ನಟ, ಯುವರಾಜಕಾರಣಿ ನಿಖಿಲ್ ಕುಮಾರ್ ಸ್ವಾಮಿ ಅವರು ತಮ್ಮ ಪುತ್ರನಿಗೆ ಆವ್ಯಾನ್ ದೇವ್ ಎಂದು ಹೆಸರಿಟ್ಟಿದ್ದಾರೆ. ಈ ರೀತಿಯ ಹೆಸರನ್ನು ನಾಮಕರಣ ಮಾಡುತ್ತಿದ್ದಂತೆಯೇ ಅರ್ಥ ಹುಡುಕುವುದರಲ್ಲಿ ಅಭಿಮಾನಿಗಳು ಬ್ಯುಸಿಯಾಗಿದ್ದರು. ಬಾಲಿವುಡ್ ನಟಿ ದಿಯಾ ಮಿರ್ಜಾ ಕೂಡ ತಮ್ಮ ಮಗನಿಗೆ ಆವ್ಯಾನ್ ಅಜಾದ್ ಎಂದು ಹೆಸರಿಟ್ಟಿರುವ ಕಾರಣಕ್ಕಾಗಿ ಅಭಿಮಾನಿಗಳು ಕನ್ ಫ್ಯೂಸ್ ಕೂಡ ಆಗಿದ್ದರು.
Advertisement
ಆವ್ಯಾನ್ ದೇವ್ ಅಂದರೆ, ಅದು ದೇವರ ಹೆಸರು. ಗಣಪತಿಯ ಮತ್ತೊಂದು ಹೆಸರು ಕೂಡ. ಅಲ್ಲದೇ, ಅದೃಷ್ಟದಿಂದ ಜನಿಸಿದವನು ಎಂಬ ಅರ್ಥವನ್ನೂ ಇದು ಸೂಚಿಸುತ್ತದೆ. ಹಾಗಾಗಿ ಇಂಥದ್ದೊಂದು ಹೆಸರಿಟ್ಟಿದ್ದಾರೆ. ಮಗುವಿಗೆ ಒಂಬತ್ತು ತಿಂಗಳು ತುಂಬಿರುವ ಸಂದರ್ಭದಲ್ಲಿ ನಿಖಿಲ್ ಮತ್ತು ರೇವತಿ ದಂಪತಿ ತಮ್ಮ ಮಗುವಿಗೆ ಮುದ್ದಾದ ಹೆಸರಿಟ್ಟಿದ್ದಾರೆ. ಇದನ್ನೂ ಓದಿ : ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ಸೋಲು : ಹೊಣೆಹೊತ್ತು ಹಣ ಮರಳಿಸಿದ್ರಾ ನಿರ್ದೇಶಕ ಶಿವ
Advertisement
Advertisement
ಈ ಸಂದರ್ಭದಲ್ಲಿ ಆವ್ಯಾನ್ ದೇವ್ ಬಿಳಿ ಬಣ್ಣದ ಶರ್ಟ್ ಮತ್ತು ಪಂಚೆಯಲ್ಲಿ ಮಿಂಚುತ್ತಿದ್ದನು. ಮಾಜಿ ಪ್ರಧಾನಿ ಮತ್ತು ಆವ್ಯಾನ್ ಮುತ್ತಾತ ದೇವೇಗೌಡರು ಮೊಮ್ಮಗನಿಗೆ ಮುತ್ತು ಕೊಡುವ ಮೂಲಕ ಶುಭಹಾರೈಸಿದರೆ, ನಿಖಿಲ್ ತಾಯಿ ಮೊಮ್ಮಗನಿಗಾಗಿ ಬಂಗಾರದ ಹಲವು ಆಭರಣಗಳನ್ನು ತಂದಿದ್ದರು.
Advertisement
ಇಂದು ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ನಿಖಿಲ್ ಕುಮಾರ್ ಸ್ವಾಮಿ ಪುತ್ರನಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ನಡೆಯಿತು. ಬೆಳಗ್ಗೆ 10.30 ರಿಂದ 12.20ರವರೆಗೂ ನಡೆಯುವ ಶುಭ ಲಗ್ನದಲ್ಲಿ ಮಗುವಿಗೆ ನಾಮಕರಣ ಮಾಡಲಾಗಿದೆ.