ಲಕ್ನೋ: ಮಗಳು ಬಿಡಿಸಿದ ಚಿತ್ರದಿಂದ (Drawing) ತಾಯಿಯ ಕೊಲೆ (Murder) ರಹಸ್ಯ ಬಯಲಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಅಪ್ಪನೇ ಅಮ್ಮನನ್ನು ಕೊಲೆ ಮಾಡಿದ್ದು ಎಂದು ಪೊಲೀಸರ ಮುಂದೆ 4 ವರ್ಷದ ಮಗಳು (daughter) ಪೊಲೀಸರ ಮುಂದೆ ಸಾಕ್ಷಿ ಹೇಳಿದ್ದಾಳೆ.
27 ವರ್ಷದ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ಉತ್ತರ ಪ್ರದೇಶದ ಶಿವ ಪರಿವಾರ್ ಕಾಲೋನಿಯ ಝಾನ್ಸಿ ಬಳಿಯ ಕೊಟ್ವಾಲಿ ಪ್ರದೇಶದಲ್ಲಿ ನಡೆದಿತ್ತು. ಮಹಿಳೆಯ 4 ವರ್ಷದ ಮಗಳು ಚಿತ್ರ ಬಿಡಿಸಿ ಆಕೆಯ ತಂದೆಯೆ ಕೊಲೆ ಮಾಡಿದ್ದಾನೆ ಎಂದು ಆರೋಪಿಸುವ ಮೂಲಕ ಕೊಲೆ ಪ್ರಕರಣಕ್ಕೆ ಮಹತ್ವದ ಸಾಕ್ಷಿ ನೀಡಿದ್ದಾಳೆ. ಇದನ್ನೂ ಓದಿ : ಎಲಾನ್ ಮಸ್ಕ್-ಮೋದಿ ಭೇಟಿ ಬೆನ್ನಲ್ಲೇ ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರು
- Advertisement -
ಪತಿ, ಅತ್ತೆ ಹಾಗೂ ಮಾವ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದರು. ಇದನ್ನೂ ಓದಿ : ಮಹಾ ಕುಂಭವು ‘ಮೃತ್ಯು ಕುಂಭ’ವಾಗಿ ಬದಲಾಗಿದೆ: ಯೋಗಿ ಸರ್ಕಾರದ ವಿರುದ್ಧ ಮಮತಾ ಬ್ಯಾನರ್ಜಿ ಟೀಕೆ
- Advertisement -
2019ರಲ್ಲಿ ಝಾನ್ಸಿ ನಿವಾಸಿಯಾದ ಸಂದೀಪ್ ಬುದೋಲಿನನ್ನು ಮೃತ ಮಹಿಳೆ ವಿವಾಹವಾಗಿದ್ದರು. ಮದುವೆಯ ಸಂದರ್ಭದಲ್ಲಿ 20 ಲಕ್ಷ ರೂ. ಹಣ ಹಾಗೂ ಇನ್ನಿತರ ಉಡುಗೊರೆಗಳನ್ನು ವರದಕ್ಷಿಣೆ ರೂಪದಲ್ಲಿ ಸಂದೀಪ್‌ಗೆ ನೀಡಲಾಗಿತ್ತು. ಸಂದೀಪ್ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆ ರೂಪದಲ್ಲಿ ಕಾರು ನೀಡುವಂತೆ ಒತ್ತಾಯಿಸುತ್ತಿದ್ದರು ಎಂದು ಮೃತ ಮಹಿಳೆಯ ತಂದೆ ಸಂಜಯ್ ತ್ರಿಪಾಠಿ ದೂರಿದ್ದಾರೆ. ಇದನ್ನೂ ಓದಿ : ಮಹಿಳಾ ಕೂಲಿ ಕಾರ್ಮಿಕರಿಗೆ ವಿಮಾನ ಪ್ರಯಾಣ ಮಾಡಿಸಿದ ರೈತ
- Advertisement -
- Advertisement -
ಅವರ ಬೇಡಿಕೆಯನ್ನು ಪೂರೈಸದಿದ್ದಾಗ ಆಕೆಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಆ ಸಂದರ್ಭದಲ್ಲಿ ರಾಜಿ ಸಂದಾಯದ ಮೂಲಕ ಇತ್ಯರ್ಥವಾಗಿತ್ತು. ನಂತರ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಗಂಡು ಮಗುವಿಗೆ ಜನ್ಮ ನೀಡಿಲ್ಲ ಎಂದು ಸಂದೀಪ್ ಕುಟುಂಬಸ್ಥರು ಆಕೆಗೆ ಹಿಂಸೆ ನೀಡಲು ಪ್ರಾರಂಭಿಸಿದ್ದರು. ಹೆರಿಗೆಯ ಸಂದರ್ಭದಲ್ಲೂ ಸಂದೀಪ್ ಹಾಗೂ ಆತನ ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಯಲ್ಲೇ ಬಿಟ್ಟು ತೆರಳಿದ್ದರು. ಬಳಿಕ ನಾನು ಆಸ್ಪತ್ರೆಯ ಬಿಲ್ ಪಾವತಿಸಿ ಮಗು ಹಾಗೂ ಆಕೆಯನ್ನು ಮನೆಗೆ ಕರೆದುಕೊಂಡು ಹೋದೆ ಎಂದು ಸಂಜಯ್ ಹೇಳಿದ್ದಾರೆ. ಇದಾದ ಬಳಿಕ ಮಹಿಳೆಯ ಕೊಲೆಯಾಗಿದೆ. ಇದನ್ನೂ ಓದಿ : ಡಬಲ್ ಟ್ಯಾಕ್ಸ್ ಕಟ್ಟಿ ಬಿ-ಖಾತಾ ಪಡೆಯಿರಿ: ಸಿಎಂ ಸಭೆಯಲ್ಲಿ ಮಹತ್ವದ ನಿರ್ಧಾರ
ಅಪ್ಪ, ಅಮ್ಮನಿಗೆ ಹೊಡೆದು ನಂತರ ನೇಣಿಗೆ ಹಾಕಿದ್ದಾರೆ. ಅಮ್ಮನ ತಲೆಗೆ ಕಲ್ಲಿನಿಂದ ಹೊಡೆದು ಚೀಲದಲ್ಲಿ ಹಾಕಿ ಎಸೆದಿದ್ದಾನೆ. ಅಪ್ಪ ಅಮ್ಮನಿಗೆ ಹೊಡೆಯುತ್ತಿದ್ದರು. ಅಮ್ಮನಿಗೆ ಹೊಡೆದರೆ ನಿಮ್ಮ ಕೈ ಮುರಿಯುತ್ತೇನೆ ಎಂದಿದ್ದೆ. ಅಮ್ಮನಿಗೆ ಹೊಡೆದು ಆಕೆಯನ್ನು ಕೊಂದಿದ್ದಾರೆ. ನನಗೂ ಸಹ ಹೊಡೆಯುತ್ತಿದ್ದರು ಎಂದು ಮಗು ಪೊಲೀಸರ ಬಳಿ ಹೇಳಿದ್ದಾಳೆ. ಇದನ್ನೂ ಓದಿ : ಅಧಿಕಾರ ಹಂಚಿಕೆ – ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿ ಇರಬೇಕು: ಸಿದ್ದರಾಮಯ್ಯ
ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದು, ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪತಿ ಸಂದೀಪ್‌ನನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ : ಮಹಾಕುಂಭದಲ್ಲಿ ಸಚಿವ ಪ್ರಹ್ಲಾದ್ ಜೋಶಿ ಕುಟುಂಬ ಪುಣ್ಯಸ್ನಾನ