ಕೋಲಾರ: ಮುಂದಿನ ವಿಧಾನಸಭಾ ಚುನಾವಣೆ (Vidhanasabha Election) ಗೆ ಸಿದ್ದರಾಮಯ್ಯ ಕೋಲಾರ (Kolar) ಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಅದನ್ನು ಈವರೆಗೂ ಖಚಿತ ಪಡಿಸಿಲ್ಲ. ಕ್ಷೇತ್ರದಲ್ಲಿ ನಾಡಿಮಿಡಿತ ಅರಿಯುವುದಕ್ಕೆ ಬಂದ ಸಿದ್ದರಾಮಯ್ಯ ಭೇಟಿ ಕೊಲಾರ ಕ್ಷೇತ್ರದಲ್ಲಿ ಸಂಚಲನ, ವಿರೋಧಿ ನಾಯಕರಿಗೆ ತಳಮಳ ಆರಂಭವಾಗಿದೆ.
Advertisement
ಹೌದು, ರಾಜ್ಯದಲ್ಲಿ ಈಗ ಚುನಾವಣೆ ಹತ್ತಿರವಾಗುತ್ತಿದ್ದು ದಿನೇದಿನೇ ಚರ್ಚೆಗಳು ಗರಿಗೆದರುತ್ತಿವೆ. ಅದರಲ್ಲೂ ಚಿನ್ನದ ನಾಡು ಕೋಲಾರದ ಜಿಲ್ಲಾ ಕೇಂದ್ರ ಕೋಲಾರ ಈಗ ಸಾಕಷ್ಟು ಗಮನಸೆಳೆಯುತ್ತಿದೆ. ಕಾರಣ ಸಿದ್ದರಾಮಯ್ಯ (Siddaramaiah) ಕೋಲಾರ ಕ್ಷೇತ್ರದಲ್ಲಿಯೇ ಸ್ಪರ್ಧಿಸುತ್ತಾರೆ ಎನ್ನೋದು. ಸ್ಪರ್ದೆಯನ್ನು ಈವರೆಗೂ ಖಚಿತಪಡಿಸದ ಸಿದ್ದು ಸಂಪೂರ್ಣವಾಗಿ ತಳ್ಳಿಯೂ ಹಾಕಿಲ್ಲ. ನಿನ್ನೆ ಕೋಲಾರ (Kolar) ಕ್ಕೆ ಬಂದಾಗಲೂ ಸಹ ಸ್ಪರ್ದೆ ಖಚಿತ ಪಡಿಸಿಲ್ಲ. ಆದ್ರೆ ಈಗಾಗಲೆ ವಿರೋಧಿಗಳ ಪಾಳಯದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಪ್ರತಿಕ್ರಿಯೆಗಳು ಆರಂಭವಾಗಿವೆ. ಸಿದ್ದರಾಮಯ್ಯ ಇಲ್ಲಿಗೆ ಬಂದರೆ ಸೋಲಿಸುತ್ತೇವೆ ಎಂದು ಬಿಜೆಪಿಯ ನಾಯಕರು ಹೇಳುತ್ತಿದ್ದಾರೆ.
Advertisement
Advertisement
ಕ್ಷೇತ್ರದಲ್ಲಿ ಈಗಾಗಲೆ ಎರಡು ಬಾರಿ ಪಕ್ಷೇತರ ಶಾಸಕರಾಗಿದ್ದ ವರ್ತೂರು ಪ್ರಕಾಶ್ (Varthur Prakash) ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಲು ಆರಂಭಿಸಿದ್ದಾರೆ. ತಮ್ಮದೇ ಕಾರ್ಯಕರ್ತರ ಪಡೆ ಹೊಂದಿರುವ ವರ್ತೂರು ಪ್ರಕಾಶ್‍ಗೆ ಈ ಬಾರಿ ಬಿಜೆಪಿ (BJP) ಕಾರ್ಯಕರ್ತರ ಸೇರ್ಪಡೆಯಾಗಲಿದೆ, ಹಾಗಾಗಿ ಹೊಸ ಹುರೂಪಿನಲ್ಲಿಯೇ ಓಡಾಡುತ್ತಿರುವ ವರ್ತೂರು ಸಮೂದಾಯಗಳ ಮತಗಳನ್ನು ಪಡೆಯಲು ಕಸರತ್ತು ಆರಂಭಿಸಿ ಆಗಿದೆ. ಇದನ್ನೂ ಓದಿ: ಬಾದಾಮಿಯಲ್ಲಿ ಸ್ಪರ್ಧೆ ಇಲ್ಲ: ಸಿದ್ದರಾಮಯ್ಯ ಅಧಿಕೃತ ಘೋಷಣೆ
Advertisement
ಕೋಲಾರ ಕಾಂಗ್ರೆಸ್‍ನಲ್ಲಿ ಎರಡು ಬಣಗಳಿರೋದು ಈಗಾಗಲೆ ಜಗಜ್ಜಾಹೀರು. ಮಾಜಿ ಸಂಸದ ಕಾಂಗ್ರೆಸ್ ಹಿರಿಯ ನಾಯಕರಾದ ಮುನಿಯಪ್ಪ (Muniyappa) ಮತ್ತು ರಮೇಶ್ ಕುಮಾರ್ (Ramesh Kumar) ನಡುವಿನ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈ ಗುಂಪುಗಾರಿಕೆಯನ್ನ ಸರಿ ಮಾಡದಿದ್ದರೆ ಸಿದ್ದರಾಮಯ್ಯಗೆ ಮುಳುವಾಗುವ ಸಾಧ್ಯತೆ ಇದೆ.
ಸದ್ಯ ಕೋಲಾರ ಕ್ಷೇತ್ರದಲ್ಲಿ ಮಿಂಚಿನ ಸಂಚಾರದಿಂದಾಗಿ ಸಿದ್ದರಾಮಯ್ಯ ಜಿಲ್ಲೆಯಲ್ಲಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದಾರೆ. ಸ್ವಜಾತಿಯ ನಾಯಕನ ಪ್ರಬಲ ಪೈಪೋಟಿ, ಕಾಂಗ್ರೆಸ್‍ನ ಹಿರಿಯರಿಬ್ಬರ ಮುಸುಕಿನ ಗುದ್ದಾಟ ಸಿದ್ದುಗೆ ಗುದ್ದಾಗಿ ಪರಿಣಮಿಸಲಿದ್ದು, ಬಿಜೆಪಿ, ಜೆಡಿಎಸ್ ಭಯ ಕೂಡ ಕಾಡುತ್ತಿರೋದು ಸುಳ್ಳಲ್ಲ.