– 8 ಕೋಟಿ ಆಸ್ತಿಗಾಗಿ ಗಂಡನನ್ನೇ ಹತ್ಯೆ ಮಾಡಿಸಿದ್ದ ಪತ್ನಿ ಸಂಚು ಬಯಲು
ಮಡಿಕೇರಿ: 8 ಕೋಟಿ ಆಸ್ತಿಗಾಗಿ ವಿವಾಹಿತ ಪ್ರಿಯತಮೆಯೊಂದಿಗೆ (Lover) ಸೇರಿ ಆಕೆಯ ಪತಿಯನ್ನ ಕೊಲೆ ಮಾಡಿದ್ದ ಆರೋಪಿಯನ್ನು ಕೊಡಗು ಪೊಲೀಸರು ಸ್ಥಳ ಮಹಜರ್‌ಗೆ ಕರೆದೊಯ್ದಾಗ ಎಸ್ಕೇಪ್ ಆಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಕೊಲೆ ಆರೋಪಿ ಅಂಕುರ್ ಠಾಕೂರ್‌ನನ್ನ ತೆಲಂಗಾಣದ ಉಪ್ಪಳ್‌ನಲ್ಲಿ ಕೊಲೆ ನಡೆದ ಸ್ಥಳಕ್ಕೆ ಕರೆದೊಯ್ದು ಮಹಜರ್ ನಡೆಸುವ ವೇಳೆ ಎಸ್ಕೇಪ್ ಆಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: `ಕರಿಮಣಿ ಮಾಲೀಕ ನೀನಲ್ಲ’ ಅಂತ ಆಸ್ತಿಗಾಗಿ ಗಂಡನ ಕೊಲೆ – ಇಬ್ಬರು ಪ್ರಿಯಕರರು ಸೇರಿ ಪತ್ನಿಯೂ ಅಂದರ್
ಇತ್ತೀಚೆಗೆ ಕೊಡಗಿನಲ್ಲಿ ತೆಲಂಗಾಣ ಮೂಲದ ರಮೇಶ್ ಕುಮಾರ್ ಹತ್ಯೆಯಾಗಿತ್ತು. ಪತ್ನಿಯೇ 8 ಕೋಟಿ ಆಸ್ತಿಗಾಗಿ ಇಬ್ಬರು ಪ್ರಿಯಕರರೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿಸಿದ್ದ ಸಂಚು ಬಯಲಾಗಿತ್ತು. ಆಸ್ತಿಗಾಗಿ ಪತಿಯನ್ನು ಕೊಲೆ ಮಾಡಿಸಿದ್ದ ಪತ್ನಿ ನಿಹಾರಿಕಾ ಬಳಿಕ ಕಾರಿನಲ್ಲಿ ಶವ ಇಟ್ಟುಕೊಂಡು ತೆಲಂಗಾಣದಿಂದ 800 ಕಿಮೀ ದೂರದ ಕೊಡಗಿಗೆ ಬಂದಿದ್ದಳು. ಶವ ಎಸೆದು ಪೆಟ್ರೋಲ್‌ನಿಂದ ಸುಟ್ಟುಹಾಕಿ ಪರಾರಿಯಾಗಿದ್ದಳು. ಇದನ್ನೂ ಓದಿ: ಅಧಿಕಾರಿಗಳ ಯಡವಟ್ಟಿನಿಂದ ವಕ್ಫ್ ಆಸ್ತಿ ಎಂದು ದಾಖಲಾತಿಯಲ್ಲಿ ನಮೂದಾಗಿದೆ: ಸಚಿವ ಬೋಸರಾಜು
ಆರೋಪಿ ತಪ್ಪಿಸಿಕೊಂಡದ್ದು ಹೇಗೆ?
ಪ್ರಕರಣ ಸಂಬಂಧ ಮೃತ ರಮೇಶ್ ಪತ್ನಿ ನಿಹಾರಿಕಾ, ಆಕೆಯ ಪ್ರಿಯತಮ ನಿಖಿಲ್ ಹಾಗೂ ಇನ್ನೋರ್ವ ಆರೋಪಿ ಅಂಕುರ್‌ನನ್ನು ಬಂಧಿಸಲಾಗಿತ್ತು. ನಂತರ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿತ್ತು. ತನಿಖೆಯ ಭಾಗವಾಗಿ ಪೊಲೀಸರು ಆರೋಪಿ ಅಂಕುರ್ ಠಾಕೂರ್‌ನನ್ನ ತೆಲಂಗಾಣದ ಉಪ್ಪಲ್‌ನಲ್ಲಿ ಕೊಲೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಅರೋಪಿಯೊಂದಿಗೆ 13 ಜನ ಪೊಲೀಸರು ಸ್ಥಳ ಮಹಜರು ಮಾಡುವ ಸಂದರ್ಭದಲ್ಲಿ ಆರೋಪಿ ಅಂಕುರ್ ಪರಾರಿಯಾಗಿದ್ದಾನೆ.
ಘಟನೆ ಸಂಬಂಧ ಕೊಡಗು ಪೊಲೀಸರು ತೆಲಂಗಾಣದ ಉಪ್ಪಳ್ ಪೊಲೀಸ್ ಠಾಣೆಗೆ ದೂರು ನೀಡಿ ಅರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ. ಒಂದು ತಂಡ ತೆಲಂಗಾಣದ ಸುತ್ತಮುತ್ತ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದರೆ, ಮತ್ತೊಂದು ತಂಡ ದೆಹಲಿ ವಿಮಾನ ನಿಲ್ದಾಣದ ಬಳಿಯೂ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ʻಪಬ್ಲಿಕ್ ಟಿವಿʼಗೆ ಮೂಲಗಳು ತಿಳಿಸಿವೆ. ಇನ್ನು 2-3 ದಿನಗಳಲ್ಲಿ ಆರೋಪಿಯನ್ನು ಬಂಧಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹವಾಮಾನ ವೈಪರೀತ್ಯ – ಕೊಡಗಿನಲ್ಲಿ ವೈರಲ್ ಫೀವರ್, ಒಂದೇ ದಿನ 200 ರಿಂದ 300 ಜನರಿಗೆ ಚಿಕಿತ್ಸೆ