ಕನ್ನಡದ ಹೆಸರಾಂತ ನಟಿ ಸಂಜನಾ ಗಲ್ರಾನಿ ಬಹುತೇಕ ಸಮಯವನ್ನು ಮಗುವಿನೊಂದಿಗೆ ಕಳೆಯುತ್ತಿದ್ದಾರೆ. ಆ ಕ್ಷಣಗಳನ್ನು ಫೋಟೋ ಮತ್ತು ವಿಡಿಯೋ ರೂಪದಲ್ಲಿ ಸೆರೆ ಹಿಡಿದು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಮಗುವಿಗೆ ಯಾವ ಹೆಸರಿನಿಂದ ಕರೆಯುತ್ತಾರೆ ಎನ್ನುವುದನ್ನೂ ಅವರು ಹಂಚಿಕೊಂಡಿದ್ದಾರೆ. ಮಗುವಿಗೆ ಇನ್ನೂ ಹೆಸರಿಟ್ಟಿಲ್ಲವಾದರೂ, ಪ್ರೀತಿಯಿಂದ ಪ್ರಿನ್ಸ್ ಪಾಷಾ ಎಂದು ಕರೆಯುತ್ತಾರಂತೆ.
Advertisement
‘ಪ್ರಿನ್ಸ್’ ಬಹುತೇಕ ತಾಯಂದಿರು ಮಕ್ಕಳಿಗೆ ಕರೆಯುವ ಹೆಸರಾದ್ದರಿಂದ, ಸಂಜನಾ ಕೂಡ ತಮ್ಮ ಮಗುವಿಗೆ ಪ್ರಿನ್ಸ್ ಎಂದೇ ಕರೆಯುತ್ತಿದ್ದಾರೆ. ಸಂಜನಾ ಪತಿಯ ಪೂರ್ಣ ಹೆಸರು ಅಜೀಜ್ ಪಾಷಾ. ಹಾಗಾಗಿ ಪ್ರಿನ್ಸ್ ಪಾಷಾ ಎಂದು ಸಂಜನಾ ತಮ್ಮ ಮಗುವಿಗೆ ಕರೆಯುತ್ತಿದ್ದಾರೆ. ಸದ್ಯಕ್ಕೆ ಹೀಗೆ ಕರೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮಗುವಿಗೆ ಅಷ್ಟೇ ಚಂದದ ಹೆಸರನ್ನು ಇಡುವುದಾಗಿ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಕಾಂಗ್ರೆಸ್ ಪಾದಯಾತ್ರೆ
Advertisement
Advertisement
ಮಗುವನ್ನು ಮನೆಯಿಂದ ಆಚೆ ಕರೆದುಕೊಂಡು ಆಟವಾಡಿಸುವ ವೀಡಿಯೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿರುವ ಸಂಜನಾ, ಪ್ರಿನ್ಸ್ ಜೊತೆ ಮೊದಲ ಬಾರಿಗೆ ಆಚೆ ಬಂದಿರುವೆ ಎಂದು ಬರೆದುಕೊಂಡಿದ್ದಾರೆ. ಸಂಜನಾ ಅಭಿಮಾನಿಗಳು ಮುದ್ದಾದ ಮಗುವಿಗೆ ಶುಭ ಹಾರೈಸಿದ್ದಾರೆ. ಮದುವೆ ನಂತರ ಸಿನಿಮಾ ರಂಗದಿಂದ ದೂರವೇ ಉಳಿದಿರುವ ಸಂಜನಾ ಮತ್ತೆ ಅವರು ಸಿನಿಮಾ ರಂಗಕ್ಕೆ ಬರಲಿ ಎಂದು ಅಭಿಮಾನಿಗಳು ಕೇಳಿದ್ದಾರೆ.