ಮಂಗಳೂರು (Mangalore) ಮೂಲದ ನಟಿಯೊಬ್ಬರ (Actress) ತಾಯಿ (Mother) ಬಳಿ ವ್ಯಕ್ತಿಯೊಬ್ಬ ಹಣ ಪೀಕಿದ ಘಟನೆ ಮಂಗಳೂರಿನ ಪಾಂಡೇಶ್ವರ (Pandeshwar) ಮಹಿಳಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸ್ ಯೂನಿಫಾರಂನಲ್ಲೇ ಬಂದಿದ್ದ ವ್ಯಕ್ತಿಯೊಬ್ಬ ‘ತಾನು ಪೊಲೀಸ್. ನೀವು ಹಣ ಕೊಡದೇ ಇದ್ದರೆ ನಿಮ್ಮ ಮನೆಯ ಮೇಲೆ ದಾಳಿ ಮಾಡಲಾಗುತ್ತದೆ’ ಎಂದು ನಟಿಯ ತಾಯಿಗೆ ಹೆದರಿಸಿ ಅವರಿಂದ 38 ಸಾವಿರ ರೂಪಾಯಿ ವಸೂಲಿ ಮಾಡಿಕೊಂಡಿದ್ದಾನೆ. ಈ ಕುರಿತು ನಟಿಯ ತಾಯಿ ದೂರು ಕೂಡ ನೀಡಿದ್ದಾರೆ.
Advertisement
ನಟಿಯ ತಾಯಿಯ ಮನೆಗೆ ಬಂದಿದ್ದ ವ್ಯಕ್ತಿಯು ತನ್ನನ್ನು ತಾನು ಮಹಿಳಾ ಠಾಣೆ ಪೊಲೀಸ್ ಶಿವರಾಜ್ ದೇವಾಡಿಗ ಅಂತ ಪರಿಚಯ ಮಾಡಿಕೊಂಡಿದ್ದಾನೆ. ಸಾಹೇಬ್ರು ಈಗ ರೈಡ್ ಮಾಡ್ತಾರೆ. ಗೂಗಲ್ ಪೇ ಮಾಡಿದ್ರೆ ರೈಡ್ ಮಾಡಲ್ಲ ಎಂದು ಬೆದರಿಕೆ ಹಾಕಿದ್ದಾನೆ. ತನ್ನ ನಂಬರಿನಿಂದ ಕರೆ ಮಾಡಿ ಅದೇ ನಂಬರ್ ಗೆ ಆನ್ ಲೈನ್ ಹಣ ಹಾಕಿಸಿಕೊಂಡಿದ್ದಾನೆ. ಸಾಹೇಬ್ರ ಜೊತೆ ಸಹಕರಿಸಿದ್ರೆ ದಂಧೆಗೆ ತೊಂದರೆ ಆಗಲ್ಲ ಅಂತಾ ಹೇಳಿದ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ನಟಿಯ ತಾಯಿ. ಇದನ್ನೂ ಓದಿ: ಮತ್ತೆಂದೂ ಮದುವೆಯಾಗಲಾರೆ ಎಂದು ಘೋಷಿಸಿದ ನಟಿ ರಾಖಿ ಸಾವಂತ್
Advertisement
Advertisement
‘ಬಂದವನು ಖಾಕಿ ಪ್ಯಾಂಟ್, ಖಾಕಿ ಶೂ ಹಾಕಿದ್ದ. ಅವನು ಪೊಲೀಸ್ ಹೌದಾ ಅಥವಾ ಅಲ್ಲವೊ ಅನ್ನೋದು ಇನ್ನು ಗೊತ್ತಾಗಿಲ್ಲ. ಆದ್ರೆ ಬಂದವನು ಪೊಲೀಸ್ ಹಾಗೆ ಇದ್ದ. ಹೊಸ ಕಮಿಷನರ್ ಬಂದಿದ್ದಾರೆ ಅವರ ಟೇಬಲ್ ಮೇಲೆ ಫೈಲ್ ಇದೆ, ಸಿಸಿಟಿವಿ ಆಫ್ ಮಾಡಿಸಿ ಫೈಲ್ ತಗಿಯೋಕೆ 10 ಸಾವಿರ ಸಿಬ್ಬಂದಿಗೆ ಕೊಡಬೇಕು. ಕಮಿಷನರ್ ಕಚೇರಿಯ 22 ಸಿಬ್ಬಂದಿಗೆ ಹಣ ನೀಡಬೇಕೆಂದು ಹೇಳಿದ’ ಎಂದಿದ್ದಾರೆ ಆ ಮಹಿಳೆ.