ಮಲಯಾಳಂ ಸೂಪರ್ ಹಿಟ್ ಸಿನಿಮಾ ಮಂಜುಮ್ಮೇಲ್ ಬಾಯ್ಸ್ (Manjummel Boys) ಏಪ್ರಿಲ್ 6ರಂದು ತೆಲುಗಿನಲ್ಲಿ (Telugu) ಬಿಡುಗಡೆ ಆಗುತ್ತಿದೆ. ಬಾಕ್ಸ್ ಆಫೀಸಿನಲ್ಲಿ ನೂರಾರು ಕೋಟಿಗಳನ್ನು ಬಾಚಿರುವ ಈ ಚಿತ್ರ ತೆಲುಗಿನಲ್ಲಿ ಹೇಗೆ ಮೋಡಿ ಮಾಡಬಹುದು ಎನ್ನುವ ಕುತೂಹಲ ಮೂಡಿದೆ. ತೆಲುಗಿಗೆ ಡಬ್ಬಿಂಗ್ ರೈಟ್ಸ್ ತಗೆದುಕೊಂಡಾಗಲೇ ಭಾರೀ ಸದ್ದು ಮಾಡಿತ್ತು. ಇದೀಗ ಅಷ್ಟೇ ಉತ್ಸಾಹದಿಂದಲೇ ತೆಲುಗಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಮೊನ್ನೆಯಷ್ಟೇ ಈ ಸಿನಿಮಾವನ್ನು ವೀಕ್ಷಿಸಿದ್ದ ರಜನಿಕಾಂತ್ ಚಿತ್ರತಂಡವನ್ನು ಮನೆಗೆ ಕರೆಸಿ ಸತ್ಕರಿಸಿದ್ದರು. ಪ್ರತಿಯೊಬ್ಬ ಸದಸ್ಯನ ಶ್ರಮಕ್ಕೆ ತಲೈವಾ ಭೇಷ್ ಎಂದಿದ್ದರು. ಇಂತಹ ಸಿನಿಮಾಗಳನ್ನು ಎಲ್ಲರೂ ಮೆಚ್ಚಬೇಕು ಎಂದು ಕರೆ ನೀಡಿದ್ದರು.
ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಕಮಲ್ ಹಾಸನ್ ನಂತರ ರಜನಿಕಾಂತ್ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಚೆನ್ನೈನಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿ ಚಿತ್ರತಂಡವನ್ನು ರಜನಿಕಾಂತ್ ಸತ್ಕರಿಸಿದ್ದಾರೆ. ನಟರಾದ ಗಣಪತಿ, ಚಂದು ಸಲೀಂಕುಮಾರ್, ದೀಪಕ್ ಪರಂಬೋಲ್, ನಟ ಅರುಣ್ ಜೊತೆ ಡೈರೆಕ್ಟರ್ ಚಿದಂಬರಂ ಅವರು ರಜನಿಕಾಂತ್‌ರನ್ನು ಭೇಟಿಯಾಗಿ ಸಂಭ್ರಮಿಸಿದ್ದಾರೆ.
ರಜನಿಕಾಂತ್ (Rajanikanth) ಅವರಿಗೆ ಯಾವುದೇ ಸಿನಿಮಾ ಅವರಿಗೆ ಇಷ್ಟವಾದಲ್ಲಿ ಆ ಚಿತ್ರತಂಡವನ್ನು ಮನೆಗೆ ಕರೆಸಿ ಉಪಚರಿಸುತ್ತಾರೆ. ಚಿತ್ರತಂಡಕ್ಕೆ ಮೆಚ್ಚುಗೆ ತಿಳಿಸುತ್ತಾರೆ. ಈ ಹಿಂದೆ ಕೂಡ ‘ಕಾಂತಾರ’ (Kantara) ಚಿತ್ರದ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರನ್ನು ಸತ್ಕರಿಸಿದ್ದರು. ‘ಕಾಂತಾರ’ ಚಿತ್ರವನ್ನು ತಲೈವಾ ಹಾಡಿ ಹೊಗಳಿದ್ದರು. ಅದಷ್ಟೇ ಅಲ್ಲ, ಚಿನ್ನದ ಚೈನ್ ಅನ್ನು ಉಡುಗೊರೆಯಾಗಿ ನೀಡಿದ್ದರು.