ಬೆಂಗಳೂರು: ನಗರದ ಕೊತ್ತನೂರಿನ ತಿಮ್ಮೇಗೌಡ ಲೇಔಟ್‍ನಲ್ಲಿ ವಿದೇಶಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬುಧವಾರ ಮಧ್ಯರಾತ್ರಿ ಗಂಟೆಗೆ ನಡೆದಿದೆ.
ಹಿಮಾಚಲ ಪ್ರದೇಶದ ಮೂಲದ ಇಶಾನ್ ಕೊಲೆಗೈದ ಆರೋಪಿಯಾಗಿದ್ದು, ನಕಾಯಕಿ ಪ್ಲೋರೆನ್ಸ್ (25) ಕೊಲೆಯಾದ ಉಗಾಂಡ ಮೂಲದ ಮಹಿಳೆ.
Advertisement
Advertisement
ಏನಿದು ಪ್ರಕರಣ?: ನಕಾಯಕಿ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದಳು. ಪ್ಲೋರೆನ್ಸ್ ನಗರದ ತಿಮ್ಮೇಗೌಡ ಲೇಔಟ್‍ನಲ್ಲಿ ವನಜಮ್ಮ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಇಶಾನ್ ಕೂಡ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ.
Advertisement
Advertisement
ಇಶಾನ್ ಬುಧವಾರ ರಾತ್ರಿ ನಕಾಯಕಿ ಪ್ಲೋರೆನ್ಸ್‍ಳನ್ನು 5000 ರೂ. ಒಪ್ಪಂದ ಮಾಡಿಕೊಂಡು ಎಂಜಿ ರೋಡ್‍ನಿಂದ ಪಿಕ್ ಮಾಡಿದ್ದಾನೆ. ಒಪ್ಪಂದಂತೆ ಇಬ್ರೂ ಪ್ಲೋರೆನ್ಸ್ ವಾಸವಿದ್ದ ಮನೆಗೆ ಬಂದಿದ್ದಾರೆ. ಈ ವೇಳೆಯಲ್ಲಿ ನಕಾಯಕಿ 10 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಇಶಾನ್ ಹಣ ಕೊಡದೇ ಇದ್ದಾಗ ಚಾಕುವಿನಿಂದ ಅವನ ಹಲ್ಲೆ ನಡೆಸಿದ್ದಾಳೆ. ಒಬ್ಬರ ಮೇಲೆ ಒಬ್ಬರು ಹಲ್ಲೆಗೆ ಪ್ರತಿ ಹಲ್ಲೆ ನಡೆಸುವಾಗ ಗಾಬರಿಗೊಂಡ ಇಶಾನ್ ಅದೇ ಚಾಕುವಿನಿಂದ ಪ್ಲೋರೆನ್ಸ್ ಳನ್ನು ಕೊಲೆ ಮಾಡಿದ್ದಾನೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಇಶಾನ್‍ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಂತ್ರಜ್ಞರು ಮತ್ತು ಶ್ವಾನದಳ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ತನಿಖೆಗೆ ತೆರಳಿದ್ದ ಇನ್ಸ್ ಪೆಕ್ಟರ್ ಅಂಜನ್ ಕುಮಾರ್ ಮೇಲೆ ಉಗಾಂಡ ಮೂಲದ ಜನರು ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ.