ಬೆಂಗಳೂರು: ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಶಿವಕುಮಾರ ಸ್ವಾಮೀಜಿಗಳ ಬೆಂಬಲವಿದೆ ಎಂದಿದ್ದ ನೀರಾವರಿ ಸಚಿವ ಎಂಬಿ ಪಾಟೀಲ್ ಹೇಳಿಕೆಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಕಛೇರಿಯಲ್ಲಿ ಮಾತಾನಾಡಿದ ಅವರು ಪ್ರತ್ಯೇಕ ಧರ್ಮ ಸ್ಥಾಪನೆ ವಿಚಾರವು ಅವರ ಸಮುದಾಯಕ್ಕೆ ಸಂಬಂಧಿಸಿದ ಆಂತರಿಕ ವಿಚಾರವಾಗಿದ್ದು, ಸಮಾಜದವರು ಕುಳಿತುಕೊಂಡು ಸಮಸ್ಯೆಯನ್ನು ಒಳ್ಳೆಯ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕೆಂಬ ಎಂಬ ಸಲಹೆಯನ್ನು ನೀಡಿದರು.
Advertisement
ಇದನ್ನೂ ಓದಿ:ಸಚಿವ ಎಂ.ಬಿ.ಪಾಟೀಲ್ ರಿಂದ ಹೊಸ `ಸಿಡಿ’ ಬಾಂಬ್!
Advertisement
ಇದೇ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಉಪಾಧ್ಯಾಕ್ಷ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲು ಸಿದ್ಧ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಎಲ್ಲರು ಇದನ್ನೇ ಬಯಸುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಬೇಕು ಎಂದರು.
Advertisement
ರಾಹುಲ್ ಗಾಂಧಿ ಕ್ಯಾಲಿಫೊರ್ನಿಯದಲ್ಲಿ ತಮ್ಮ ಮನ ಬಿಚ್ಚಿ ಮಾತಾನಾಡಿದ್ದಾರೆ. ಅಲ್ಲದೆ ಎಲ್ಲ ಪ್ರಶ್ನೆಗಳಿಗೂ ಸೌಮ್ಯವಾಗಿ ಉತ್ತರಿಸಿದ್ದು ಅಭಿನಂದನಾರ್ಹವಾಗಿದೆ. ಬಿಜೆಪಿಯವರು ರಾಹುಲ್ ಅವರನ್ನು ರಾಜಕೀಯವಾಗಿ ಮೂಲೆ ಗುಂಪು ಮಾಡಲು ಪ್ರಯತ್ನಿಸುತ್ತಿದ್ದಾರೆ. ಅದರಿಂದಲೆ ಇದನ್ನು ವಿರೋಧ ಮಾಡುತ್ತಿದ್ದಾರೆ ಎಂದರು.
Advertisement
ಇದನ್ನೂ ಓದಿ: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಹಿನ್ನಡೆ, ಎಂಬಿ ಪಾಟೀಲ್‍ಗೆ ಭಾರೀ ಮುಖಭಂಗ
ಕಾಂಗ್ರೆಸ್ ಪಕ್ಷದಲ್ಲಿ ಕೆಲಸದ ಸಮಸ್ಯೆಯಿಂದ ಕಳೆದ ಬಾರಿ ಸೋತ್ತಿದ್ದು ನಿಜ. ಅದನ್ನು ರಾಹುಲ್ ಮುಕ್ತವಾಗಿ ಒಪ್ಪಿಕೊಂಡಿದ್ದು ಅದರಲ್ಲಿ ಯಾವುದೇ ತಪ್ಪಿಲ್ಲ. ರಾಹುಲ್ ಪ್ರಧಾನಿ ಅಭ್ಯರ್ಥಿಯಾಗುವುದು ನಮ್ಮೆಲ್ಲರ ಅಭಿಪ್ರಾಯವಾಗಿದೆ. ಮುಂದಿನ ಬಾರಿ ಗೆಲುವಿಗಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತೇವೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರು ಸಹ ಸಿಎಂ ಅಗುವ ಕನಸ್ಸನ್ನು ಹೊಂದಿದ್ದಾರೆ, ಕನಸ್ಸು ಎಲ್ಲ ರಾಜಕಾರಣಿಗಳಿಗೂ ಇರುತ್ತದೆ. ಹೀಗಿರುವಾಗ ರಾಹುಲ್ ಗಾಂಧಿ ಬಗ್ಗೆ ಹೀಗೆ ಹೇಳುವುದು ಸರಿ ಅಲ್ಲ ಎಂದು ತಿರುಗೇಟು ನೀಡಿದರು.