Bengaluru City
ನಡುರಸ್ತೆಯಲ್ಲೇ ಅಡ್ಡಗಟ್ಟಿ ಐ ಲವ್ ಯು ಹೇಳ್ತಾನೆ-ಸಿಲಿಕಾನ್ ಸಿಟಿಯೊಲ್ಲೊಬ್ಬ ವಿಕೃತಕಾಮಿ

ಬೆಂಗಳೂರು: ಸೈಕೋ ವರ್ತನೆ ವಿಕೃತಕಾಮಿಯನ್ನು ನಗರದ ಹೊರವಲಯದ ಅವಲಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನಾರಾಯಣ್ ಕುಮಾರ್ ಬಂಧಿತ ಸೈಕೋ. ಮಹಿಳೆಯರು ಮನೆ ಕೆಲಸ ಮಾಡುವಾಗ, ರಸ್ತೆಯಲ್ಲಿ ನಡೆದು ಹೋಗುವಾಗ ಕಾಮ ದೃಷ್ಟಿಯಿಂದ ನೋಡಿ ಐ ಲವ್ ಯು ಅಂತಾ ಹೇಳಿ ನಾರಾಯಣ್ ಕಿರುಕುಳ ನೀಡುತ್ತಿದ್ದನಂತೆ. ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿತ್ತಗನೂರು ಕಾಲೋನಿಯಲ್ಲಿ ಬುಧವಾರ ಮಹಿಳೆ ಶಿಶುಮಂದಿರದಿಂದ ಮಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮಹಿಳೆಯನ್ನು ಅಡ್ಡಗಟ್ಟಿದ ನಾರಾಯಣ್ ಐ ಲವ್ ಯು ಅಂತಾ ಹೇಳಿ ತನ್ನ ಜೊತೆ ಬರಬೇಕೆಂದು ಪೀಡಿಸಿದ್ದಾನೆ.
ನಾರಾಯಣ್ ಜೊತೆ ಮಹಿಳೆ ಹೋಗಲು ಒಪ್ಪದಿದ್ದಾಗ ಬಟ್ಟೆ ಹರಿದು ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಹಿಳೆಯ ಸಹಾಯಕ್ಕೆ ಬಂದ ಆಕೆಯ ಅತ್ತೆ-ಮಾವನ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಸಂತ್ರಸ್ತ ಮಹಿಳೆ ನಾರಾಯಣ್ ವಿರುದ್ಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ಬಳಿಕ ನಾರಾಯಣ್ ಪತ್ನಿ ಮತ್ತು ಮಕ್ಕಳು ಮಹಿಳೆಯ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ.
ಈಗಾಗಲೇ ಆರೋಪಿ ನಾರಾಯಣ್ ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರಾಯಣ್ ಕುಟುಂಬಸ್ಥರ ಮೇಲೆಯೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews
