ಆನೇಕಲ್: ಪಟ್ಟಣದಲ್ಲಿ ಮತ್ತೆ ಡಬಲ್ ಬ್ಯಾರಲ್ ಗನ್ ಸದ್ದು ಮಾಡಿದೆ. ಇಬ್ಬರ ಜಗಳ ಬಿಡಿಸಲು ಹೋದಾಗ ಮೂರನೆ ವ್ಯಕ್ತಿಗೆ ಗುಂಡೇಟು ತಗುಲಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ (Anekal) ತಾಲೂಕಿನ ಸಿಡಿ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ.
ಸಂಪಂಗಿ ಗುಂಡೇಟು ತಿಂದ ವ್ಯಕ್ತಿಯಾಗಿದ್ದು, ಚಂದ್ರಶೇಖರ್ ಗನ್ ನಿಂದ ಗುಂಡು ಹಾರಿಸಿರುವ ಆರೋಪಿ. ಚಂದ್ರಶೇಖರ್ ಹಾಗೂ ಶ್ರೀನಿವಾಸ್ ಸಿಡಿ ಹೊಸಕೋಟೆ (Hosakote) ಗ್ರಾಮದ ಮುನಿರಾಜು ವೆಂಬು ಅವರ ಮಗನಾಗಿದ್ದು ತಂದೆ ಮಕ್ಕಳು ಇಬ್ಬರು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಳ್ಳುತ್ತಿದ್ದರು. ಇದೇ ಸಮಯದಲ್ಲಿ ಹಲ್ಲೆ ಮಾಡುತ್ತಿದ್ದಾಗ ಬಿಡಿಸಲು ಮುನಿರಾಜು ಅವರ ಅಣ್ಣನಾದ ಸಂಪಂಗಿ ಹಾಗೂ ಪತ್ನಿ ಬಂದಿದ್ದಾರೆ.
ಬಂದು ಸಮಾಧಾನ ಮಾಡಲು ಬಂದಿದ್ದ ಚಂದ್ರಶೇಖರ್ ಸಂಪಂಗಿಯ ಮೇಲೆ ಫೈರಿಂಗ್ ಮಾಡಿದ್ದಾನೆ. ಸಂಪಂಗಿಯ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಆನೇಕಲ್‌ನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಲಾಗಿದೆ ಹೆಚ್ಚಿನ ಚಿಕಿತ್ಸೆಗಾಗಿ ಸಂಪಂಗಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ವಕ್ಫ್ ಆಸ್ತಿ ವಿವಾದದ ಕಿಚ್ಚು – ರಾಜ್ಯಾದ್ಯಂತ ಇಂದು ಬಿಜೆಪಿ ಪ್ರತಿಭಟನೆ
ಈ ಸಂಬಂಧ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಉಡುಪಿ| ಮಗುವಿನ ಮೇಲೆ ಹಲ್ಲೆ ನಡೆಸಿದ್ದ ತಾಯಿ, ಆಕೆಯ ಪ್ರಿಯಕರನಿಗೆ ನ್ಯಾಯಾಂಗ ಬಂಧನ