– ಚಾಮುಂಡಿಬೆಟ್ಟಕ್ಕೆ ಮಹಿಷ ಬೆಟ್ಟ ಎಂದು ಹೆಸರು
– ವಿವಾದಕ್ಕೆ ಎಡೆಮಾಡಿಕೊಟ್ಟ ಮಹಿಷಾ ಸಮಿತಿ ಆಹ್ವಾನ ಪತ್ರಿಕೆ
ಮೈಸೂರು: ಮಹಿಷಾ ದಸರಾದಿಂದ ( Mahisha Dasara) ಮೈಸೂರು (Mysuru) ಹೆಸರೇ ಬದಲಾಗಿದೆ. ಮಹಿಷ ದಸರಾ ಆಚರಣಾ ಸಮಿತಿ ಬಿಡುಗಡೆಗೊಳಿಸಿರುವ ಆಹ್ವಾನ ಪತ್ರಿಕೆಯಲ್ಲಿ ಮೈಸೂರು ಬದಲಿಗೆ ಮಹಿಷೂರು, ಚಾಮುಂಡಿಬೆಟ್ಟ ಬದಲಿಗೆ ಮಹಿಷಾ ಬೆಟ್ಟ ಎಂದು ಹೆಸರು ಮುದ್ರಿಸಿರುವುದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
Advertisement
ಇದೇ ತಿಂಗಳು 29 ರಂದು ಮಹಿಷಾ ದಸರಾ ನಡೆಸಲು ಸಮಿತಿ ಉದ್ದೇಶಿಸಿದೆ. ಚಾಮುಂಡಿ ಬೆಟ್ಟದಲ್ಲಿ (Chamundi Hill) ಮಹಿಷಾಸುರನಿಗೆ ಪುಷ್ಪಾರ್ಚನೆ ಮಾಡಿ ನಂತರ ಪುರಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಮಹಿಷಾ ದಸರಾ ಹೆಸರಿನಲ್ಲಿ ಈಗಾಗಲೇ ಸಂಘರ್ಷ ಶುರುವಾಗಿದೆ. ಇದನ್ನೂ ಓದಿ: ಕೆರೆ ಕೋಡಿ ಕೆಲಸ ಮಾಡುವಾಗ ಮಣ್ಣು ಕುಸಿತ- ಮಣ್ಣಿನಡಿ ಸಿಲುಕಿ ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ
Advertisement
Advertisement
ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಮುಂದಾದರೆ ನಾವು ಚಾಮುಂಡಿ ಚಲೋ ಮಾಡುತ್ತೇವೆ. ಮಹಿಷನ ಭಕ್ತರ ಕೈ ಮೇಲಾಗುತ್ತದೋ ಚಾಮುಂಡಿಯ ಭಕ್ತರ ಕೈ ಮೇಲಾಗುತ್ತದೋ ನೋಡಿಯೇ ಬಿಡೋಣ ಎಂದು ಮಹಿಷ ದಸರಾ ಆಚರಣೆ ಸಮಿತಿಗೆ ಮಾಜಿ ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ವಿವಾದ – ಇಂದಿನಿಂದ ಟಿಟಿಡಿ ದೇವಾಲಯ ಪವಿತ್ರೋತ್ಸವ
Advertisement