ಹುಬ್ಬಳ್ಳಿ: ಯತೀಂದ್ರ (Yatindra) ಆಡಳಿತದಲ್ಲಿ ಹಸ್ತಕ್ಷೇಪ ಮಾಡತ್ತಾರೆ ಅವರು ಭಾರೀ ಭ್ರಷ್ಟರಿದ್ದಾರೆ. ಯತೀಂದ್ರರನ್ನು ಯಾಕೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಅವರನ್ನೇ ಕೇಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ಅವರನ್ನು ಟೀಕಿಸುವ ಭರದಲ್ಲಿ ಯತೀಂದ್ರ ಅವರ ಹೆಸರನ್ನು ಉಲ್ಲೇಖಿಸಿ ಸಚಿವ ಸಂತೋಷ್ ಲಾಡ್ (Santosh Lad) ಯಡವಟ್ಟು ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಮತ್ತು ಯತೀಂದ್ರ ಹೆಸರನ್ನು ಗೊಂದಲ ಮಾಡಿಕೊಂಡಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಅವರು ವಿಜಯೇಂದ್ರ ಬಗ್ಗೆ ಮಾತನಾಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: CSR ಅಂದರೆ ಕರಪ್ಟ್ ಸನ್ ಆಫ್ ಸಿದ್ದರಾಮಯ್ಯ: HDK ವಾಗ್ದಾಳಿ
Advertisement
Advertisement
ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂದು ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೇಳಗೆ ಇಳಿಸಲಾಗಿತ್ತು. ಆರ್‍ಎಸ್‍ಎಸ್ ಮತ್ತು ಕೇಂದ್ರ ಸರ್ಕಾರ ವಿಜಯೇಂದ್ರರ ಹಸ್ತಕ್ಷೇಪಕ್ಕೆ ಬೇಸತ್ತು ಬಿಎಸ್‍ವೈ ಅವರನ್ನು ಕೆಳಗಿಸಿತ್ತು. ಈಗ ಅದೇ ವಿಜಯೇಂದ್ರರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಬಿಜೆಪಿ ನಾಯಕರು ಇದಕ್ಕೆ ಉತ್ತರ ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: World Cup 2023- ಭಾರತ ಗೆದ್ದು ಬರಲಿ ಎಂದು ಬೊಮ್ಮಾಯಿ, ಹೆಚ್‍ಡಿಕೆ ವಿಶ್