ಬೆಂಗಳೂರು: ಮಲೇಷ್ಯಾದ ಸೆಲಂಗೋರ್‌ನಲ್ಲಿ ಅಂತಾರಾಷ್ಟ್ರೀಯ ಟೇಕ್ವಾಂಡೋ ಒಕ್ಕೂಟ ಆಯೋಜಿಸಿರೋ ಹ್ವಾರಂಗ್ ವಾರಿಯರ್ ಗ್ರ್ಯಾಂಡ್ ಚಾಂಪಿಯನ್‍ಷಿಪ್‍ಗೆ (Hwa Rang Warrior Grand Championship) ಎನ್‍ಎಫ್‍ಸಿ ಕ್ಲಬ್‍ನಿಂದ 15 ಆಟಗಾರರು ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
Advertisement
ಬೆಂಗಳೂರಿನ ಹೆಬ್ಬಾಳದ ಕೆಂಪಾಪುರದಲ್ಲಿರೋ ಎನ್‍ಎಫ್‍ಸಿ ಕ್ಲಬ್ (NFC Club) ಪ್ರತಿಭಾನ್ವಿತ ಆಟಗಾರರಿಗೆ ಖ್ಯಾತಿಯಾಗಿದೆ. ಕೋಚ್ ಕೆ. ಪವನ್ ಗರಡಿಯಲ್ಲಿ ಈ ಆಟಗಾರರು ಪಳಗಿದ್ದು, ಆಯ್ಕೆಯಾಗಿರೋ ಈ 15 ಆಟಗಾರರು ಈ ಹಿಂದೆ, ರಾಷ್ಟ್ರೀಯ ಹಾಗೂ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದನ್ನೂ ಓದಿ: Champions Trophy 2025 | ಭಾರತದ ಗೆಲುವಿಗೆ ಕ್ರೀಡಾಭಿಮಾನಿಗಳಿಂದ `ಬೆಸ್ಟ್ ಆಫ್ ಲಕ್’
Advertisement
ಮೇ 1ರಿಂದ 4ರ ವರೆಗೆ ಈ ವರ್ಲ್ಡ್ ಚಾಂಪಿಯನ್‍ಷಿಪ್ ನಡೆಯಲಿದ್ದು, ಸುಮಾರು 40ಕ್ಕೂ ಹೆಚ್ಚು ರಾಷ್ಟ್ರಗಳು ಭಾಗವಹಿಸುತ್ತಿವೆ. ಭಾರತ ತಂಡವನ್ನು ಪ್ರತಿನಿಧಿಸುತ್ತಿರೋ ಎನ್‍ಎಫ್‍ಸಿ ಕ್ಲಬ್‍ನ ಆಟಗಾರರು ಪದಕ ಗೆಲ್ಲೋ ವಿಶ್ವಾಸವನ್ನು ಕೋಚ್ ಕೆ. ಪವನ್ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Champions Trophy 2025 | ಆಲ್ ದಿ ಬೆಸ್ಟ್ ಟೀಂ ಇಂಡಿಯಾ – ನಾಡಿನಾದ್ಯಂತ ಅಭಿಮಾನಿಗಳಿಂದ ಶುಭ ಹಾರೈಕೆ