Bengaluru CityCrimeDistrictsKarnatakaLatestMain Post

ಬೊಗಳುತ್ತೆ ಅಂತಾ ಶ್ವಾನಕ್ಕೆ ಬನ್‍ನಲ್ಲಿ ವಿಷವಿಟ್ಟ ಪಕ್ಕದ್ಮನೆಯವ!

ಬೆಂಗಳೂರು: ಸಾಕು ಶ್ವಾನ (Dog) ಅಂದ್ರೆ ಯಾರಿಗೆ ತಾನೆ ಇಷ್ಟವಿರಲ್ಲ ಹೇಳಿ. ಮನೆ ಭದ್ರತೆ, ಮನೆಯವರ ರಕ್ಷಣೆಗೆ ಸದಾ ವಿಶ್ವಾಸಗಳಿಸುವ ಸಾಕು ನಾಯಿಗೆ ಇಲ್ಲೊಬ್ಬ ವಿಷಹಾಕಿ (Poison) ಕೊಂದುಹಾಕುವ ಯತ್ನ ಮಾಡಿದ್ದಾನೆ.

ವ್ಯಕ್ತಿಯನ್ನು ಸೇತುರಾಮ್ ಎಂದು ಗುರುತಿಸಲಾಗಿದ್ದು, ಈತ ರಾಜಾಜಿನಗರದ ಮೋದಿ ಹಾಸ್ಪಿಟಲ್ (Modi Hospital) ರಸ್ತೆಯಲ್ಲಿರುವ ಸರೋಜಾ ಅನ್ನೋರ ಮನೆಯಲ್ಲಿ ಸಾಕಿದ್ದ ನಾಯಿಗೆ ಬನ್ ನಲ್ಲಿ ವಿಷವಿಟ್ಟು ಕೊಲ್ಲಲು ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮನೆ ಮುಂದಿನ ಫುಟ್ ಪಾತ್ ಮೇಲೆ ನಡೆದಾಡುವಾಗ ಬೊಗಳುತ್ತೆ ಅನ್ನೋ ಕಾರಣಕ್ಕೆ, ವಿಷವಿಟ್ಟಿದ್ದಾರೆ ಅಂತ ಶ್ವಾನದ ಮಾಲೀಕರು ಗಂಭೀರವಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: 36 ಸೇತುವೆಗಳು ಸಂಚಾರಕ್ಕೆ ಅನರ್ಹ – ದುರಂತ ಸಂಭವಿಸೋದಕ್ಕೂ ಮುನ್ನವೇ ಎಚ್ಚೆತ್ತ ಸರ್ಕಾರ

ಎರಡೂವರೆ ವರ್ಷದ ಗ್ರೇಟ್ ಡೀನ್ ಎಂಬ ತಳಿಯನ್ನ ಕುಟುಂಬದವರು ಮನೆ ಮಗನಂತೆ ಸಾಕಿದ್ರು. ಮನೆಯಲ್ಲಿ ಹೆಣ್ಮಕ್ಕಳಷ್ಟೆ ಇದ್ದಾಗ, ರಾತ್ರಿ ವೇಳೆ ಮನೆಗೆ ಯಾರೆ ಬಂದ್ರೂ ಪ್ರೊಟೆಕ್ಟ್ ಮಾಡ್ತಿತ್ತು. ಸರೋಜಾ ಕುಟುಂಬ ಬಾಡಿಗೆ ಮನೆ (Rented House) ಯಲ್ಲಿದ್ದಾರೆ. ಈ ಮನೆಯ ಮುಂದೆಯೇ ಬಾರ್ ಇದ್ದು, ಕುಡಿದು ಮನೆ ಮುಂದಿನ ಫುಟ್ ಪಾತ್ ಮೇಲೆ ಮಲಗೋದು, ಅಲ್ಲೇ ಯೂರಿನ್ ಮಾಡೋದು ಮಾಡ್ತಾರಂತೆ. ಹೀಗಾಗಿ ಮನೆಯೊಳಗಿನ ಗೇಟ್ ಗೆ ಶ್ವಾನವನ್ನ ಕಟ್ಟಿ ಹಾಕ್ತಿದ್ರು.

ಇಲಾಖೆಯೊಂದರ ರಿಟೈರ್ಡ್ ಆಫಿಸರ್ ಆಗಿರೋ ಸೇತುರಾಮ್ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ಸರೋಜಾ ದೂರು ನೀಡಿದ್ದಾರೆ. ಠಾಣೆಗೂ ಕರೆಸಿ ಸೇತುರಾಮ್ ಗೆ ಪೊಲೀಸರು ವಾರ್ನ್ ಮಾಡಿದ್ದಾರೆ. ಆದರೂ ಒಂದು ವರ್ಷದಿಂದ ಶ್ವಾನವನ್ನ ಕೊಂದು ಹಾಕುವ ಪ್ರಯತ್ನ ಮಾಡ್ತಿದ್ದಾರಂತೆ. ದೂರು ಕೊಟ್ರೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ದೂರು ದಾಖಲಿಸಿಕೊಳ್ತಿಲ್ಲ ಅಂತ ಆರೋಪಿಸಿದ್ದಾರೆ.

ಪಾಯ್ಸನ್ ತಿಂದ ಶ್ವಾನವನ್ನ ನಗರದ ಆರ್‍ಎಂವಿ ಮಲ್ಟಿಸ್ಪೆಷಾಲಿಟಿ ವೆಟರ್ನರಿ ಕ್ಲಿನಿಕ್‍ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ನಡೆದ ಘಟನೆಯನ್ನ ಪ್ರಾಣಿದಯ ಸಂಘಕ್ಕೂ ತಿಳಿಸಿದ್ರು. ಪದೇ ಪದೇ ಮನೆ ಹತ್ರ ಬಂದು ಪ್ರೀತಿಯಿಂದ ಸಾಕಿದ ಶ್ವಾನವನ್ನ ಸಾಯಿಸೋಕೆ ಬಂದ್ರೂ ಪೊಲೀಸರು ದೂರು ದಾಖಲಿಸಿಕೊಳ್ಳದೇ ಇರೋದು ಹಲವು ಅನುಮಾನಗಳನ್ನ ಮೂಡಿಸ್ತಿದೆ.

Live Tv

Leave a Reply

Your email address will not be published. Required fields are marked *

Back to top button