ಮೈಸೂರು: ಮಹಾರಾಜರ ಗೆಟಪ್‌ನಲ್ಲಿ (Maharaja Dress) ಬಂದು ವ್ಯಕ್ತಿಯೊಬ್ಬರು ಮತದಾನ (Vote) ಮಾಡಿದ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.
ಮೈಸೂರಿನ ಕುವೆಂಪುನಗರದ (Kuvempu Nagar) ವಿವೇಕಾನಂದ ಸರ್ಕಲ್ ಬಳಿಯ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರು ವಿಶೇಷವಾಗಿ ಮಹಾರಾಜರ ಉಡುಗೆ ತೊಟ್ಟು ಮತದಾನಕ್ಕೆ ಆಗಮಿಸಿ ಜನರನ್ನು ಆಕರ್ಷಿಸಿದ್ದಾರೆ. ಇದನ್ನೂ ಓದಿ: ಮೂಲಭೂತ ಸೌಕರ್ಯ ಕೊರತೆ ಆರೋಪ – ಮಹದೇಶ್ವರ ಬೆಟ್ಟ ವ್ಯಾಪ್ತಿಯ 5 ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ
ಕುವೆಂಪುನಗರದ ನಿವಾಸಿ ಉಮಾಕಾಂತ್ ಎಂಬ ವ್ಯಕ್ತಿ ಮಹಾರಾಜರ ಗೆಟಪ್‌ನಲ್ಲಿ ಬಂದು ಮತದಾನ ಮಾಡಿ ವಿಶೇಷವಾಗಿ ತಮ್ಮ ಹಕ್ಕನ್ನು ಚಲಾಯಿಸಿದ್ದು, ಇವರ ಮಹಾರಾಜರ ತೊಡುಗೆ ನೋಡುಗರ ಗಮನಸೆಳೆದಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಉತ್ತಮವಾದ ವಾತಾವರಣ ಇದೆ: ಸಿದ್ದರಾಮಯ್ಯ