ಬೀದರ್: ಉಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ಪ್ರಧಾನಿ ಮೋದಿ ಸರ್ಕಾರ ತಾಯ್ನಾಡಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಬೀದರ್‍ನಲ್ಲಿ ಕೇಂದ್ರ ಸಚಿವ ಭಗವಂತ್ ಖೂಬಾ ತಿಳಿಸಿದ್ದಾರೆ.
ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈಗಾಗಲೇ ನಮ್ಮ ಭಾರತೀಯರನ್ನು ಏರ್‍ಲಿಫ್ಟ್ ಮೂಲಕ ಕರೆತರಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಷ್ಯಾ ಹಾಗೂ ಉಕ್ರೇನ್ ಜೊತೆ ಮಾತಾನಾಡಿ ಎಲ್ಲ ನಮ್ಮ ನಾಗರಿಕರನ್ನು ತರುವ ಕೆಲಸ ಮಾಡಲಾಗುತ್ತಿದೆ ಎಂದಿದ್ದಾರೆ.
ಯುದ್ಧ ನಡೆಯುವ ಸ್ಥಳದಲ್ಲಿ ಏರ್‍ಲಿಫ್ಟ್ ಮಾಡಲು ಕೆಲ ಸಮಸ್ಯೆಗಳು ಆಗುತ್ತವೆ. ಅದಕ್ಕೆ ನಮ್ಮ ಭಾರತೀಯರ ಸುರಕ್ಷಿತೆಗಾಗಿ ಭಾರತ ಸರ್ಕಾರ ಅಲ್ಲಿನ ಸರ್ಕಾರದ ಜೊತೆ ವಿಚಾರಗಳನ್ನು ಹಂಚಿಕೊಳ್ಳುತ್ತಿದೆ. ಯಾವುದೇ ಜೀವಕ್ಕೆ ಹಾನಿಯಾಗದಂತೆ ಈ ಸಮಯದಲ್ಲಿ ಯಾವ ನೀತಿಗಳನ್ನು ಅನುಸರಿಸಬೇಕು, ಅವುಗಳನ್ನು ಅನುಸರಿಸಿ ಭಾರತೀಯರನ್ನು ಕರೆತರುತ್ತೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ
ನಮ್ಮ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿಯನ್ನು ವಿದೇಶಾಂಗ ಕಾರ್ಯಾಲಯಕ್ಕೆ ಕಳುಹಿಸಲಾಗಿದೆ. ನಾನು ವಿದೇಶಾಂಗ ಸಚಿವರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದು, ನಾವು ಎಲ್ಲ ಭಾರತೀಯರ ಕಾಳಜಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.