದ್ದರು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k