ಕರ್ನಾಟಕಕ್ಕೆ ಸಮೃದ್ಧ ಇತಿಹಾಸವಿದೆ. ಎಲ್ಲ ವಿಷಯಗಳಲ್ಲೂ ಕನ್ನಡ ಮುಂದಿದೆ. ನಾನು ಕೆಲಸ ಮಾಡುತ್ತಿರುವ ಸಿನಿಮಾ ಇಂಡಸ್ಟ್ರಿಯಲ್ಲಿ ಈಗಾಗಲೇ ಸಾಕಷ್ಟು ಮಹಿನಿಯರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಹಾಗಾಗಿ ನಾವು ಕೀಳರಮೆ ಬಿಟ್ಟರೆ ಎಂತಹ ಗೆಲುವನ್ನು ಬೇಕಾದರೂ ಸಾಧಿಸಬಹುದು ಎಂದಿದ್ದಾರೆ ನಟ ಯಶ್. ಪಬ್ಲಿಕ್ ಟಿವಿಯೊಂದಿಗೆ ಎಕ್ಸಕ್ಲೂಸಿವ್ ಆಗಿ ಮಾತನಾಡಿದ ಅವರು ಈ ಹಿಂದೆ ತಾವು ಸಾಗಿ ಬಂದ ಹಾದಿಯನ್ನೂ ಅವರು ನೆನಪಿಸಿಕೊಂಡರು. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್
Advertisement
‘ನಾನು ಯಾವಾಗಲೂ ದೊಡ್ಡ ಕನಸನ್ನೇ ಕಾಣುತ್ತೇನೆ. ಸೋಲಿನ ಬಗ್ಗೆ ಯಾವತ್ತೂ ತಲೆ ಕಡೆಸಿಕೊಳ್ಳುವುದಿಲ್ಲ. ಗೆಲ್ಲಲು ಹೋರಟವನಿಗೆ ಸೋಲು ದೊಡ್ಡದಾಗಬಾರದು. ಹಾಗಾಗಿ ನಾನು ಯಾವತ್ತೂ ಕೀಳರಿಮೆ ಇಟ್ಟುಕೊಳ್ಳದೇ, ನನಗೆ ಬೆಸ್ಟ್ ಅನಿಸಿದನ್ನೇ ಮಾಡುತ್ತಾ ಬಂದಿದ್ದೇನೆ. ಬಹುಶಃ ಅದೇ ನನ್ನನ್ನು ಕೈ ಹಿಡಿದಿದೆ’ ಎನ್ನುವುದು ಯಶ್ ಮಾತು. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್
Advertisement
Advertisement
ಕನ್ನಡ ಸಿನಿಮಾ ರಂಗ ಸಣ್ಣದು, ಮಾರುಕಟ್ಟೆ ಇಲ್ಲ ಎಂದು ಯಾರಾದರೂ ಹೇಳಿದಾಗ ಯಶ್ ಅವರಿಗೆ ಎಲ್ಲಿಲ್ಲದ ಕೋಪ ಬರುತ್ತಿತ್ತಂತೆ. ಆ ಕುರಿತು ಅವರು ಮಾತನಾಡಿದ್ದಾರೆ. ‘ಯಾವ ಇಂಡಸ್ಟ್ರಿ ಕೂಡ ಚಿಕ್ಕದಲ್ಲ. ಯಾರಾದರೂ, ಹಾಗೆ ಹೇಳಿದರೆ ನನಗೆ ಕೋಪ ಬರುತ್ತಿತ್ತು. ಯಾರನ್ನೋ ಕೇಳಿಕೊಳ್ಳೋದು, ಬೇಡಿಕೊಳ್ಳೋದು ನನಗೆ ಇಷ್ಟವಾಗಲ್ಲ. ಇದು ತೋರಿಕೆಯ ಪ್ರಪಂಚ. ನಾವು ಏನು ಅಂತ ತೋರಿಸಲೇಬೇಕು. ಎಲ್ಲದಕ್ಕಿಂತ ಆತ್ಮವಿಶ್ವಾಸ ಮುಖ್ಯ. ಅದೆಲ್ಲವನ್ನೂ ಇಟ್ಟುಕೊಂಡು ನಾನು ಹೆಜ್ಜೆ ಇಟ್ಟಿ. ಕೆಜಿಎಫ್ ಸಿನಿಮಾ ನನ್ನಿಂದ ಆಗಿದೆ ಎಂದು ಯಾವತ್ತೂ ಹೇಳಲ್ಲ. ಅದು ತಂಡದ ಪರಿಶ್ರಮ. ಆ ಶ್ರಮವೇ ಇವತ್ತು ದೊಡ್ಡ ಮಟ್ಟದ ಸಕ್ಸಸ್ ಗೆ ಕಾರಣವಾಗಿದೆ’ ಎಂದರು ಯಶ್.
Advertisement