ಕಾರವಾರ: ರಾಜ್ಯದಲ್ಲಿ ಕಾಂಗ್ರೆಸ್ (Congress) ನಾಯಕರ ಮ್ಯೂಸಿಕಲ್ ಚೇರ್ ಆಸೆಗೆ ರಾಜ್ಯದ ಜನ ಬಲಿಯಾಗುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಗೆದ್ದ ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಸಿಗಬೇಕು ಎಂದರೆ ಸುರ್ಜೆವಾಲ ಹತ್ತಿರ ಹೋಗುವ ಸ್ಥಿತಿ ಉದ್ಭವ ಆಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕಿಡಿಕಾರಿದ್ದಾರೆ.
ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾದ ಮಿರ್ಜಾನ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರು (Siddaramaiah) ಮುಖ್ಯಮಂತ್ರಿ ಅಂತ ಇಲ್ಲಿಯವರೆಗೆ ನಾವು ಅಂದುಕೊಂಡಿದ್ದೆವು. ಆದರೆ ಸೂಪರ್ ಸಿಎಂ ಬಗ್ಗೆ ಜನ ಚರ್ಚೆ ಮಾಡುತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಗೆದ್ದ ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಸಿಗಬೇಕು ಎಂದರೆ ಸುರ್ಜೆವಾಲರ ಹತ್ತಿರ ಹೋಗುವ ಸ್ಥಿತಿ ಉದ್ಭವ ಆಗಿದೆ. ಹೀಗಾಗಿಯೇ ರಾಜ್ಯಸರ್ಕಾರ ಯಾರಿಗೆ ಸಿಎಂ ಸ್ಥಾನ ಕೊಟ್ಟಿದೆ ಎಂದು ಜನ ಚರ್ಚೆ ಮಾಡುತಿದ್ದಾರೆ. ಅದರ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಏಯ್.. ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ – ದರ್ಶನ್ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್ ವಾರ್ನಿಂಗ್
ಇನ್ನು ಸರ್ಕಾರದಲ್ಲಿ ಒಬ್ಬರಿಗೆ ಸಿಎಂ ಕುರ್ಚಿ ಉಳಿಸಿಕೊಳ್ಳಬೇಕು ಅಂತ, ಮತ್ತೊಬ್ಬರಿಗೆ ಸಿಎಂ ಕುರ್ಚಿಮೇಲೆ ಕಣ್ಣು, ಮತ್ತೊಬ್ಬರಿಗೆ ಉಪಮುಖ್ಯಮಂತ್ರಿ ಸಿಎಂ ಆದರೇ ಉಪಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣು, ಡಿಸಿಎಂ ಮುಖ್ಯಮಂತ್ರಿ ಆದ್ರೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು ಒಟ್ಟಿನಲ್ಲಿ ಮ್ಯೂಸಿಕಲ್ ಚೇರ್ ಎನ್ನುವಂತಾಗಿದೆ. ಕಾಂಗ್ರೆಸ್ ನಾಯಕರ ಮ್ಯೂಸಿಕಲ್ ಚೇರ್ ಆಸೆಗೆ ರಾಜ್ಯದ ಜನ ಬಲಿಯಾಗುತಿದ್ದಾರೆ. ಜನಗಳಿಗೆ ತೆರಿಗೆ ಹಾಕಿ ಲೂಟಿ ಮಾಡುತಿದ್ದಾರೆ. ನಾನು ಮುಂದಿನ ಚುನಾವಣೆಗೆ ನಿಲ್ಲುವ ಬಗ್ಗೆ ಆಲೋಚನೆ ಮಾಡಿಲ್ಲ. ಕುಮಾರಣ್ಣ ರಾಜ್ಯದ ಮುಖ್ಯಮಂತ್ರಿ ಆಗಬೇಕು. ನನ್ನ ಹೋರಾಟ ಜೆಡಿಎಸ್ ಕಟ್ಟಬೇಕು, ಪಕ್ಷ ದಡ ಮುಟ್ಟಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಭೀಮನ ಅಮಾವಾಸ್ಯೆಯಂದು ಗಂಡನ ಪೂಜೆ ಮಾಡಿ ಆತ್ಮಹತ್ಯೆ ಕೇಸ್ – ಪತಿಗೆ ಅನೈತಿಕ ಸಂಬಂಧದ ಶಂಕೆಯಿಂದ ಪತ್ನಿ ಸೂಸೈಡ್