ಬೆಂಗಳೂರು: 2025ರ ಹೊಸ ವರ್ಷ (New Year 2025) ಸ್ವಾಗತಕ್ಕೆ ಇಡೀ ಜಗತ್ತೇ ಸಜ್ಜಾಗಿದೆ. ಹೊಸ ಹುರುಪಿನೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ರಾಜ್ಯ ರಾಜಧಾನಿಯೂ ಸಜ್ಜಾಗಿದೆ. 2024ಕ್ಕೆ ಗುಡ್‌ಬೈ ಹೇಳಿ 2025ಕ್ಕೆ ಹಾಯ್ ಹೇಳಲು ಸಿಲಿಕಾನ್ ಸಿಟಿ ಮಂದಿ ಕಾತರರಾಗಿದ್ದಾರೆ.
ಈಗಾಗಲೇ ಬೆಂಗಳೂರು ಸಂಭ್ರಮಾಚರಣೆಯ ಮೂಡ್‌ನಲ್ಲಿದೆ.. ಹೊಸ ವರ್ಷದ ಹಾಟ್‌ಸ್ಪಾಟ್‌ಗಳಾದ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರ ಕಲರ್‌ಫುಲ್ ಆಗಿವೆ.. ಝಗಮಗ ಎನ್ನುತ್ತಿವೆ.. ಸಹಸ್ರ ಸಹಸ್ರ ಮಂದಿ ಕುಣಿದು ಕುಪ್ಪಳಿಸಲು.. ಗೆಳೆಯ ಗೆಳೆತಿಯರ ಜೊತೆ ಸಂಭ್ರಮಿಸಲು ಸೆಲೆಬ್ರೆಷನ್ ಸ್ಟಾಟ್‌ಗಳಿಗೆ ಬರ್ತಿದ್ದಾರೆ.
ರಾತ್ರಿ 12 ಗಂಟೆ ಹೊತ್ತಿಗೆ ಎಂ.ಜಿ ರೋಡ್, ಬ್ರಿಗೇಡ್ ರೋಡ್‌ನಲ್ಲಿ 2 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮಹಿಳೆಯರಿಗಾಗಿ 40 ಸೇಫ್ಟಿ ಐಲ್ಯಾಂಡ್, ವಾಚ್ ಟವರ್ ನಿರ್ಮಿಸಲಾಗಿದೆ. ಮಧ್ಯರಾತ್ರಿ 1 ಗಂಟೆ ವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ನೀಡಲಾಗಿದೆ.
ಮಹಿಳೆಯರ ಸುರಕ್ಷತೆಗಾಗಿ ಪ್ರತಿ ಮೆಟ್ರೋ ಕೋಚ್‌ನಲ್ಲೂ ಭದ್ರತಾ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಫ್ಲೈಓವರ್‌ಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂದ್ ಮಾಡಲಾಗಿದೆ.