ಬೆಂಗಳೂರು: ಸ್ಯಾಂಡಲ್‍ವುಡ್ ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ ನೀಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ. ತಮ್ಮದೇ ಸ್ವಂತ ಪಕ್ಷ ಕಟ್ಟಿಕೊಂಡಿರುವ ಉಪೇಂದ್ರ ಉತ್ತಮ ಆಡಳಿತ ನಡೆಸುವುದು ಹೇಗೆ ಎಂಬುದನ್ನು ಟ್ವಿಟ್ಟರ್‍ನಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಭಾನುವಾರ ಭ್ರಷ್ಟಾಚಾರ ಎಲ್ಲೆಡೆ ಹಬ್ಬಿಕೊಂಡಿದ್ದು, ಅದನ್ನು ನಿವಾರಿಸಬೇಕು ಎಂಬುದರ ಬಗ್ಗೆ ಕೆಲವು ಸಾಲುಗಳುಳ್ಳ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರ ಪೌರ ಕಾರ್ಮಿಕರಿಂದ ಹಿಡಿದು ಮಂತ್ರಿಮಂಡಲದವರಗೂ ಹಬ್ಬಿರುವುದನ್ನು ತಡೆಯಲು ಒಂದೇ ಮಾರ್ಗ- ಅದುವೇ ಸಂಪೂರ್ಣ ಪಾರದರ್ಶಕತೆ ಅಂತಾ ಶೀರ್ಷಿಕೆ ಹಾಕಿ ಬರೆದಿದ್ದಾರೆ.
Advertisement
ಸಂಪೂರ್ಣ ಪಾರದರ್ಶಕತೆ ಹೇಗೆ?:
ತಂತ್ರಜ್ಞಾನದ ಬಳಕೆಯಿಂದ ದೃಶ್ಯ ಮಾಧ್ಯಮಗಳ ಮೂಲಕ (ಲೈವ್ ಟಿವಿ, ಮೊಬೈಲ್ ನೋಟಿಫಿಕೇಶನ್, ಫೇಸ್‍ಬುಕ್, ಟ್ವಿಟ್ಟರ್ ಇತರೆ ಸಾಮಾಜಿಕ ಜಾಲತಾಣಗಳು ಹಾಗು ಸಿಸಿಟಿವಿ ಇತ್ಯಾದಿಗಳ ಮೂಲಕ) ಪ್ರಜೆಗಳ ತೆರಿಗೆ ಹಣದ ಉಪಯೋಗ ಎಲ್ಲಿ, ಯಾರಿಗೆ, ಯಾವಾಗ, ಎಷ್ಟು ಆಗುತ್ತಿದೆ ಮತ್ತು ಅವುಗಳ ಜವಾಬ್ದಾರಿಯನ್ನು ಯಾರು ಹೊರುತ್ತಾರೆ ಎಂಬ ಸಂಪೂರ್ಣ ವಿವರಗಳನ್ನು ತೆರೆದಿಡಬೇಕು. ಎಲ್ಲ ವಿವರಗಳನ್ನು ಗ್ರಾಮ, ವಾರ್ಡ್, ತಾಲೂಕು, ಜಿಲ್ಲೆಗಳ ಪ್ರಕಾರ ಸಾರ್ವಜನಿಕವಾಗಿ ತೆರೆದಿಟ್ಟಾಗ ಭ್ರಷ್ಟಾಚಾರ ಕಡಿಮೆಯಾಗಿವುದರ ಜೊತೆಗೆ ಪ್ರಜೆಗಳು ಅನಿಸಿಕೆ, ತಿದ್ದುವಿಕೆ ಹಾಗು ಶ್ಲಾಘನೆ ಮಾಡುವುದರ ಮೂಲಕ ಆಡಳಿತದಲ್ಲಿ ಭಾಗವಹಿಸಿದಾಗ ನಿಜವಾದ ಪ್ರಜಾಪ್ರಭುತ್ವದ ಅರ್ಥ ಸಿಗುತ್ತದೆ. ಅಲ್ಲದೇ ಇದನ್ನು ಮಾಡಿದ್ದಲ್ಲಿ ನಮ್ಮ ರಾಜ್ಯದ ಚಿತ್ರಣವೇ ಸುಂದರವಾಗಿ ಬದಲಾಗುತ್ತದೆ ಎಂದು ಉಪೇಂದ್ರ ಬರೆದುಕೊಂಡಿದ್ದಾರೆ.
Advertisement
— Upendra (@nimmaupendra) July 8, 2018
Advertisement
ಒಟ್ಟಿನಲ್ಲಿ ಕಾರಣಾಂತರಗಳಿಂದ ವಿಧಾನಸಭಾ ಚುನಾವಣೆಯಿಂದ ದೂರ ಉಳಿದಿದ್ದ ಉಪೇಂದ್ರ 2019ರ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಇದೂವರೆಗೂ ಉಪೇಂದ್ರ ಮಾತ್ರ ಲೋಕಸಭಾ ಚುನಾವಣೆಯ ಸ್ಪರ್ಧೆಯ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಆದ್ರೆ ತಮ್ಮಲ್ಲಿರುವ ಐಡಿಯಾಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
Advertisement
— Upendra (@nimmaupendra) July 8, 2018