ವಾಷಿಂಗ್ಟನ್: ಕಾಶ್ಮೀರದ ಪಹಲ್ಗಾಮ್ ದಾಳಿಯನ್ನು (Pahalgam Terror Attack) ಉಗ್ರರ ದಾಳಿ ಎಂದು ಬರೆಯದ ಅಮೆರಿಕ ನ್ಯೂಯಾರ್ಕ್ ಟೈಮ್ಸ್ (The New York Times) ವರದಿಯನ್ನು ಅಮೆರಿಕ ಸರ್ಕಾರ (US Government) ಟೀಕಿಸಿದೆ.
ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ ʼMilitantsʼ ಎಂದು ಹೆಡ್ಲೈನ್ ಹಾಕಿ ವರದಿ ಮಾಡಿತ್ತು. ಆದರೆ ಅಮೆರಿಕದ House Foreign Affairs Committee Majority ಸಾಮಾಜಿಕ ಜಾಲತಾಣದಲ್ಲಿ Militants ಇರುವ ಜಾಗದಲ್ಲಿ ʼTerroristʼ ಎಂದು ಹಾಕಿ ಪೋಸ್ಟ್ ಮಾಡಿದೆ. ಇದನ್ನೂ ಓದಿ: Pahalgam Terror Attack – ಅಗತ್ಯ ಬಿದ್ರೆ ಭಾರತದೊಂದಿಗೆ ನಿಲ್ಲುತ್ತೇವೆ: ಇಸ್ರೇಲ್
Hey, @nytimes we fixed it for you. This was a TERRORIST ATTACK plain and simple.
Whether it’s India or Israel, when it comes to TERRORISM the NYT is removed from reality. pic.twitter.com/7PefEKMtdq
— House Foreign Affairs Committee Majority (@HouseForeignGOP) April 23, 2025
ತನ್ನ ಪೋಸ್ಟ್ನಲ್ಲಿ ನಾನು ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಸರಿ ಮಾಡಿದ್ದೇವೆ. ಭಾರತವಾಗಲಿ ಅಥವಾ ಇಸ್ರೇಲ್ನಲ್ಲಿ ನಡೆಯಲಿ ಇದು ಭಯೋತ್ಪಾದಕ ದಾಳಿ ಎಂದು ಬರೆದುಕೊಂಡಿದೆ.
ಮೊದಲಿನಿಂದಲೂ ಜಮ್ಮು ಕಾಶ್ಮೀರದಲ್ಲಿ ಉಗ್ರರು ದಾಳಿ ಮಾಡಿದಾಗ ಪಾಶ್ಚಿಮಾತ್ಯ, ಅಮೆರಿಕ, ಮಧ್ಯಪ್ರಾಚ್ಯದಲ್ಲಿರುವ ಮಾಧ್ಯಮಗಳು ಅವರನ್ನು ಉಗ್ರರು ಎಂದು ಕರೆಯುವುದಿಲ್ಲ. ಪ್ರತ್ಯೇಕವಾದಿಗಳು, ಬಂಡುಕೋರರು, ಸ್ವತಂತ್ರ ಹೋರಾಟಗಾರರು ಎಂಬ ಬಣ್ಣ ಬಣ್ಣದ ಪದಗಳನ್ನು ಬಳಸಿ ಅವರ ಮೇಲೆ ವಿಶ್ವದ ಜನರು ಅನುಕಂಪ ಬರುವಂತಹ ವರದಿಗಳನ್ನು ಪ್ರಕಟಿಸುತ್ತಿದ್ದವು, ಈಗಲೂ ಪ್ರಕಟಿಸುತ್ತಲೇ ಇದೆ. ಇದನ್ನೂ ಓದಿ: ಗಡಿಯಲ್ಲಿ ಭಾರತ ಪಾಕ್ ಮಧ್ಯೆ ಗುಂಡಿನ ಚಕಮಕಿ
ಕನ್ನಡದಲ್ಲಿ Militants ಪದಕ್ಕೆ ಅರ್ಥ ಹುಡುಕಿದರೆ ʼಉಗ್ರರುʼ ಎಂದೇ ಗೂಗಲ್ ತೋರಿಸುತ್ತದೆ. ಆದರೆ ಇಂಗ್ಲಿಷ್ನಲ್ಲಿ Militants ಅಂದರೆ ಉಗ್ರರು ಎಂಬ ಅರ್ಥ ಬರುವುದಿಲ್ಲ. ಸಶಸ್ತ್ರ ಪ್ರತಿರೋಧ, ದಂಗೆಗಳು ಅಥವಾ ಗೆರಿಲ್ಲಾ ಯುದ್ಧದಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಗುಂಪುಗಳನ್ನು ವಿವರಿಸಲು ಸಾಮಾನ್ಯವಾಗಿ ಈ ಪದವನ್ನು ಬಳಸಲಾಗುತ್ತದೆ. ಸರ್ಕಾರದ ವಿರುದ್ಧ ವಿಮೋಚನಾ ಹೋರಾಟ ಮಾಡುತ್ತಿರುವ ವಿಮೋಚನಾ ಹೋರಾಟಗಾರರು, ಪ್ರತ್ಯೇಕವಾದಿಗಳು ಎಂಬ ಅರ್ಥ ಕೊಡುತ್ತದೆ.