ನಟಿ ಕೀರ್ತಿ ಸುರೇಶ್ (Keerthy Suresh) ಒಂದು ತಮಾಷೆಯ ವೀಡಿಯೋವನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ಲ್ಯಾಸ್ಟಿಕ್ ರಿವಾಲ್ವರ್ ಹಿಡಿದು ರೀಲ್ಸ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.
View this post on Instagram
ಅದೇ ವೀಡಿಯೋವನ್ನೇ ಇನ್‌ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಆಟಿಕೆ ಗನ್‌ನಲ್ಲಿ (Dummy Revolver) ಡಮ್ಮಿ ಬುಲೆಟ್ ಇಟ್ಟು ಗೋಡೆಗೆ ಗುರಿ ಇಟ್ಟಿದ್ದಾರೆ. ದುರಾದೃಷ್ಟವಶಾತ್ ಅದು ರೀಲ್ಸ್ ಮಾಡುತ್ತಿದ್ದ ವೀಡಿಯೋಗ್ರಾಫರ್ ಕಣ್ಣಿಗೆ ತಲುಗಿದೆ. ಈ ವಿಚಾರವನ್ನ ಕೀರ್ತಿ ತಮಾಷೆಯಿಂದ ಬರೆದುಕೊಂಡಿದ್ದಾರೆ.
ʻರಿವಾಲ್ವರ್ ರೀಟಾʼ (Revolver Rita) ಚಿತ್ರದ ಮೂಲಕ ಸೌಂಡ್ ಮಾಡ್ತಿರುವ ಕೀರ್ತಿ. ಸಿನಿಮಾಕ್ಕೆ ಸಂಬಂಧಪಟ್ಟ ರೀಲ್ಸ್ ಮಾಡಲು ಹೋಗಿ ಈ ಅವಾಂತರ ಮಾಡಿಕೊಂಡಿದ್ದಾರೆ. ನೋಡಲು ಫನ್ನಿಯಾಗಿದೆ. ಈ ವೀಡಿಯೋಗೆ ಕೀರ್ತಿ “ನನ್ನ ಗೂಳಿ ಕಣ್‌ಗಳಿಂದ ಇಟ್ಟ ಗುರಿ ವೀಡಿಯೋಗ್ರಾಫರ್ ಕಣ್ಣನ್ನೇ ಹಿಟ್ ಮಾಡಿದೆʼ ಅಂತ ಬರೆದುಕೊಂಡಿದ್ದಾರೆ. ಇದು ಕೀರ್ತಿಗೆ ತಮಾಷೆಯಾದ್ರೆ ವಿಡಿಯೋಗ್ರಾಫರ್‌ಗೆ ಫಜೀತಿ ತಂದಿದೆ.


