ಜ್ಯೂನಿಯರ್ ಎನ್.ಟಿ.ಆರ್ ಮತ್ತು ಜಾನ್ವಿ ಕಪೂರ್ ಕಾಂಬಿನೇಷನ್ ನ ‘ದೇವರ’ ಸಿನಿಮಾದಿಂದ ಮತ್ತೊಂದು ಮೆಗಾ ಸುದ್ದಿ ಬಂದಿದೆ. ಈ ಸಿನಿಮಾವನ್ನು ಎರಡು ಭಾಗದಲ್ಲಿ ನೋಡಬಹುದಾಗಿದೆ ಎಂದಿದ್ದಾರೆ ನಿರ್ದೇಶಕ ಕೊರಟಾಲ ಶಿವ (Koratala Shiva). ಇದೀಗ ಮೊದಲ ಭಾಗದ ಚಿತ್ರೀಕರಣ ನಡೆದಿದ್ದು, ಬಿಡುಗಡೆಯ ನಂತರ ಪಾರ್ಟ್ ಬಗ್ಗೆ ಪ್ಲ್ಯಾನ್ ಮಾಡುವುದಾಗಿ ಅವರು ತಿಳಿಸಿದ್ದಾರೆ.
- Advertisement -
ದೇವರ (Devara) ಸಿನಿಮಾದಲ್ಲಿ ವಿಶೇಷ ತಾರಾಗಣವೇ ಇದೆ. ಬಾಲಿವುಡ್ ನಟ ಸೈಫ್ ಅಲಿಖಾನ್ (Saif Ali Khan) ಈ ಸಿನಿಮಾದಲ್ಲಿ ಖಳನಟರಾಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಟೀಸರ್ ಈ ಹಿಂದೆಯಷ್ಟೇ ರಿಲೀಸ್ ಆಗಿದ್ದು, ಟೀಸರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಮತ್ತು ಸೈಫ್ ಅಲಿಖಾನ್ ಅವರ ಲುಕ್ ಕೂಡ ವಿಶೇಷವಾಗಿದೆ.
- Advertisement -
- Advertisement -
‘ದೇವರ ಚಿತ್ರದ ಮೂಲಕ ಶ್ರೀದೇವಿ ಮಗಳು ಜಾಹ್ನವಿ ಕಪೂರ್ (Jahnavi Kapoor) ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದಲ್ಲದೆ ಪ್ರಕಾಶ್ ರೈ, ಶ್ರೀಕಾಂತ್ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಯುವಸುಧಾ ಆರ್ಟ್ಸ್ ಮತ್ತು ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ನಿರ್ಮಿಸುತ್ತಿದ್ದಾರೆ.
- Advertisement -
2024ರ ಏಪ್ರಿಲ್ 06ಕ್ಕೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ, ರತ್ನವೇಲು ಛಾಯಾಗ್ರಹಣ ಮತ್ತು ಶ್ರೀಕರ್ ಪ್ರಸಾದ್ ಅವರ ಸಂಕಲನವಿದೆ. ‘ದೇವರ’ ಸಿನಿಮಾದಲ್ಲಿ ಪ್ರತಿಭಾವಂತ ನಟಿ ಸಾಯಿ ಪಲ್ಲವಿ (Sai Pallavi) ನಟಿಸಲಿದ್ದಾರೆ ಎಂದು ಸುದ್ದಿಯಾಗಿತ್ತು. ಸಾಯಿ ಪಲ್ಲವಿ ಮತ್ತು ಜ್ಯೂ.ಎನ್.ಟಿ.ಆರ್ ಅಭಿಮಾನಿಗಳು ಈ ವಿಷಯವನ್ನು ಸಂಭ್ರಮಿಸಿದ್ದರು. ಈ ಜೋಡಿ ತೆರೆಯ ಮೇಲೆ ಮೋಡಿ ಮಾಡಲಿದೆ ಎಂದು ಖುಷಿ ಪಟ್ಟಿದ್ದರು. ಆದರೆ, ಆ ಖುಷಿಯು ಠುಸ್ ಪಟಾಕಿಯಾಗಿದೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿಲ್ಲ ಎಂದು ಸ್ವತಃ ಚಿತ್ರತಂಡವೇ ಸ್ಪಷ್ಟನೆ ನೀಡಿದೆ.
Web Stories