ಬೆಂಗಳೂರು: ನಮ್ಮ ಮನೆಗೆ ಬೆಂಕಿ ಹಚ್ಚಿದವರನ್ನು ಪಕ್ಷದ ಅಧ್ಯಕ್ಷರು ಜೊತೆಯಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ ಎಂದು ಹೆಸರು ಹೇಳಿದೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಆರೋಪ ಮಾಡಿದರು.
ಡಿಜೆ ಹಳ್ಳಿ, ಕೆಜಿ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದೆ ಎಂಬ ಕಾರಣಕ್ಕೆ ನನ್ನ ಮೇಲೆ ಹಿರಿಯ ನಾಯಕರು ಷಡ್ಯಂತ್ರ ರೂಪಿಸಿದರು. ಈ ಚುನಾವಣೆಯಲ್ಲಿ ಟಿಕೆಟ್ ಕೂಡ ತಪ್ಪಿಸಿದರು. ನನ್ನನ್ನು ಸೋಲಿಸಲು ಪ್ರಯತ್ನಿಸಿದರು. ಉಳಿದ ಶಾಸಕರಿಗಾದರೂ ನ್ಯಾಯ ಕೊಡಿ ಅವರಿಗೆ ಅನ್ಯಾಯ ಮಾಡಬೇಡಿ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ವಿವಾದ – ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
2020 ರಲ್ಲಿ ನನ್ನ ಮನೆಗೆ ಬೆಂಕಿ ಹಾಕಿ ಪೊಲೀಸ್ ಠಾಣೆಗೂ ಬೆಂಕಿ ಹಚ್ಚಿದ್ದರು. ಗಾಡಿಗಳಿಗೂ ಬೆಂಕಿ ಹಾಕಿದ್ದರು. ಸಿಸಿಟಿವಿ ಫೂಟೇಜ್ ನೋಡಿಯೆ ಆರೋಪಿಗಳನ್ನ ಹುಡುಕಿ ಕೇಸು ಹಾಕಿದ್ದಾರೆ. ಅಮಾಯಕರನ್ನ ಕೇಸಿನಿಂದ ಅವಾಗಲೇ ಕೈ ಬಿಟ್ಟಿದ್ದಾರೆ. ಈಗ ಈ ಬೆಳವಣಿಗೆ ಆಗಿದೆ. ಇದರ ಹಿಂದೆ ಯಾರೋ ಕಿಂಗ್‌ಪಿನ್ ಇದ್ದಾರೆ. ಹಿರಿಯ ನಾಯಕರ ಶಡ್ಯಂತ್ರ ಇದೆ ಎಂದು ಆರೋಪಿಸಿದರು.
ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಕೋರ್ಟ್‌ಗೂ ಮನವಿ ಮಾಡುತ್ತೇನೆ. ನಮ್ಮ ವಕೀಲರ ಮೂಲಕ ಸರ್ಕಾರದ ನಡೆ ಬಗ್ಗೆ ಕೋರ್ಟ್‌ಗೆ ಮನವಿ ಮಾಡುತ್ತೇನೆ. ಅಮಾಯಕರಿದ್ದರೆ ಅವರನ್ನ ಬಿಡಿ ಎಂದು ಹಿಂದೆ ನಾನೇ ಹೇಳಿದ್ದೆ. ಸಿಸಿ ಕ್ಯಾಮೆರಾ ಫೂಟೇಜ್ ನೋಡಿಯೆ ಪೊಲೀಸರು ಹಾಗೂ ಎನ್‌ಐಎ ತಪ್ಪಿತಸ್ಥರನ್ನ ಬಂಧಿಸಿರುವುದು. ಈಗ ಹೀಗೆ ಮಾಡುವುದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಫ್ರೆಂಡ್ಸ್ ನಡುವಿನ ಘಟನೆಯನ್ನ ಎಲ್ಲಿಗೋ ತೆಗೆದುಕೊಂಡು ಹೋಗ್ಬೇಡಿ: ಉಡುಪಿ ಕೇಸ್ ಬಗ್ಗೆ ಪರಮೇಶ್ವರ್ ಪ್ರತಿಕ್ರಿಯೆ
ನಾನು ದಲಿತ ಶಾಸಕ. ನನಗೆ ರಕ್ಷಣೆ ಕೊಡಲಿಲ್ಲ. ಅಂದು ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ತನ್ವಿರ್ ಸೇಠ್ ಪತ್ರದ ಹಿಂದೆ ಹಿರಿಯ ನಾಯಕರು ಇದ್ದಾರೆ. ನಾನು 2018 ರಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದೆ. ಸಿಎಂ ಹಾಗೂ ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ಸರ್ಕಾರದ ಈ ನಡೆ ವಿರುದ್ಧ ಕೋಟ್‌ನಲ್ಲೂ ಹೋರಾಟ ಮಾಡ್ತೀನಿ ಎಂದು ತಿಳಿಸಿದರು.
ಆರೋಪಿಗಳನ್ನ ಬಿಡುಗಡೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ಹಾಗೂ ಸಂಪತ್ ರಾಜು ವಿರುದ್ಧ ಅಖಂಡ ಶ್ರೀನಿವಾಸ ಮೂರ್ತಿ ಗುಡುಗಿದರು.
Web Stories